
ಮೆದು ದೇಹ, ಮಧುಮೇಹದೊಳೊರಲಿದ ಜೀವ ಪಾದರಕ್ಷೆಯಿಲ್ಲದೊಂದು ಹೆಜ್ಜೆಯನಿಡಲಾಗದಾ ಓದಿಹರೊಮ್ಮೊಮ್ಮೆ ಜಾನಪದವನುದ್ಧರಿಪ ಮೊದ್ದು ಮಾತನಾಡಿದೊಡೇನುಪಯೋಗ ? ಪಾದದಚ್ಚುಳಿವಾರ್‍ದ್ರತೆಯಳಿಸಿ ಚಪ್ಪಲಡಿಯಿಟ್ಟಿರಲು – ವಿಜ್ಞಾನೇಶ್ವರಾ *****...
ಅನರಣ್ಯ ಪರಿಣಾಮದೊಳಿಂದು ಬೀಳ್ವಾ ಮಳೆಗೆಲ್ಲ ಮಣ್ ಕೊಚ್ಚಿ ಹರಿವಂತೆ ನಗರದೋದಿನ ಭರಕೆಲ್ಲ ಜಾನಪದ ಕರಗಿ ಕೆಂಪೇರುತಿರೆ ಬರಿಗಾಲ ನಡಿಗೆ ಯನುಭಾವವನೆಂತುಳಿಸುವರೋ ಬೂಟಿನುದ್ಯೋಗಿಗಳು ? ಜಾನಿಸುವೊಡಾ ಬೂಟೆ ಪದ ಮುದ್ರೆಯಳಿಸುತಿರಲು – ವಿಜ್ಞಾನೇಶ...
ಸಂಗೀತ ಸಾಹಿತ್ಯ ನೃತ್ಯ ಚಿತ್ರ ಚಲಚಿತ್ರ ವಿಂತೆಲ್ಲ ಕಲಾ ತರಂಗಗಳು ಪ್ರಕೃತಿಯಂತ ರಂಗದೊಳಗಿಂದ ಅನುರಣಿಸಿದೊಡದನು ಸುಂದರ ವೆಂದೆನಬೇಕಲ್ಲದಿದೇನನುಗಾಲ ಪೇಟೆಯೊಳು ಕರಿದೆಣ್ಣೆ ಬೋಂಡ ತಿನುತಿರಲು ಸಿಡಿದೆಣ್ಣೆ ಕಲೆಯನೈಸಿರಿ ಎನ್ನುವುದೋ? – ವಿಜ್...
ಏನಿದೆಷ್ಟೊಂದು ಸಾಹಿತ್ಯ, ಕೃಷಿ ತಂತ್ರ ಪೇಳಲಿಕೆ ಇನ್ನೊಂದಷ್ಟು ಇಳುವರಿಯನೇರಿಸುತ ಉಬ್ಬಲಿಕೆ ಧ್ಯಾನಿಸುವೊಡೊಂದಷ್ಟು ಸಾಹಿತ್ಯ ಸಾಕೆಮಾತ್ಮನಡೆ ತಿದ್ದಲಿಕೆ ಹೀನವದೆಲ್ಲ ಯತುನವು ಬಾಹ್ಯ ಪ್ರಕೃತಿಯನೆಮ್ಮಂತೆ ಮಾಡಲಿಕೆ ಊನವಲಾ ಮದ್ದಿನೊಳಾರೋಗ್ಯ ಓದಿನ...
ಅಲ್ಲೊಂದು ಇಲ್ಲೊಂದು ಸಿಕ್ಕಿದೊಂದೊಂದು ಮೌಲ್ಯದ ಬೀಜವನಿಟ್ಟು ಬೆವರನು ಕೊಟ್ಟು ನೆಲ ಜಲ ಬಲವನೇರಿಸಿಡೊಡದನು ಕೃಷಿಯೆನಲಕ್ಕು ಬಲ್ಲೊಡೆಲ್ಲ ಕೃಷಿ ನಿಯಮಗಳೆ, ಸಾಹಿತ್ಯಕ್ಕು ಒಲುಮೆ ಬರಿ ರೊಕ್ಕದೊಳಿರಲು ಕೊಳೆರೋಗವೆಲ್ಲದಕು – ವಿಜ್ಞಾನೇಶ್ವರಾ *...
