ರಾಜಕಾರಣ

ಏನೆ? ಏನೆ? ಏನದು? ಬಾತಿದೆ? ಕೊಳೆತಿದೆ? ಮೇಗಡೆ ಹಾರುತ್ತಿದೆ ಡೇಗೆ ನರಿಯೊಂದು ಊಳಿಡುತ್ತಿದೆ ನಾಯೊಂದು ಹೊಂಚು ಹಾಕಿದೆ ಕಾಗೆಗಳು ತಾರಾಡುತ್ತಿವೆ ಇರುವೆಗಳು ದಂಡೆತ್ತಿವೆ ನೊಣಗಳು ಗುಂಯ್‌ ಗುಡುತ್ತಿವೆ ಮಿಜಿ ಮಿಜಿ ಮಿಜಿ ಮಿಜಿ ಮೂಗು...

ಜಾತಿ ಮರ

ಎಲ್ಲಿದೆಯೋ ಬೇರು? ಚಿಗುರು ನೂರಾರು... ಯಾರು ಬಿತ್ತಿದರೋ... ಯಾರು ಬೆಳೆದರೋ... ಫಲವನ್ನಂತು ಉಣ್ಣುತಿರುವೆವು ಎಲ್ಲರೂ.... ಬೀಸಿ ಬಂದೊಮ್ಮೆ ಬಿರುಗಾಳಿ ಬುಡ ಕಡಿದು ಹೋದರೆ ಹೋಗಲಿ... ಕನಸಹುದೇ? ಹೂಂ.... ಏಳಿ ಎದ್ದೇಳಿ.... *****

ಭಯೋತ್ಪಾದಕ

ತಂದೆಗೆ ತಕ್ಕ ಮಗನಾಗಿದ್ದ ಪ್ರಿಯಳಿಗೆ ಒಳ್ಳೆಯ ಗೆಳೆಯನಾಗಿದ್ದ ತಂಗಿಗೆ ಪ್ರೀತಿಯ ಅಣ್ಣನಾಗಿದ್ದ.... ಹೂವುಗಳನು ಬೆಳೆಯುತ್ತಿದ್ದ ಹಣ್ಣುಗಳ ಮಾರುತ್ತಿದ್ದ ಇರುವೆಯಂತೆ ದುಡಿಯುತ್ತಿದ್ದ.... ದೇವರಿಗೆ ಹೋಗುತ್ತಿದ್ದ ದೀನನಾಗಿ ಬೇಡುತ್ತಿದ್ದ ದಿವ್ಯವಾಗಿ ಹಾಡುತ್ತಿದ್ದ.... ಹೇಗಿದ್ದ? ಹೇಗಾದ? ಸಾಕಾದ? ಯಾಕಾದ?...

ರಾಮ-ಕೃಷ್ಣ-ಶಿವ

ಕಚ್ಚಿ ರುಚಿ ನೋಡಿದ ಹಣ್ಣಿಗೆ ತುಟಿ ಹಚ್ಚಿದನಲ್ಲ ಆ ರಾಮ ನನಗೆ ಪ್ರಿಯನಾಗಲಿ ಒಂದಗಳು ಅನ್ನವನೆ ಉಕ್ಕಿಸಿ ಹಸಿವಿನ ಸೊಕ್ಕಡಗಿಸಿದನಲ್ಲ ಆ ಕೃಷ್ಣ ನನಗೆ ಪ್ರಿಯನಾಗಲಿ ಸತ್ತು ಒರಗಿದ ಸತಿಯ ಹೊತ್ತು ತಿರುಗಿದನಲ್ಲ ಅತ್ತು...

ಹರಿಶ್ಚಂದ್ರ ರಾಜ್ಯವಿಯೋಗ

(ಮತ್ತೇಭ ವಿಕ್ರೀಡಿತ) ಅಡಿಯಂ ಮೆಲ್ಲನಿಡುತ್ತೆ, ಕಂದು ಮೊಗಮಂ ಕೀಳೋದು, ಕಣ್ಣೀರ್ಗಳಿಂ| ಮಿಡಿದುಂ, ತಾಮೊಡವರ್ಪೆವೆಂದು ನೃಪನಂ ಬೆಂಬತ್ತಿ ಬಂದಿರ್ಪರಂ| ಜಡಿದುಂ ಜಾಡಿಸಿ, ಪಿಂದಕಟ್ಟಿ ಪುರಕಂ, ಗಾಧೇಯನುಂ ಮೂವರಂ| ಕಡುಗಲ್ತೀವಿದರಣ್ಯಮಂ ಪುಗಿಸಿದಂ - ಕೈಗೂಡಿಸಲ್ ಪಂತವಂ ||೧||...

ಹೊಲೆಯನ ಹಾಡು

ಉಳ್ಳಯ್ಯಾ, ದಯೆ ಗೊಳ್ಳಯ್ಯಾ! "ದಟ್ಟಿದಿಕ್ಕಾ! ಮಾರಿ, ಮುಂಡ, ಮುಂಡಾಳ! ಹುಟ್ಟು ಹೊಲೆಯ! ಪೋಲಾ! ಚಂಡ ಚಂಡಾಳ! ಬೊಟ್ಟೆ! ಬೊಗ್ಗುರೆ!" ಎಂದು ಹೆಸರೆತ್ತಿ ಕೂಗಿ ಮುಟ್ಟಲಂಜುತೆ ನಿಲ್ವೆ ದೂರಕ್ಕೆ ಹೋಗಿ! ಕಣ್ಣು, ಮೂಗು, ಕಿವಿ, ಕೈ,...

ಮಗಳು

ನಾ... ಗುರುತಿಸಬಲ್ಲೆ ಅವಳು, ಅವಳೇ ನನ್ನ ಮಗಳು ಮುದ್ದಾದ ಜಿಂಕೆ, ನವಿಲು ಸುರಗಿ, ರಂಜ, ಜಾಜಿ ದೇವ ಕಣಗಿಲೆ ಹೂವಿನಂತವಳು ಹಂಚಿಕೊಂಡೆವು ಪ್ರೀತಿಯ ಅಗುಳು ನೋವಿನಲ್ಲೊಂದು ಪಾಲು ನೀಡಿ ಬೇಡಿ ಪಡೆದವಳು ಬುಟ್ಟಿಯ ತುಂಬ...

ಉತ್ತಮ ರಾಜ್ಯ

"ಕಂದ, ಕೇಳುತ್ತಮದ ರಾಜ್ಯ ಒಂದಿಹುದು: ಮಂದಿ ಎಲ್ಲವು ಸುಖದಿ ಬಾಳುತ್ತಲಿಹುದು;" ಎಂದು ನೀನಾಡುವಾ ರಾಜ್ಯವೆಲ್ಲಿಹುದು? ಕಂದನಲಿ ಕರುಣಿಸುತ ಇಂದು ತಿಳಿಸಮ್ಮಾ! "ಕಿತ್ತಳೆಯ ಮರಗಳಲಿ ಹೂಗಳರಳುತ್ತ ಎತ್ತಲೂ ಮಿಂಚುಹುಳು ಚಿಮ್ಮಿ ಕುಣಿಯುತ್ತ, ಮುತ್ತಿಕೊಂಡಿಹ ದೇಶದೊಳಗಿಹುದೆ ತಾಯೆ!"...
cheap jordans|wholesale air max|wholesale jordans|wholesale jewelry|wholesale jerseys