ವರ್ತಕರು

ಮಾರ್ಬಲ್ ಹುಡುಗರ ಹುಡುಗಾಟ ಹುಡುಗಿಯರ ಮಲ್ಲಿಗೆಯ ನಗು ತುಂಟಾಟ ವೆನಿಸ್ಸಿನ ನೀರಿನಲೆಯೊಳಗೆ ತುಂಬಿ ವೈನ್ ಕುಡಿದ ಬೋಟಿನಲುಗಾಟ ವರ್ತಕರಂತೆ ಮುಂದಿನೂರಿಗೆ, ಕಣ್ಣರೆಪ್ಪೆಯೊಳಗೆ ಚಂದ್ರ ತುಂಬಿ ನರಳಾಟ ಮತ್ತೆ ಸ್ಥಬ್ದಕೆ ಇಲ್ಲಿ ಡ್ರಿಂಕ್ಸ್, ಎಚ್ಚರ ತಪ್ಪಿ...

ಕ್ಷಮಿಸು ತಂದೆ

ಎಲ್ಲರೆದೆಯೊಳಗೂ ಬಿರುಕಿನ ಗೋಡೆಗಳು ಅದೇಕೆ ಅಷ್ಟಷ್ಟು ಎತ್ತರ ಇಷ್ಟಿಷ್ಟು ಅಗಲ ಅಷ್ಟೊಂದು ಆಳ ಕೊಳ್ಳ ಕಣಿವೆಗಳು ಭಾವನೆಗಳ ತಳಪಾಯ ಅಭದ್ರ ಕೃತಕ- ದೇವರೆ! ಯುಗಯುಗಾಂತರದ ತಿರುವು ಹೊರಳು ಗಳೊಳಗೂ ಇತ್ತು ಬಿತ್ತಿ ಬೆಳೆವ ಪ್ರೀತಿ...

ಸ್ಥಿತ್ಯಂತರ

ಮೊದಮೊದಲೆಲ್ಲ ಈ ಮೋಡಗಳೊಳಗೆ ಬರೀ ಕಾವಿಧರಿಸಿ ಕಮಂಡಲ ಹಿಡಿದು ಋಷಿ ಮುನಿಗಳ ಸಮೂಹವೇ ಬಂದಂತಾಗಿ ಭೂ ಲೋಕದವರಿಗೆ ನೀರು ಸಿಂಪಡಿಸಿ ಸತ್ತವರನು ಉಳಿಸಿ ಆಶೀರ್ವದಿಸುವವರು ಕಾಣಿಸುತ್ತಿದ್ದರು- ನಂತರ ನಂತರ ಬುದ್ಧ, ಗಾಂಧಿ, ಹೀಗೆ ಹೀಗೆ-...

ಶಾಂತಿಗಾಗಿ

ಆಕಾಶಮಾರ್ಗದಲ್ಲಿ ಗಾಂಧಿಹೊರಟಿದ್ದು ಕಂಡೆ ಇದು ಡಿಸೆಂಬರ ಚಳಿಗಾಲ ಬೆಚ್ಚಗೆ ಹೊದ್ದುಕೊಂಡು ನಡಿಬಾರ್‍ದಾ ಹುಚ್ಚಪ್ಪಾ ಎಂದೆ ಎಲ್ಲಿಯ ಚಳಿ ಎಲ್ಲಿಯ ಮಳೆ ಎಲ್ಲರೆದೆ ಹೊತ್ತಿ ಉರಿಯುವಾಗ ನನ್ನದೇನು ಬಿಡು..... ಎನೇನೋ ಗೊಣಗುತ್ತಾ ವಿಮಾನ ಹಿಂದಿಕ್ಕುವಂತೆ ಬರಿಗಾಲಲ್ಲಿ...

ಅಮರಾವತಿ

ಕುತೂಹಲದ ಹೃದಯ ಕಣ್ಣು ಮನಸು ಒಮ್ಮಿಂದೊಮ್ಮೆಲೆ ಕಕ್ಕಾಬಿಕ್ಕಿ ಲಂಡನ್ ಸಡಗರದ ಕನಸು ನನಸಾಗುವ ಹತ್ತಿರ ಹತ್ತಿರದ ಸಮಯ ಸಂಭ್ರಮದ ವಿದ್ಯುತ್ ಸಂಚಾರ ಒಳಗೊಳಗೇ.... ಸಖಿಯ ಉಲಿತ ಕೆಲವೇನಿಮಿಷ ನಗರದಮೇಲೆ ಹಿಮಾಚ್ಫಾದನೆ ಮೈನಸ್ ಸೆಲ್ಸಿಯಸ್ ಹಿತ್ರೋಗೆ...

