ಹಸಿರು ಬಿಸಿಲು

ನೀಲಿ ಗುಲಾಬಿ ಹಳದಿ ಕಪ್ಪು ಬಣ್ಣಗಳ ಮೋಡಿನ ಬಟ್ಟೆ ತೊಟ್ಟು ಹೊರಟ ನಿನ್ನ ಅದೆಷ್ಟೋ ಸಲ ಕಣ್ಣು ಕವಿಚಿ ನೋಡಿದ್ದು ಹಸಿರೇ ಹಸಿರು. ಹಸಿರು ಕುದುರೆಯನೇರಿ ಬಿಸಿಲು ಕೋಲುಗಳನು ದಾಟಿ ಆಕಾಶದಾರಿಯಲಿ ಹಾಯ್ದು ನಿನ್ನ...

ಗಗನ ಸಖಿಯರು ೧

ಕೇಳಿದ್ದೆವು ಗಗನಸಖಿಯರೆಂದಷ್ಟೆ ಯಾವ ಮಾಯಾಲೋಕದವರಿವರು- ತೆಳ್ಳನೆಯ ದೇಹ ಗುಲಾಬಿ ಬಣ್ಣ ಮೈಗೊತ್ತಿದ ಸೀರೆ ಎತ್ತಿಕಟ್ಟಿದ ಕೂದಲು ತಿಳಿನಗೆ ಹೊಳಪು ಕಣ್ಣು ತುದಿಗಾಲಲಿ ನಡೆವ ನವಿಲೆಯರು ಬೆಡಗು ಬಿನ್ನಾಣಗಿತ್ತಿಯರು ಮೆಲ್ಲಗೆ ಕೈ ಮುಗಿದು ಸ್ವಾಗತಿಸಿ ಕುಕಿಲಾಗಿ...

ಡ್ರಿಂಕ್ಸ್ ಬೇಕಾ

ಗ್ರೀಸ್ ಸಖಿ ಹಿಮಗಲ್ಲಲಿ ಕೊರೆದ ಸುಂದರಿ ಲಿಪ್ ಸ್ಟಿಕ್ ತುಟಿತೆರೆದು ಬಳುಕಿ ಬಿನ್ನಾಣವಾಗಿ ಡ್ರಿಂಕ್ಸ್ ಬೇಕಾ.... ಹೆಸರುಗಳೇನೇನೋ ಹೇಳಿ ಗ್ಲಾಸ್ ಹಿಡಿದೇ ಇದ್ದಳು. ಬೆಚ್ಚಿಬೆರಗಾಗಿ ತಲೆ ಅಲುಗಾಡಿಸಿ ಕೇವಲ ತಂಪುನೀರು ಕೇಳಿದರೆ ತುಳು ತುಳುಕಿ...

ಕಗ್ಗತ್ತಲಿನೊಳು

ಇದ್ದಕ್ಕಿದ್ದಂತೆ ಗಡಗಡ ಸದ್ದು ಹೊಯ್ದಾಟ ಇಣುಕಿದರೆ ಕಿಡಿಕಿಯಿಂದ ಕಗ್ಗತ್ತಲು ಭಯಾನಕ ಭೂಮಿ ಆಕಾಶಗಳೆಲ್ಲೋ- ಕಂಪನಿ ನಾಟಕದ ಕಪ್ಪು ತೆರೆಯಿಳಿದು ಲೈಟ್ ಮ್ಯೂಸಿಕ್ ಬ್ಯಾಂಡಿನವರೆಲ್ಲಾ ತಣ್ಣಗೆ ಡೈರೆಕ್ಟರ ಸೂರ್ಯ ಕ್ಯಾಶ್ ಎಣಿಸಿ ಜಾಗ ಖಾಲಿ ಮಾಡಿ...

ಪಂಚತಂತ್ರದ ಕುದುರೆ

ಕಣ್ಣಿನ ದರ್ಜಿಯೊಳಗೆ ಚಂದ್ರ-ಚುಕ್ಕಿ, ಆಕಾಶ-ಮೋಡ, ಹಗಲು-ರಾತ್ರಿ ಕಾಮನ ಬಿಲ್ಲುಗಳನೆಲ್ಲ ಹಿಡಿದು ಸೂರ್ಯ ಕಿರಣಗಳ ಬಣ್ಣ ಬಣ್ಣದೆಳೆಗಳಿಂದ ದಾವನಿ ಹೊಲೆದು ಮುಗಿಸಿ ಹುಬ್ಬಿನ ಚೌಕಟ್ಟಿಗೆ ಹೊಂದಿಸಿ ಮನದೊಳಗೆ ತೂಗು ಹಾಕಿ-ಸಂತೋಷಿಸುತ್ತಿದ್ದಂತೆ ಗಾಢವಾದ ನಿದ್ರೆ. ಅದನ್ನೇ ಹೊದ್ದು...

