
ಹೊಲೆಯನಾರೂರ ಹೊರಗಿರುವವನೆ ಗೆಳೆಯ? ಜಾತಿಯಿಂದಲ್ಲ ಗುಣದಿಂದಹನು ಹೊಲೆಯ ||ಪಲ್ಲ|| ಇಬ್ಬರಾಡುವ ಗುಟ್ಟು ಕದ್ದು ಕೇಳುವ ಹೊಲೆಯ, ಗಂಡಹೆಂಡಿರ ಬೇರೆ ಮಾಡುವವ ಹೊಲೆಯ| ಚಾಡಿ ಮಾತಾಡಿ ಭೇದವ ಕಲ್ಪಿಪನೆ ಹೊಲೆಯ, ಒಣಹರಟೆಯಿಂ ಕಾಲ ಕಳೆಯುನವ ಹೊಲೆಯ ||೧|| ...
(ಲಾಹೋರಿನ ಡಾ ಶೇಖ್ ಮಹಮ್ಮದ್ ಇಖ್ಬಾಲರ ಉರ್ದು ಘಜಲನ್ನು ಅವಲಂಬಿಸಿ ಬರೆದುದು) ನಮ್ಮವಳೀ ಭಾರತ ಜನನಿ ||ಧ್ರುವ|| ಭೂಮಂಡಲದಿ ರಮಣೀಯಂ ಈ ಭಾರತವೆಮ್ಮಯ ನಿಲಯಂ, ನಾವೀಕೆಯ ಮರಿದುಂಬಿಗಳು, ಈಕೆಯೆಮ್ಮ ಜೀವನನಳಿನಿ ||೧|| ನಾವೆತ್ತಲಲೆದರು ಮುದದಿ ಹೃದ...