ಮೇಘ(ನಾ)

ಒಂಬತ್ತೂ ತಿಂಗಳು ಶಾಂತ-ಪ್ರಶಾಂತ ಮೇಘನಾ ಹತ್ತನೆಯ ತಿಂಗಳು ಯಾಕಿಷ್ಟೊಂದು ಮುಖ ಕಪ್ಪಿಟ್ಟಿತು ಬೇನೆ ಸುರುವಾಯಿತೆ ರಾಣಿ? ಸಮಾಧಾನಿಸಿಕೋ ಸಮಯ ಬರುತ್ತದೆಯಲ್ಲ ಹತ್ತಿರ ಮಡಿಲು ತುಂಬಲು ಕಾತರಿಸಿದ ಕುಡಿಗೆ ಮುದ್ದಿಡಲು ಎಷ್ಟೊಂದು ಬೆವರ ಹನಿಗಳು ಮುಖ...

ಹೊರಟಿದ್ದೇನೆ ಕುಬೇರನ ದೇಶಕ್ಕೆ

ಹೊರಟಿದ್ದೇನೆ ಕುಬೇರನ ನಾಡಿಗೆ ಅಲ್ಲಿ ಏನೆಲ್ಲ ಇದೆಯಂತೆ ಅದೊಂದು ಮಾಯಾ ಪೆಟ್ಟಿಗೆಯಂತೆ ಬೇಕೆಂದದ್ದೂ ಬೇಡವೆಂದದ್ದೂ ಕಾಣುತ್ತದಂತೆ ಸುಮ್ಮನೆ ಕನಸು ಕಾಣಬಾರದಂತೆ; ಮೈ ಮನಸುಗಳೆಲ್ಲೆಲ್ಲಾ ಕಚಗುಳಿ ಕುತೂಹಲ ವಿಚಿತ್ರವಲ್ಲದೇ ಮತ್ತಿನ್ನೇನು- ಕಣ್ಣಿಗೆ ಎಣ್ಣೆ ಹಾಕಿಕೊಂಡೇ ಕಿಟಕಿಯ...

ಗೂಡಿಂದ ಗೂಡಿಗೆ

ನಿನ್ನೆ ಮೊನ್ನೆಯೇ ಮದುವೆಯಾದಂತಿದೆ ಆಕೆಯ ಕೈಮೇಲಿನ ಮೆಹೆಂದಿ, ಹಸಿರುಬಳೆ ಕಾಲುಂಗುರ ಗರಿಗರಿಯಾದ ಸೀರೆ- ಆತನ ಮುಂಗೈ ರೇಶ್ಮೆದಾರ ಮದುವೆಯ ಥ್ರೀ ಪೀಸ್ ಸೂಟು. ಹನಿಮೂನಿಗೆ ಸಮಯವೇ ಇಲ್ಲವೆಂದಾಗಿದ್ದರೆ ಇಲ್ಲಾದರೂ ಒಂದಿಷ್ಟು ಪ್ರೀತಿ ಮಾತು ಮುತ್ತು...

ರಾಜ ಹಂಸಗಳು

ಹರ್ಷವರ್ಧನ, ಚಾಲುಕ್ಯ, ಅಶೋಕ ಮೌರ್ಯ..... ಏರ್‌ಫ್ರಾನ್ಸ್, ಬ್ರಿಟೀಷ್ ಏರ್‌ವೇಸ್, ಸ್ವಿಸ್‌ಏರ್‍ ರಾಯಲ್‌ಡಚ್, ಸ್ಕೆಂಡಿನೇವಿಯಾ, ಕೆಥೆಫೆಸಿಫಿಕ್..... ಒಂದಕ್ಕಿಂತ ಒಂದು ಚೆಂದದ ಅಂದದ ಹೆಸರುಗಳು ಈ ರಾಜಹಂಸಗಳು ನನ್ನ ಪಯಣದ ಜಂಬೋ ಸವಾರಿಗಳು. ಕಾರ್ಪೇಟ್ ಮೆಟ್ಟಲೇರಿ ಒಳಹೊಕ್ಕರೆ...

ಮಳೆರಾಜ ಬಂದಾನು

ಮಳೆರಾಜ ಬಂದಾನು ಭೂರಮೆಯ ಕರೆದಾನು ನಕ್ಕಾನು ಕೂಡ್ಯಾನು ಬಿತ್ಯಾನು ಬೀಜ ಕಿಲಕಿಲನೆ ನಕ್ಕಳು ಕೆರೆಕೊಳ್ಳ ತುಂಬಿತು ಉಕ್ಕಿ ಹರಿದಾವು ಹೊಳೆಹಳ್ಳ ಹದವಾದ ಭೂರಮೆಯ ಬಸಿರು ಉಬ್ಬುಬ್ಬಿ ಕ್ಷಣಕೊಂದು ಬೇನೆ ಕೊಟ್ಟಾಳ ಬೋಡು ಬೆಟ್ಟಗಳು ಚಿಗಿತಾವ...
cheap jordans|wholesale air max|wholesale jordans|wholesale jewelry|wholesale jerseys