Home / ವಿ ಕೃ ಗೋಕಾಕ್

Browsing Tag: ವಿ ಕೃ ಗೋಕಾಕ್

ಅ೦ಚೆಯಂತೆ, ಕತ್ತರಿಸಿ ತೆರೆಗಳನ್ನು ಚಂಚುವಿನ೦ಚಿನಿಂದ ನಮ್ಮ ನಾವೆಯಿದು ತೆರಳುತಿದೆ ನೋಡಿರೆ! ಗರಿಗಳನು ಹರಹಿ ರವಿಕಿರಣದಿ ಹೊಳೆಯುತಿರೆ ರಾಜಹ೦ಸವಿದು ಮರಳುತಿದೆ ನೋಡಿರೆ! ಮುಗಿಲೆತ್ತರ ಧ್ವಜಸ್ಮ೦ಭವನೆತ್ತಿ, ತಾರೆಗಳ ಕೆಳಗೆ, ಪಡಿಮುಗಿಲಂತೆ ದೀಪಮಾಲ...

ಹಿಂಸಿಸುವರು ನನ್ನನ್ನು ಸಾಮ್ರಾಜ್ಯವಾದಿಯೆಂದು: ದೂಷಿಸುವರು ನನ್ನನ್ನು ಮಹಾಪಾತಕಿಯೆಂದು. ಶಕ್ತಿಹೀನರ ಉಕ್ತಿಗಳಿವು, ಬಲವಂತರ ಬಲ್ನುಡಿಯಲ್ಲ! ಪಂಜರದಿಂದ ಇಲಿಯನ್ನು ಹಿಡಿದ ಬೆಕ್ಕಿಗೆ ಹೇಳಿರಿ-ತಿನ್ನದಿರೆಂದು. ಆನೆಯ ತಲೆ-ಮುತ್ತನುದುರಿಸಲು ಕಾಲೆತ್...

ಒಂದು ಕ್ಷ್ನಣವಾದರೂ ಬಗೆದೆ ಯಂತ್ರಾಗಾರವದು ನರಕವೆಂದು. ಎಣಿಸಲಾರೆನರೆನಿಮಿಷ ಸಹ ನಾಟ್ಯಶಾಲೆಯಿದು ಸ್ಪರ್ಗವೆಂದು. ಇಂದ್ರನ ರಾಜ್ಯವಿದಲ್ಲ,-ಇಂದ್ರಿಯಗಳ ರಾಜ್ಯವಿದು, ಮಿಟಿಮಿಟಿ ಸ್ವರ್ಗ, ತ್ರಿಶಂಕುವಿನಮರಪುರಿ! ದಾರಿ ತಪ್ಪಿ ನಡೆದ ಮಾನವನು ಮೇರೆದಪ್...

ನಿನ್ನ ನದಿಗಳ ಹೆಸರು ನನಗೆ ಗೊತ್ತಿಲ್ಲ, ಓ ಫ್ರಾನ್ಸ್‌! ಆದರೆ ಇಂಥ ಚಲುವಿನ ಹೊನಲೇ ಹರಿದಿಹುದು ನನ್ನ ನಾಡಿನಲ್ಲಿ. ನಿನ್ನ ವನ-ವೃಕ್ಷಗಳ ಹೂ-ಬಳ್ಳಿಗಳ ಪ್ರೀತಿಯನು ಗಳಿಸಿಲ್ಲ ಓ ಫ್ರಾನ್ಸ್‌! ಇವನೆಲ್ಲ ನೋಡಿ ನಾನೊಸೆದ ತರುಲತೆಗಳ ನೆನಪಾಗುವದು ಮಾತ್...

ಇರಬಹುದು ಭೂಲೋಕದಲ್ಲಿ ನಂದನವನವು; ಬರಬಹುದು ಮುಗಿಲೆಲ್ಲ ನಾಳೆ ನಮ್ಮೆಡೆಗಿಳಿದು; ತರಬಹುದು ಇಂದ್ರನೈರಾವತವ ಮತ್ತೊಂದು ದಿನ ಪಾರ್ಥನಿನ್ನೊರ್ವನು! ಇನ್ನೆಲ್ಲಿ ಕಂಡಿರದು ಇಂಥ ಭೂವೈಕುಂಠ; ಮುನ್ನಡೆದು ಬಂದೆ ಸೀಜರರ ಸಾಲನು ದಾಟಿ ಘನ್ನಮಹಿಮರ ನೋಡಿ ಸಾ...

