ಆರಂಕುಶಮಿಟ್ಟೊಡಂ

ನಾವು ಮಾಂಪಿಲಿಯೇಗೆ ತಲುಪುವಾಗ ಸಂಜೆ ಆರೂವರೆ ದಾಟಿತ್ತು. ಅಂದು ಎಪ್ರಿಲ್‌ ಹತ್ತೊಂಬತ್ತು, ಶನಿವಾರ. ವಾರಾಂತ್ಯದಲ್ಲಿ ಫ್ರೆಂಚರು ತಮ್ಮ ಮನೆಗಳಲ್ಲಿ ಅತಿಥಿಗಳನ್ನು ಇರಿಸಿಕೊಳ್ಳಬಯಸುವುದಿಲ್ಲ ಎನ್ನುವುದು ಈಗಾಗಲೇ ನಮಗೆ ಅನುಭವವೇದ್ಯವಾಗಿತ್ತು. ಕಾರ್ಯಕ್ರಮ ಪಟ್ಟಿಯ ಪ್ರಕಾರ ಹತ್ತೊಂಬತ್ತು ಮತ್ತು...

ಇದು ಎಂಥಾ ಲೋಕವಯಯ್ಯ ?

ಮಜಾಮೆಯಿಂದ ಕ್ಯಾಸ್ತೆಲ್‌ನೂದರಿಗೆ ((CASTELNAUDARY)) ಸುಮಾರು 125 ಕಿ.ಮೀ. ದೂರ. ತುಲೋಸಿನಿಂದ ಮೆಡಿಟರೇನಿಯನ್‌ ವರೆಗಿನ ದ್ಯುಮಿದಿ ಕಾಲುವೆಯಲ್ಲಿ ಬಂದರೆ ಕ್ಯಾಸ್ತೆಲ್‌ನೂದರಿಗೆ ತುಲೋಸಿನಿಂದ ಸುಮಾರು 175 ಕಿ.ಮೀ. ದೂರ. ಕ್ಯಾಸ್ತೆಲ್‌ನೂದರಿ ಪುಟ್ಟ ಪಟ್ಟಣ. ಫ್ರಾನ್ಸ್‌ನ ಪುಟ್ಟ ಮ್ಯಾಪಿನಲ್ಲಿ...

ಯಾರಿಗೆ ಯಾರುಂಟು ?

ಎಪ್ರಿಲ್‌ ಹನ್ನೊಂದರಂದು ಹೋಟೆಲ್‌ ಟರ್ಮಿನಸ್‌ನಲ್ಲಿ ಫಲಾಹಾರ ಮುಗಿಸಿ ನಾವು ಫಿಜೆಯಾಕ್‌ ಬಿಟ್ಟಾಗ ಬೆಳಗ್ಗಿನ ಒಂಬತ್ತೂವರೆ ಗಂಟೆ. ಹಿಂದಿನ ರಾತ್ರೆ ಫಿಜೆಯಾಕಿನ ಮಧ್ಯಯುಗೀನ ಕಟ್ಟಡವೊಂದರಲ್ಲಿನ ಲಾ ಫುಯಸ್‌ ಲೊರೇಲ್‌ ರೆಸ್ಟಾರೆಂಟ್‌ನಲ್ಲಿ ನಾವು ಫಿಜೆಯಾಕಿನ ರೊಟೇರಿಯನ್ನರಿಗೆ ಭಾರತದ...

ಸ್ಮರಣೆಯೊಂದೇ ಸಾಲದೆ ?

ಅಲಿಪ್‌ಗೆ ತುಲೋಸಿನಿಂದ ಸುಮಾರು ಎಪ್ಪತ್ತು ಕಿಲೋಮೀಟರ್‌ ದೂರ. ಇದು ತಾರ್ನ್‌ ಪ್ರದೇಶದ ಪ್ರಮುಖ ನಗರ. ತಾರ್ನ್‌ ಒಂದು ನದಿಯ ಹೆಸರು. ತುಂಬಾ ಚೆಲುವಿನ ತಾರ್ನ್‌ ನದಿ ಸಾಹಸಿ ಫ್ರೆಂಚರ ಜಲಕ್ರೀಡೆಗಳಿಗೆ ಇಂಬು ನೀಡುತ್ತದೆ. ನದಿ...

ಹೇಳತೇನ ಕೇಳ

ಪ್ಯಾರಿಸ್ಸಿನಿಂದ ಬೆಳಗಿನ ಎಂಟೂವರೆಗೆ ನಾವೇರಿದ ಇಂಟರ್‌ ಯುರೋಪು ವಿಮಾನ ಫ್ರಾನ್ಸಿನ ದಕ್ಷಿಣದ ಮಹಾನಗರ ತುಲೋಸಿನಲ್ಲಿಳಿದಾಗ, ಸರಿಯಾಗಿ ಒಂಬತ್ತೂ ಮುಕ್ಕಾಲು. ಅಲ್ಲಿ ತಪಾಸಣೆಯ ಕ್ಷಿರಿಕ್ಷಿರಿಗಳೇನಿರಲಿಲ್ಲ. ದ್ವಾರದಲ್ಲಿ ನಮಗಾಗಿ ಕಾದಿದ್ದ ಜುವಾನ್‌ಬುಯೋ ದೂರದಿಂದಲೇ ನಗುವಿನೊಡನೆ ಕೈ ಬೀಸಿದ....