ಶುದ್ಧ ಪ್ರಕೃತಿಯ ತುಂಬೆಲ್ಲ ವಿಧವಿಧದ ಸಂಗೀತ ಇದಕಿಲ್ಲವಾವುದೇ ಪಕ್ಕ ವಾದ್ಯದ ಬಡಿತ ಇದನಾಲೋಚಿಸುತೆಮ್ಮ ಮನ ಮೀಡಿತ ಎದೆ ಬಡಿತ, ಹದತಪ್ಪಿದೆಮ್ಮ ಭೀತಸಂಗೀತವನು ತಿದ್ದಿದೊಡೆಮ್ಮ ಬಾಳ ಸವಿಯುಳಿದೀತು ಖಚಿತ – ವಿಜ್ಞಾನೇಶ್ವರಾ *****...
ಅಂತರಂಗದ ದೋಷಗಳನೊಂದಷ್ಟು ಕಳೆವ ಸಂಗೀತಕಷ್ಟಿಷ್ಟು ಶಕ್ತಿ ತುಂಬುವ ಪಕ್ಕವಾದ್ಯ ದಂದದಲಿ ಮಿತಿಯೊಳಿದ್ದರೆ ಯಂತ್ರ ತಂತ್ರಗಳಾದವು ಸುಂದರ ಜೀವನಕವು ಬಲವಪ್ಪ ಹಿಡಿ ಕಾವು ಸುಂಮನುದ್ದ ಮಾಡಿದೊಡೇನು ಗುದ್ದಲಿಯ ಕಾವು – ವಿಜ್ಞಾನೇಶ್ವರಾ *****...
ಬರ ಬರದಂತಿಳೆಯ ಕಾಯುವ ಕಾನನಕೆ ಬರ ಬರಿಸಿದಬ್ಬರದ ಪೇಟೆಯೊಳೇನು ತೋರುವುದೋ ಹಲಸಿನಡುಗೆಯ ಮಾಡಿ ನೂರು ದಾರಿಗಳೂರಿಗಿರಲದು ಬೇಡೆನುವ ಕುರುಡು ಕಾಲದೊಳೆಲ್ಲ ದೀಪವು ವ್ಯರ್‍ಥ – ವಿಜ್ಞಾನೇಶ್ವರಾ *****...
ಮೇಳದೊಳು ಮೈಕಿಟ್ಟು ಕಿವಿಕುಟ್ಟಿ ಪೇಳಲು ಬೇಕೇ? ಸಾಲದೊಳು ಕೊಂಡುಂಬುದನು ಮೇಳದುನ್ನತಿ ಎನಬೇಕೇ? ಮಲೆನಾಡ ಪೇಟೆಯೊಳ್ಯಾಕಿಂಥ ದೀನ ಮೇಳದಾರೈಕೆ? ಬಲು ಬಗೆಯೊಳಾತ್ಮ ಶಕುತಿಯೊಳುಣುವಲ್ಲಿ ಏನೆಂಥ ಕೊರತೆ? ಮೇಳದೊಳಷ್ಟಿಷ್ಟು ಕರಿದ ಹಲಸಿನ ಘಮಲೆದ್ದರದು ಸಾ...
ಕಾಡನು ನಾಡು ಮಾಡಿದದಟಿನುತ್ಸಾಹದೊಳು ನಾಡನು ನಗರ ಮಾಡಿರಲಿಳಿದಂತರ್‍ಜಲದ ಪಾಡನರಿಯದೆ ಮೋಡ ಬಿತ್ತನೆ ಎಂದೊಡೇನಹುದು? ಬಡಬಡಿಸಿ ಮಲೆನಾಡ ನಗರದೊಳಿಂದು ನಡೆಸುವ ನಾಡ ಹಸು ಹಲಸು ಮೇಳಗಳಂತೆ ಮೋಡ ಬಿತ್ತನೆ ಕಂತೆ – ವಿಜ್ಞಾನೇಶ್ವರಾ *****...