ನಿನಗಿಂತ ಕಂಪುಳ್ಳ ದ್ವೀಪಗಳಿರಬಹುದು ಕೋರ್‍ಸಿಕಾ! ಸುಗಂಧ ದೇಹಿ! ಜಾವಾ, ಸುಮಾತ್ರಾ, ಸಿಂಹಲ,-ಮತ್ತಿನ್ನನೇಕ. ನಿನ್ನಡವಿಗಿಂತ ನಿಬಿಡವಿಹ ವನಗಳುಂಟು ಲೋಕದಲ್ಲಿ. ಆದರೆ ಬೀಸಲಿಲ್ಲ ಮತ್ತೆಲ್ಲಿಯೂ ಮೂಲೋಕಕೆ ನಿನ್ನ ಕೀರ್ತಿಯನೊಯ್ವಂಥ ಗಂಧವಹನು. ಅರಳಲಿ...

ಕಾಲು ಚಾಚಿ ಕುಳಿತಿಹುದಿಟಲಿ ಭೂಮಧ್ಯ ಸಮುದ್ರದ ನಡುವೆ ಸಿಸಲಿಯೊಡನೆ ಕದನವೆಸಗಿ ಪಾದಧೂಲಿಯನದಣಕೆರಚುವಂತೆ: ಇಟಲಿಯ ಹೆಬ್ಬೊಟ್ಟಿನುಗುರಿನ ಹೊಗರ ನೋಡು! ಶೋಭಿಸುತಿಹವು ಪುರಗಳಲ್ಲಿ ನಿಡಿದಾದ ಪರ್ವತಾವಳಿಯನೇರಲು ಹವಣಿಸುವ ಸಾಹಸಿಗಳಂತೆ ಮತ್ತೆ ನಿದ್ರಿಸ...

ಮುನ್ನೀರ ಚೆಲುವನು ಮುಂಗಾಣಬಯಸಿದಲ್ಲಿ ಭೂಮಧ್ಯ ಸಮುದ್ರವನು ನೋಡು ಕಿರುಹಗಲಿನಲ್ಲಿ,- ಶರದೃತುವಿನಾರಂಭದಲ್ಲಿ! ನೂರೊಂದು ಬುರುಗಿನ ಬಳ್ಳಿಯೊಡನೆ ತಿಳ್ಳಿಯಾಡುತಿದೆ ಗಾಳಿ, ಕಳ್ಳಹೆಜ್ಜೆಯನಿಕ್ಕಿ ತೆರೆಗಳನು ತರಿದೊಡ್ಡುತಿದೆ ಸಿಂಗರಿಸಿ ಮ೦ಜಿನಂತಹ ಸೀಕ...

ಮುಗಿಲ ನೀಲಿಯ, ಮುನ್ನೀರ ಹಸಿರ, ಮರುನೆಲದ ಸುವರ್ಣ ವರ್ಣವನು,- ಒಂದೆಡೆಗೆ ನೋಡುವಾಸೆಯಿರಲು,- ನಡೆ ಸುಯೇಜಿಗೆ! ಉಸುಬಿನುದಧಿಯ ದಾಂಟಲು ನಿರ್ಮಿಸಿದ ನೀರ ಸೇತುವಿಗೆ! ಮುನ್ನೀರ ಕಾಲುವೆಯ ದಾಂಟಿಲ್ಲಿ ನಡೆಯುವಾಗ ಈ ಹಡಗವಹುದು–ಅರಣ್ಯದ ಹಡಗ! ಕಚ...

ಕೆಂಪು ಸಮುದ್ರದ ನೀರು ಕತ್ತಲೆಯಂತೆ ಕರ್‍ರಗಿರಲು ಆಫ್ರಿಕದ ಕಾಡಿಗೆಯ ಮೇಲೆ ಸಂಜೆಗೆಂಪು ಮೂಡಿತ್ತು. ಕರಿಬೆಟ್ಟಗಳ ಹೊದರಿನಲ್ಲಿ ಹುದುಗುತ್ತಿದ್ದನು ರವಿಯು. ಅಬಿಸೀನಿಯದ ಕೊಲೆ, ನಿಗರ್ವಿಗಳ ದಾಸ್ಯ, ಸುಮಾಲಿಗಳ ಕೊರಗು,- ಕಪ್ಪುಹಚ್ಚುವ ಕೃತಿಗಳಿವು,-...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...