ಬಾಯ್ದೆರೆದು ಮುತ್ತಿರುವ ದಳ್ಳುರಿಯ ಮಧ್ಯದೊಳು ಚಿಚ್ಛಕ್ತಿಯೊಂದೆದ್ದಿತು ಇದೆ ಸಮಯ ಇದೆ ಸಮಯ ತಡಮಾಡದಿರು ಏಳು ರೂಪವನು ಇಳಿಸೆಂದಿತು ರೂಪವೆಂದರೆ ಏನೊ ಚಿತ್ರವಾಗಿದೆ ಮಾತು ಶಿಲ್ಪಿಯೇ ನಾನೆಂದೆನು ಪರಿಹರಿಪೆ ಸಂಶಯವ ನೋಡೆನುತ ಬಹುತರದ ಭಾವಗಳ ತಂದೊಡ್ಡಿತು...
ಕಾಲರಾಯನ ಗರ್ಭದಿಂದ ಸೀಳಿ ಬಂದೆನು ದೇಹದೊಡನೆ ವೇಳೆ ಮುಗಿದರೆ ನಿಲ್ಲಲಾರೆನು ತಾಳು ನಿನ್ನನ್ನು ನುತಿಪೆನು ನನ್ನ ಹಿಂದಿನ ಸುಕೃತ ಫಲವೊ ನಿನ್ನ ಕರುಣದ ಸಿದ್ಧಿಬಲವೊ ಮಾನ್ಯ ಗುರು ಸರ್ವೇಶನೊಲವಿಂ ಮಾನವತ್ವವ ಪಡೆದೆನು ಮಾರುಹೋದೆನು ಜಗವ...
ಜೀವನ ಜೀವನ ಗಂಟು ಹಾಕುವ ಭಾವವೇ ಕಲ್ಯಾಣವು ಪ್ರಣಯಿಗಳು ನಿರ್ಮಲದಿ ನಲಿವುದೆ ಮುಕ್ತಿಗದು ಸೋಪಾನವು ಸೃಷ್ಟಿ ಇದು ಬಹು ಪಾತ್ರಗಳು ತು- ಬಿರುವ ನಾಟಕ ರಂಗವು ಸೂತ್ರಧಾರಿಯು ನಟಿಯು ಪ್ರಥಮದಿ ಬರುವುದೇ ಕಲ್ಯಾಣವು ಸತ್ಯವನು...