ಕೋಣೆಯಲ್ಲಿ ಸಮೃದ್ಧ ಕತ್ತಲೆ ನದಿಯಂತೆ ತುಂಬಿತ್ತು. ಹುಡುಗ ತನ್ನೊಳಗೆ ತಾನು ಅಡಗಿದಂತೆ ಕುಳಿತಿದ್ದ. ಅಮ್ಮ ಬಂದಳು, ಕನಸಿನೊಳಗೆ ಬಂದ ಇನ್ನೊಂದು ಕನಸಿನಂತೆ. ನಿಶ್ಶಬ್ದವಾಗಿದ್ದ ಕಪಾಟಿನಲ್ಲಿ ಗಾಜಿನ ಲೋಟ ಇಷ್ಟೆ ಕಂಪಿಸಿತು. ಗುಟ್ಟು ಬಿಟ್ಟುಕೊಟ್ಟಿತು ಕೋಣೆ...
ಜಗತಿನಲ್ಲಿ ಈಗ ಎಲ್ಲಿ ಯಾರೇ ಅಳುತ್ತಿರಲಿ, ಕಾರಣವಿಲ್ಲದೆ ಅಳುತ್ತಿದ್ದರೆ, ನನಗಾಗಿ ಅಳುತಿದ್ದಾರೆ. ಜಗತ್ತಿನಲ್ಲಿ ಈಗ ಎಲ್ಲಿ ಯಾರೇ ನಗುತ್ತಿರಲಿ, ಕಾರಣವಿಲ್ಲದೆ ನಗುತ್ತಿದ್ದರೆ, ನನ್ನ ಕಂಡು ನಗುತ್ತಿದ್ದಾರೆ. ಜಗತಿನಲ್ಲಿ ಈಗ ಎಲ್ಲಿ ಯಾರೇ ಹೋಗುತ್ತಿರಲಿ, ಕಾರಣವಿಲ್ಲದೆ...
ಏಕಾಂತವು ಮಳೆಯಂತೆ. ಸಂಜೆ ಹೊತ್ತಿನಲ್ಲಿ ಸಮುದ್ರದ ಕಡೆಯಿಂದ ನಮ್ಮ ಭೇಟಿಗೆ ಬರುವುದು. ದೂರ ತುಂಬ ದೂರದ ಬಯಲಲ್ಲಿ ಹಬೆಯಾಗಿ ಆಕಾಶಕ್ಕೇರುವುದು, ಏರುವುದು ತನ್ನ ಹಕ್ಕು ಅನ್ನುವಂತೆ. ಅಲ್ಲಿಂದ ಬಂದು ಊರಿನ ಮೇಲೆ ಸುರಿಯುವುದು. ಮಬ್ಬು...
ದೂರು ಯಾರಿಗೆ ಹೇಳುತ್ತೀಯೆ ಹೃದಯವೇ? ನೀನು ನಡೆಯುವ ಯಾರೂ ಸುಳಿಯದ ಹಾದಿಯಲ್ಲಿ ಅರ್ಥವಾಗದ ಮನುಷ್ಯ ಕುಲವನ್ನು ಆಗಾಗ ಅಡ್ಡ ಹಾಯುವೆ. ಭವಿಷ್ಯಕ್ಕೆ ಗತಿ ಇರದ ಭವಿಷ್ಯಕ್ಕೆ, ಕಳೆದ ನಾಳೆಗೆ ಸಾಗುವ ಮಾರ್ಗಕ್ಕೆ ವಶವಾದದ್ದು ಮತ್ತಷ್ಟು...
ಸಮಯವೆಲ್ಲ ನನ್ದೇ ಅನ್ನಿಸಿದಾಗ, ಊಟಕ್ಕೋ ಟೀಗೋ ಯಾರೂ ಕರೆಯಲು ಬಾರದಿದ್ದಾಗ, ಮೋಡ ಸಡಿಲವಾಗುತ್ತ, ಹರಡುತ್ತ, ಬಣ್ಣ ಕಳೆದುಕೊಳ್ಳುವುದನ್ನು ನೋಡಬಹುದು. ಮನೆಯ ಮುಂದಿನ ಗೋಡೆಯ ಮೇಲೆ ಬೆಕ್ಕು ಸಾವಧಾನವಾಗಿ ಗಂಭೀರವಾಗಿ ನಡೆಯುತ್ತಿರುವುದನ್ನು ನೋಡಬಹುದು. ಈಗ ಪ್ರತಿ...
ಹೌದು, ನನಗವನು ಗೊತ್ತಿದ್ದ. ವರ್ಷಗಟ್ಟಲೆ ಅವನೊಡನೆ ಇದ್ದೆ. ಚಿನ್ನದಂಥ ಮನುಷ್ಯ, ಕಲ್ಲಿನಷ್ಟು ಗಟ್ಟಿ. ಸುಸ್ತಾಗಿದ್ದ. ಪೆರುಗ್ವೇಯಲ್ಲಿ ಅಪ್ಪ ಅಮ್ಮನನ್ನು ಬಿಟ್ಟು ಮಕ್ಕಳನ್ನು ಬಿಟ್ಟು, ಮಾವ ಚಿಕ್ಚಪ್ಪಂದಿರನ್ನು ಬಿಟ್ಟು ಹೊಸದಾಗಿ ಭಾವನಂಟರಾದವರನ್ನು ಬಿಟ್ಟು, ಮನೆ ಬಿಟ್ಟು,...
ಪ್ರತಿಯೊಂದು ಯುದ್ಧಮುಗಿದ ಮೇಲೂ ಯಾರಾದರೂ ಮತ್ತೆ ಎಲ್ಲವನ್ನೂ ಅಣಿಗೊಳಿಸಬೇಕು. ಹಾಳಾದದ್ದೆಲ್ಲ ಮತ್ತೆ ತನಷ್ಟಕ್ಕೇ ಸರಿಯಾಗುವುದಿಲ್ಲ ತಾನೇ? ಯಾರಾದರೂ ಬಂದು ರಸ್ತೆ ಮೇಲೆ ಬಿದ್ದ ಕಲ್ಲು ಮಣ್ಣು ಪಕ್ಕಕ್ಕೆ ತಳ್ಳಿ ಹೆಣ ಹೂತ್ತೆಗಾಡಿಗಳು ಸಾಗುವುದಕ್ಕೆ ದಾರಿ...
ನರಕದ ತಳಾತಳದಲ್ಲಿರುವ ಸೀಮೆ. ಎಲ್ಲರೂ ಅಂದುಕೊಂಡಂತೆ ಅಲ್ಲಿ ನಿರಂಕುಶಾಧಿಕಾರಿಗಳಿಲ್ಲ. ಮಾತೃಹಂತಕರು, ಮಾತೃಗಾಮಿಗಳು, ಹೆಣಗಳನ್ನು ದರದರ ಎಳೆದಾಡಿದವರು, ದೇಶದ್ರೋಹಿಗಳು ಯಾರೂ ಇಲ್ಲ. ನರಕದ ತಳಾತಳ ಕಾಲವಿದರ ಆಶ್ರಯತಾಣ, ಎಲ್ಲೆಲ್ಲೂ ಕನ್ನಡಿಗಳು, ಸಂಗೀತ ವಾದ್ಯಗಳು, ವರ್ಣಚಿತ್ರಗಳು. ಸುಮ್ಮನೆ...