ನಮಗೆ ಗೊತ್ತು

ಕೂಡಲೇ ಏನಾದರೂ ಮಾಡಬೇಕು... ಇದಿಷ್ಟು ನಮಗೆ ಗೊತ್ತು. ಅದಕ್ಕಿನ್ನೂ ಕಾಲ ಬಂದಿಲ್ಲ. ಈಗ ತಡವಾಗಿದೆ. ನಮಗೆ ಗೊತ್ತು. ನಾವು ತಕ್ಕಮಟ್ಟಿಗೆ ಅನುಕೂಲಸ್ಥರು ಹೀಗೇ ಬದುಕುತ್ತೇವೆ ಇದರಿಂದೆಲ್ಲಾ ಏನೂ ಫಲವಿಲ್ಲಾ, ನಮಗೆ ಗೊತ್ತು. ನಮಗೆ ಗೊತ್ತು,...

ನಿದ್ರೆಯ ರೂಪಗಳು

ನಿದ್ರೆಯ ಸ್ಪಟಿಕ ಸ್ಪಷ್ಟ ರೂಪಗಳೇ ಭಾಷೆಯ ನೆರಳಲ್ಲಿ ತಳೆದ ಆಕಾರಗಳೇ ನನ್ನದೇ ರಕ್ತ ಹಂಚಿಕೊಂಡ ಜೀವಿಗಳೇ ನನ್ನ ಪ್ರಜ್ಞೆಯ ನರ ನಾಡಿಗಳ ಬಂದರು ಮಾಡಿಕೊಂಡ ಬಿಂಬ ರೇಖೆಗಳೇ ನನ್ನ ದುಃಖ ನನ್ನನ್ನು ತೊರೆದು ನಿಮ್ಮನ್ನು...

ಹೀಗಾಯಿತು

ಅವಳ ಬೆರಳಾಡಿ ಬಣ್ಣಹೂವಾಗುತ್ತದೆ. ಅವಳ ಮೈ ತನ್ನದೇ ನೆನಪುಗಳಲ್ಲಿ ಅರಳುತ್ತದೆ. ಅವಳಿಗೆ ಸದಾ ಕೆಲಸ- ನಮ್ಮ ಮದುವೆ ಉಡುಪು ಹೊಲಿಯುವುದೊಂದೇ, ಪಕ್ಷಿಯ ಹಾಗೆ ಸದಾ ನಮಗೆ ತಿನ್ನಲು ಆಹಾರ ಹುಡುಕುವುದೊಂದೇ. ಬದುಕಲ್ಲಿ ಮುಳ್ಳುಗಳಿದ್ದರೆ ಅವಳೇ...

ದೇವತೆಗಳನ್ನು ಕುರಿತು ಒಂದು ಹೋಂವರ್‍ಕ್ ಪದ್ಯ

ಪತಿತ ದೇವತೆಗಳು - ನೀರೊಲೆಯಿಂದ ಹಾರಿದ ಬೂದಿ ಕಣಗಳು, ಸೀದ ಅನ್ನದ ನಡುವೆ ಸಿಕ್ಕುವ ಕೋಸಿನ ಎಲೆಗಳು, ಕೆಂಪು ಬಳಿದ ಅಲಿಕಲ್ಲುಗಳು, ಚಿನ್ನದ ನಾಲಗೆಯಲ್ಲಿ ನೀಲಿ ಜ್ವಾಲೆಗಳು. ಪತಿತ ದೇವತೆಗಳು- ಇರುವೆಗಳು, ಸತ್ತವರ ಉಗುರ...

ದಿನಗಳು

ದಿನಗಳು ಇರುವುದು ಯಾಕೆ? ನಾವು ಬದುಕಿರುವುದೆ ದಿನದಲ್ಲಿ. ಬರುತ್ತವೆ, ಬಂದು ಎಬ್ಬಿಸುತ್ತವೆ, ದಿನವೂ ಬದುಕಿರುವಷ್ಟು ದಿನವೂ ನಾವು ಸಂತೋಷವಾಗಿರುವುದಕ್ಕೆ. ದಿನಗಳೆ ಇರದಿದ್ದರೆ ಜೀವ ಇರುವುದೆಲ್ಲಿ? ಆಹಾ, ಈ ಪ್ರಶ್ನೆ ಎದ್ದತಕ್ಷಣ ಉತ್ತರ ಹೇಳಲು ಡಾಕ್ಟರು,...

