ಮನೆ

ನಮ್ಮ ನಡುವಿನ ಮಾತುಗಳೆಲ್ಲಾ ಮಾತಲ್ಲ ಗೆಳೆಯಾ ಅಲ್ಲಿರುವುದು ಮೌನದ ಪ್ರತಿಬಿಂಬ, ನದಿಯಲಿ ತೇಲುವ ದೋಣಿಯ ಗೆಣೆನಾದ ನೀಲಿ ಆಗಸದ ತೇಲುಚುಕ್ಕಿಗಳ ಬಿಂಬ ಮೆಲ್ಲಗೆ ಅರಳಿಸುತ್ತದೆ ಸೂರ್ಯಕಾಂತಿ ಕಣ್ಣಕಾಂತಿ, ತೊಟ್ಟಿಲಲಿ ಮುದ್ದು ಕಂದನ ಕೇಕೆ ನಮ್ಮ...
ಕೊರಗು

ಕೊರಗು

ಏ ಕೃಷ್ಣ ಭಿಕ್ಷೆ ಬೇಡ್ಬೇಡ್ವೋ..... ನನ್ನ ಮನೆತನದ ಮರ್ಯಾದೆ ಹರಾಜಿಗಿಡಬೇಡ..... ನಿನ್ಗೆ ಏನ್ ಬೇಕಂತಾದ್ರು ಹೇಳೋ .... ನಿನ್ನ ಕಾಲ್ಮುಗಿತೀನಿ.... ತುಂಡು ಬೀಡಿಗಾಗಿ, ಹನಿ ಸರಾಯಿಗಾಗಿ ಭಿಕ್ಷೆ ಬೇಡ್ಬೇಡ. ಮನೆಯಲ್ಲಿ ನಿನಗೇನ ಕಮ್ಮಿ ಆಗೈತಿ.......

ಹಸ್ತರೇಖೆಗಳು

ಅದೃಷ್ಟದ ರೇಖೆಗಳಿವೆ ನಿನಗೆ ವಿದೇಶಕ್ಕೆ ಹೋಗುತ್ತೀ ಅಲ್ಲದೆ ಎಷ್ಟು ಮೆತ್ತಗಿದೆ ಈ ಹಸ್ತ! ಎಲ್ಲರೂ ಒಲಿಯುತ್ತಾರೆ ನಿನಗೆ ಬಲಿಯಾಗುತ್ತಾರೆ ಹೆಬ್ಬೆರಳ ಬುಡದ ಈ ಎತ್ತರ ನೋಡು ಅದರ ಕೆಳಗಿನ ವಿಸ್ತಾರ ನೋಡು ಉಪನದಿಗಳಂತಹ ಈ...

ಚಪ್ಪಲಿಯಡಿಯ ಚೇಳು

ಬಟ್ಟಲು ಗಂಗಳ ಚಲುವೆ ಕಣ್ಣಸಿಪ್ಪೆಯ ಕೆಳಗೆ ವರ್ತಲದ ಛಾಯೆ ಕೆನ್ನೆ ಗಂಟಿದ ಅಶ್ರುಧಾರೆ ಮೇಲೆ ಜರತಾರಿ ಸೀರೆ ಮಕಮಲ್ಲಿನ ಬಟ್ಟೆ ವಡ್ಯಾಣ ಒಡವೆ ಹುಸಿ ನಗೆಯ ಮುಖವಾಡ ಹಮ್ಮು ಬಿಮ್ಮಿನ ಕೈವಾಡ ಒಲುಮೆ ರಾಗ...

ಈ ಗೆಳೆತನ….

ನನ್ನೆಲ್ಲಾ ಪದ್ಯಗಳಲ್ಲಿರುವಂತೆ ಇಲ್ಲೂ ತಾರೆ, ಮೋಡ, ಗಾಳಿ, ಕಡಲು, ಸೂರ್ಯರಿದ್ದಾರೆ. ನಿನಗಿಷ್ಟವಾದರೆ ಓದು ಒತ್ತಾಯವಿಲ್ಲ ಇಷ್ಟವಾಗದಿದ್ದರೆ ಬೇಡ ಕಿಂಚಿತ್ತೂ ಕೋಪವಿಲ್ಲ. ಆದರೆ ನಾನು ಪ್ರೀತಿಸುವ ಗಾಳಿ, ಮೋಡ, ತಾರೆಯರನ್ನು ನಿಂದಿಸಬೇಡ. ಅವರ ಬಗ್ಗೆ ಯಾಕೆ...

ನದಿ

ಮಳೆಗಾಲದಲ್ಲಿ ಬಸಿರಿಯಂತೆ ಮೈತುಂಬಿ ಬಾಯ್ಗೆ ಸಿಕ್ಕ ಜೊಂಡು ಹುಲ್ಲನ್ನೆಲ್ಲ ತಿಂದುಂಡ ನದಿ, ಈಗ ಬೇಸಿಗೆಯಲ್ಲಿ ಬಾಣಂತಿಯಂತೆ ಕೃಶವಾಗಿ ಬೆಂಡು; ಹೆತ್ತು ಮರಳ ಹಾಸಿಗೆಯ ಮೇಲೆ ಮಲಗಿಸಿದ್ದು ಮಾತ್ರ ಒಂದಿಷ್ಟು ಬರೀ ಕರಿಕಲ್ಲ ಗುಂಡು. *****

ಯುಗದ ದೇವಿ ಬಂದಳು

ಮುಳ್ಳು ಮುರಿದು ಎಳ್ಳು ಸುರಿದು ಬೆಳ್ಳಿ ಹೂವು ಮಿನುಗಲಿ ಜಗದ ಭೇರಿ ನೊಗದಿ ಹೇರಿ ಯುಗದ ದೇವಿ ಬಂದಳೊ ಮುಗಿಲ ನಾರಿ ಹಸಿರು ತೂರಿ ಹೂವು ತೇರು ತಂದಳೊ ಹಸಿರಿನೆದೆಯ ಹೂವು ಅರಳಿ ಕಲ್ಪವೃಕ್ಷ...

ಗೋತ್ರ

ಎದುರು ಮನೆ ಹುಡುಗಿಯ ತಂದೆ ದೋತ್ರಧಾರಿಯನ್ನು ‘ಗೋತ್ರ’ ಯಾವುದು? ಎಂದು ಕೇಳಿದ ವಿಶ್ವ, ನನ್ನ ಮಿತ್ರ; ಅವಾಕ್ಕಾಗಿ ನುಡಿದರು; ‘ವಿಶ್ವಾಮಿತ್ರ’. ವಿಶ್ವ ನುಡಿದ: "ಕ್ಷಮಿಸಿ, ನಮ್ಮಿಬ್ಬರದೂ ಒಗ್ಗೋತ್ರ!" *****