ಮ್ಯಾಟಿನಿ ಶೋ

ಆಹಾ! ಎಷ್ಟೊಂದು ಸುಂದರ ಇದೇ ಇದೇ ಇಂದ್ರಲೋಕ ಇಂದ್ರನೊಡ್ಡೋಲಗ ಕಿನ್ನರರು ಕಿಂಪುರುಷರು ದೇವಾನುದೇವತೆಗಳು ಮೋಡಿನೊಡಲೊಳಗೇ ಚಲಿಸುವ ಇಲ್ಲೆಂದರಲ್ಲಿ ಅಲ್ಲೆಂದರಲ್ಲಿ ಇಂದ್ರಸುರೀಂದ್ರ ಊರ್ವಶಿ ರಂಭೆ ಮೇನಕೆ ತಿಲೋತ್ತಮೆಯರ ತೋಳು ತೊಡೆ ಎದೆದಿಂಬುಗಳಿಗೊರಗಿ ಬೆಳ್ಳಿ ಶಲ್ಯ ಬಂಗಾರದೊಡವೆ...

ಸೂರ್ಯೋದಯ

ಕಗ್ಗತ್ತಲೆಯ ಗೂಡುದಾಟಿ ಹೊನ್ನ ಹುಡಿಯನೊದ್ದು ಬೆಳ್ಳಿರಥ ಏರಿಬರುತಿಹನು ಸೂರ್ಯ ಶರಣು ದೇವದೇವೊತ್ತಮಾ ಜೀವಕೋಟಿಗಳಿಗೆ ಉಸಿರಿಗೆ ಉಸಿರು ನೆಲದಾಳಕೆ ಬೇರು ಬಿಡಿಸಿ ಆಕಾಶದಗಲಕೆ ಚಿಗುರುಹೊಮ್ಮಿಸಿ ತೋಳ್ತೆಕ್ಕೆಯೊಳು ಎಲ್ಲರ ಬಳಸುತ ಏರುತಿಹನು ಏರುತಿಹನು ಆಕಾಶದೆತ್ತರಕೆ ಬರುತಿಹನು ಬರುತಿಹನು...

ಗರಿಯೊಡೆದ ಹಕ್ಕಿ

ಬಣ್ಣ ಬಣ್ಣದ ಹೂಗಳು, ಗಾಜಿನ ಚೂರುಗಳು ಚಿತ್ತಾರದ ಗರಿಗಳು ತರಾವರಿ ಬೆಣಚುಕಲ್ಲು, ಸಿಂಪಿ ಕವಡಿಗಳ ತಂದು ಸಂಭ್ರಮಿಸುವ- ಮುಂಜಾವಿನ ಮಂಜು ಮುಸ್ಸಂಜೆಯ ಕೆಂಪು ಪ್ರೀತಿಸುವ- ಆಕಾಶದಂಗಳದೊಳು ಹಾರಾಡಿ ಏನೆಲ್ಲಾ ಬಾಚಿ ತಬ್ಬಿಕೊಳ್ಳುವ ಕನಸುಗಳಿಗೆ ಕಾವೂಡಿಸುವ...

ಮೊದಲ ಪಯಣ

ಮನೆಯ ಮಾಳಿಗೆಯ ಮೇಲೆ- ತೋಟ ಗದ್ದೆಗಳಲಿ- ಎತ್ತರೆತ್ತರ ಕಟ್ಟಡಗಳ ಸಂದುಗೊಂದುಗಳೊಳಗಿಂದ ಮರಳ ಮೇಲೆ ಓಡಾಡುವ ಸಮುದ್ರ ಹಡಗಿನ ಡೆಕ್ ಮೇಲೆ ಗಕ್ಕನೆ ನಿಂತು ಮಕ್ಕಳಿಂದ ಮುದುಕರೂ ನನ್ನ ಪಯಣದ ವಿಮಾನ ನೋಡಿ ಕೈ ಬೀಸುತ್ತಿರಲೇಬೇಕು...

ಕ್ಷಣ ಗಣನೆ

ಅಮವಾಸ್ಯೆಯ ಸೆರಗು ಮುಸ್ಸಂಜೆ ವಿಮಾನ ಏರುವುದು ಸಮುದ್ರ ದಾಟುವುದು ಬೇಡವೇ ಬೇಡ ಸಂಪ್ರದಾಯದ ಅಮ್ಮನ ಸಂಕಟ ಒಳಗೊಳಗೆ- ವೀಸಾದ ಕೊನೆಯ ದಿನಾಂಕ ನೋಡು ಅಮ್ಮ ಹೊರಡಲೇಬೇಕು ಹೊಸ್ತಿಲಿನ ಮೇಲಿರುವ ನನ್ನ ಅಸಹಾಯಕತೆ- ಅಪ್ಪನ ಧೈರ್ಯದ...
cheap jordans|wholesale air max|wholesale jordans|wholesale jewelry|wholesale jerseys