ಹಡೆದವ್ವನ ನೆನಪು

ಹಾದಿ ಬೀದಿಯ ಗುಂಟ ತಂಪು ನೆರಳಿನ ಸಾಲು ತಂಗಾಳಿ ತೀಡಿ, ಮುಂಗುರುಳು ಮೋಡಿ ಮಲ್ಲಿಗೆಯ ನರುಗೆಂಪು ಬಾನಾಡಿ ನುಡಿ ಇಂಪು ಹಡೆದವ್ವ್ನ ನೆನಪು ನೂರ್ಕಾಲ ತೌರೂರ ಬಾಳೆ ತೊಯ್ದಾಟ ನೋಡು ಕಣ್ಣೂರ ಮನೆಯಲ್ಲಿ ಹನಿಗೂಡಿ...

ಗೋಡೆ

ಗೋಡೆ ಗಟ್ಟಿಯಿದ್ದರೆ ಎಷ್ಟು ಬೇಕಾದರೂ ಯಾವಾಗ ಬೇಕಾದರೂ ಬಣ್ಣ ಬಳಿಯಬಹುದು ಅಮ್ಮನ ಬುದ್ದಿವಾದ. ಅದೇಕೋ ಅಕ್ಕ ಅಸಹಾಯಕಳಾಗಿ ಕುಸಿದು ಕೂತಿದ್ದಾಳೆ. ಚೊಚ್ಚಿಲ ಹೆರಿಗೆ ಶಿವನ ಪಾದ ಸೇರಿದೆ ಕಂದ. ಹಸಿಗೋಡೆಗೆ ಬಣ್ಣ ನಿಲ್ಲದು ಅಪ್ಪ...

ತಟ್ಟಿಯೊಳಗಿನ ಹಾಡು

ನನ್ನ ಕೊಟ್ಟಿದ್ದು ಉಪ್ಪುಗಂಜಿಗೂ ತತ್ವಾರ ತಟ್ಟಿ ತಬ್ಬಲಿಯ ಗೂಡು ಎಂದು ನಿಟ್ಟುಸಿರೇ ಉಸಿರಾಗಿತ್ತು. ಬೆಟ್ಟಕ್ಕೆ ಹೋಗಿ ಸೊಪ್ಪು ತರುವಾಗಿನ ಸಮಯವೆಲ್ಲಾ ಹನಿಹನಿಯ ಉದುರಿಸಿ ನಯನಗಳು ಕೊಳಗಳಾಗಿತ್ತು. ಸೆಗಣಿ ಸಾರಿಸಿ ತೆಗೆದು ಗಂಜಳ ಬಗೆದು ಬೆರಣಿ...

ಅಪ್ಪ ಕೊಡಿಸಿದ ಅಂಗಿ

ಅದು ನನ್ನದಲ್ಲದ ಅಂಗಿ ಅದರೆ ಇಂಚಿಂಚೂ ಮೆಚ್ಚುಗೆ ಆದದ್ದು ಸುಳ್ಳಲ್ಲ. ಬಯಸಿದ್ದು ಕನವರಿಸಿದ್ದು ಅದಕ್ಕಾಗೇ ಇಲ್ಲ, ಬಿಟ್ಟುಬಿಡು, ನಿನ್ನ ಮೈಬಣ್ಣಕ್ಕೆ ಒಪ್ಪಿಗೆಯಾಗದು ಅಮ್ಮನ ತಕರಾರು. ಮುನಿಸಿಕೊಂಡೆ, ಮಾತು ಬಿಟ್ಟೆ, ಮತ್ತೆ ಮತ್ತೆ ನೋಡಿಬಂದೆ. ಕಿವಿಗಿಳಿದರೂ...

ಹತ್ತು ಹಾಯ್ಕುಗಳು

೧ ಈ ಕದಡಿದ ಕೊಳ ತಿಳಿಯಾಗುವುದಿಲ್ಲ. ಯಾಕೆಂದರೆ ಅದು ಸ್ಫಟಿಕಜಲದಾಗರವಲ್ಲ ಕೆಂಪು ಕೆಂಪು ಓಕುಳಿಯ ಸುರಿಸುವ ಸಂತೆ ೨ ಬಿಳಿತೊಗಲಿನ ಗೋಡೆಯ ಮೇಲೆ ಬೆಳೆಯುತ್ತಿದೆ ಊರು ನಗರ ಕೆತ್ತಸಿಕೊಂಡ ಮುಖಗಳಲ್ಲಿ ಮಾರ್ದವತೆಯಿಲ್ಲ. ೩ ತರು...