ದಂಡು ಬಂತಯ್ಯ

ಏರ್ ಪ್ರಾನ್ಸ್ ವಿಮಾನ ಕಾರ್ಗತ್ತಲೆಯನ್ನು ಸೀಳಿಕೊಂಡು, ಮುಂಬಯಿಯ ಸಹಾರಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಬಿಟ್ಟು ಪಶ್ಚಿಮಾಭಿಮುಖವಾಗಿ ಹಾರಿದಾಗ ಮಧ್ಯರಾತ್ರಿ ಹನ್ನೆರಡು ಗಂಟೆ ಇಪ್ಪತ್ತೈದು ನಿಮಿಷ. ಆಗ ಫ್ರಾನ್ಸಿನಲ್ಲಿ ರಾತ್ರೆ ಏಳೂ ಐವತ್ತೈದು. ನಮ್ಮ ವಿಮಾನ...

ಸೀಮೋಲ್ಲಂಘನದ ಸಿದ್ಧತೆಯಲ್ಲಿ

ನಡುರಾತ್ರಿಯ ಹನ್ನೊಂದೂವರೆ. ಮುಂಬಯಿಯ ಸಹಾರಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಗಲೇನು ರಾತ್ರಿಯೇನು ಎಲ್ಲವೂ ಒಂದೇ. ಇನ್ನು ನಲುವತ್ತು ನಿಮಿಷಗಳಲ್ಲಿ ನಾನು, ಗುರು, ಅನಿತಾ, ಎಲೈನ್‌ ಮತ್ತು ಹೆಬ್ಬಾರ್‌ ಏರ್‌ ಫ್ರಾನ್ಸ್‌ ವಿಮಾನದ ಗರ್ಭದಲ್ಲಿರುತ್ತೇವೆ. ಪ್ರಥಮ...

ದೂರ ಬೆಟ್ಟದ ಮೇಲೆ

ಆ ಹಾದಿಯಲ್ಲಿ ಪಯಣಿಸುವಾಗ ಅದೆಷ್ಟು ಬಾರಿ ಆ ಬೆಟ್ಟ ಸಾಲುಗಳನ್ನು ನೋಡಿದ್ದೆನೊ? ಸುಳ್ಯದಿಂದ ಮಡಿಕೇರಿಗೆ ಹೋಗುವಾಗ ಸಂಪಾಜೆ ದಾಟಿದ ಮೇಲೆ ಎಡಭಾಗದಲ್ಲಿ ಕಾಣಸಿಗುತ್ತವೆ ಅವು. ಭತ್ತ ರಾಶಿ ಹಾಕಿದಂತೆ ಸೂರ್ಯನ ಬೆಳಕಲ್ಲಿ ಬಂಗಾರ ವರ್ಣದಿಂದ...

ಕಾಲಾಳುಗಳು ಕಲ್ಲಾಳಕ್ಕೆ

ಕಲ್ಲಾಳದ ಜಲಪಾತ ಇನ್ನೂ ದೊಡ್ಡದು. ಅಲ್ಲಿಗೆ ಹೋಗುವುದಾದರೆ ಬೆಳಗ್ಗಿನ ತಿಂಡಿ ಮತ್ತು ಮಧ್ಯಾಹ್ನದ ಊಟದ ವ್ಯವಸ್ಥೆ ನಮ್ಮ ಮನೆಯಲ್ಲಿ ಮಾಡಬಹುದು. ನಾಯಕ ಪಾವನಕೃಷ್ಣ ಎರಡುಮೂರು ಆಮಿಷಗಳನ್ನು ಒಮ್ಮೆಗೇ ಒಡ್ಡಿದಾಗ ಮನಸ್ಸು ತಡೆಯದಾಯಿತು. ವಿಷಯವೆಂಬ ಹಸುರನೆನ್ನ...

ನಾಟಿ ಕಲ್ಲನು ದಾಟಿ ಇಳಿದು ಬಾ

'ಈ ಬಾರಿ ನಾವು ಮೂರು ಜಲಪಾತ ನೋಡಲಿಕ್ಕಿದ್ದೇವೆ ಸರ್‌. ಇವು ದೇವರಗುಂಡಿಗಿಂತಲೂ ರೋಮಾಂಚಕ' ಎಂದು ಹೇಳಿ ನಾಯಕ ಪಾವಕೃಷ್ಣ ನನ್ನಲ್ಲಿ ಇನ್ನಿಲ್ಲದ ಕುತೂಹಲ ಮೂಡಿಸಿಬಿಟ್ಟ. ಅವು ಅಕ್ಟೋಬರ ತಿಂಗಳ ಕೊನೆಯ ದಿನಗಳು. ಈ ಬಾರಿ...
cheap jordans|wholesale air max|wholesale jordans|wholesale jewelry|wholesale jerseys