ಇವನು

ನನಗೆ ಗೊತ್ತು, ಈ ದೊಡ್ಡ ಕತೆ: ನಾನು ನೆಪೋಲಿಯನ್, ನಾನು ಏಸು ಎಂದು ಕಲ್ಪಿಸಿಕೊಂಡ ಹುಚ್ಚ ಕರುಣಾಜನಕ ಜೀವಿಗಳ ಉನ್ಮಾದ, ವಿಕೃತಿ. ಸುದೀರ್ಘ ಕೇಶರಾಶಿ ಬೆಳೆಸುತ್ತ ಮಂಡೆ ಬೋಳಿಸುತ್ತ ಕನಸು ಗಪಗಪ ತಿನ್ನುತ್ತ, ಸತ್ಯದ...

ಮನೆ

ಮನೆಗೆ ಎಷ್ಟೊಂದು ನೋವು. ಇದ್ದವರು ಬಿಟ್ಟು ಹೋದಾಗ ಹೇಗಿತ್ತೋ ಹಾಗೇ ಇದೆ. ಇದ್ದವರ ಸುಖಕ್ಕೊಗ್ಗುವಂತೆ ಆಕಾರ ಪಡೆದು ಅವರು ಮತ್ತೆ ಬಂದಾರೋ ಎಂದು, ಬರಲಿ ಎಂದು, ಹಾಗೇ ಉಳಿದಿದೆ. ಅವರು ಬಾರದೆ, ಸುಖಪಡಿಸಲು ಯಾರೂ...

ಕೋರಿಕೆ

ನೆರಳಲ್ಲಿ ನಿಂತು, ಸಾವಿರಬಾರಿ, ಇದೆಲ್ಲ ನಡೆಯುವುದು, ನೋಡಿದ್ದೇನೆ. ಕಳ್ಳತನ ಮೊದಲು, ಕೊಲೆ ಆಮೇಲೆ, ಮಾನಭಂಗ, ನಂತರ ಕುರುಡು ಕೈಯ ದಾರುಣ ಕೃತ್ಯಗಳು. ಪ್ರತಿ ಬಾರಿ ಹೊಸತಾಗಿ ಪ್ರಾರ್ಥಿಸಿದ್ದೇನೆ, ಇಲ್ಲವೆ ಹಳೆಯ ಪ್ರಾರ್ಥನೆಯನ್ನೆ ಹೊಸದಾಗಿ ಹೇಳಿದ್ದೇನೆ....

ಸಂಗೀತ

ಸಂಗೀತ : ಪ್ರತಿಮೆಗಳ ಉಸಿರಾಟ; ಚಿತ್ರಗಳ ನಿಶ್ಚಲತೆ ; ಎಲ್ಲ ಮಾತಿನ ಕೊನೆ ; ಕರಗುವ ಮನಸ್ಸಿನಲ್ಲಿ ಲಂಬವಾಗಿ ನಿಂತ ಕಾಲಸ್ತಂಭ. ಭಾವ? ಕ್ಷಣ ಕ್ಷಣ ರೂಪಾಂತರದ ಶ್ರಾವಣದೇಶ. ಸಂಗೀತ : ಅಪರಿಚಿತ. ನಮ್ಮನ್ನೂ...

ಹುಷಾರಿ

ನೀರು ಹರಿದು ಸವೆದ ಉರುಟು ಕಲ್ಲುಗಳ ಕವಚ ತೊಟ್ಟುಕೊಂಡೆ. ನನ್ನ ಹಿಂದೆ ಯಾರಾದರೂ ಬಂದರೆ ಕಾಣಲೆಂದು, ಬೆನ್ನಿಗೆ ಕನ್ನಡಿ ಹುಷಾರಾಗಿ ಕಟ್ಟಿಕೊಂಡೆ. ಕೈಗೆ ಗ್ಲೌಸು, ಕಾಲಿಗೆ ಬೂಟು, ಆಲೋಚನೆಗಳಿಗೂ ಒಂದು ದಿರುಸು. ನನ್ನ ಮೈ...