ಗೌರಿಯಾಕಳು ಮತ್ತು ನಾನು

ಕರೆಮೊಗೆಯ ಹಿಡಿದು ಹೊರಟೆ ಕೈಗೊಂದಿಷ್ಟು ಗೌರಿಯಾಕಳ ಹಾಲಿನ ತುಪ್ಪ ಸವರಿ ಕರು ಮೆಲ್ಲುತ್ತಿತ್ತು ಹುಲ್ಲು ಅಂಬಾ ಎನ್ನುತ್ತ ದಾಂಬು ಎಳೆಯತೊಡಗಿತ್ತು ವಾಸನೆ ಗೃಹಿಸಿ, ದುಣಕಲು ತುಂಬಿದ ಹುಲ್ಲು ರುಚಿಯಿಲ್ಲ ತೊಳಕಲು ಅಕ್ಕಚ್ಚು ಮೆಚ್ಚಿಲ್ಲ. ಅಚ್ಚು...

ನೆಲಮುಖಿ

ಕಲ್ಲು ಗುಡ್ಡದಲ್ಲೂ ಕದರು ಕಂಡವರು ಹಾಗಾಗೆ ಬರಡು ಭೂಮಿ ಈಗ ನಂದನವನ ದಾರಿಹೋಕರಿಗೆ ಹೊರಗಿನ ಚೆಂದ ಕಾಣುವುದಷ್ಟೇ ಆದರೆ ಅವರುಂಡಿದ್ದು ಬರಿಯ ಕಷ್ಟ-ನಷ್ಟ ಮಾತ್ರ ಬಿತ್ತುವುದಿಲ್ಲ ಎನ್ನುತ್ತಾ ಮತ್ತೆ ಬಿತ್ತಿದರು, ಊಳಿದರು ಅರಿ ಮಾಡಿದರು...

ಜಗತ್ತು @ ೨೦೩೦

ಮರ ಮರ ರಾಮ ರಾಮ ತರವೇಹಾರಿ ತರಕಾರಿ ತಂಪುನೆಲ ತಂಗಾಳಿ ಬರೀ ಸಾಕ್ಷ್ಯಚಿತ್ರ. ಮುಖಕ್ಕೆ ಆಮ್ಲಜನಕದ ಕೋಶ ಹೊತ್ತ ಲಲನೆಯರು ಸಂತೆಯಲ್ಲಿ ಮೈಬಣ್ಣಕ್ಕೊಪ್ಪುವ ಕೋಶದ ಹುಡುಕಾಟದಲ್ಲಿ. ಭೂಮಿಮಗನ ಬೆವರಹನಿ ಸುಡು ಪ್ಲಾಸ್ಟೀಕು ಅಕ್ಕಿಯ ಉಂಡು...

ಮುರಿದ ವಾದ್ಯದ ರಾಗ

ಅದೊಂದು ಅಸಂಗತ ಸಂಪರ್ಕ ಅಸಂಬದ್ಧ ಯಾರದೋ ಸಂತೃಪ್ತಿ, ಯಾರಿಗೋ ಸೌಭಾಗ್ಯ ಬರೆದ ಬ್ರಹ್ಮನಿಗೇನು ಗೊತ್ತು? ತಾಳತಂತಿಗಳಿಲ್ಲದ ವಾದ್ಯ ನುಡಿಸಲಾಗದು: ಆದರೂ ನುಡಿಸಿದವು ಅರ್ಧಮರ್ಧ, ಅಷ್ಟಕಷ್ಟೆ. ಮತ್ತೆ ಕಳಚಿ ಬೀಳುವ ಹಂತ ಸರಿಗೆಗಳು ಸುತ್ತಿಕೊಳ್ಳುತ್ತ ಗಾಢವಾಗುತ್ತ...

ವೇಮುಲನಿಗೊಂದು ಪ್ರಶ್ನೆ

ಜಗದೊಳಗೆ ಹುಟ್ಟಿಬೆಳೆದರೂ ಜನರೊಳಗೆ ಬೆಳೆಯುವುದೇ ಸಾಧನೆ ವೇಮುಲ. ಇಲ್ಲದ ಮೂಲದಲ್ಲೇ ಹುಟ್ಟಿದರೂ ಇಲಾಖೆಗಳನ್ನೇ ಕಟ್ಟಬಲ್ಲವರು ಇಲ್ಲಿಹರು ಇದ್ದರಮನೆಯ ಮಾರಿ ತಿಂದವರು ಇಹರು ಪರಿಪರಿಯ ಪಂಡಿತರು, ಪಾಮರರು, ಅರೆಬರೆಯ ಶಿಕ್ಷಿತರು ಎಲ್ಲರ ಗೂಡಲ್ಲವೇ ಇದು ನಮ್ಮತನದ...
cheap jordans|wholesale air max|wholesale jordans|wholesale jewelry|wholesale jerseys