ಚಂದ್ರನ ಸವಾಲು

ನಾನು ಹಾಡಹಗಲೇ ರಾಜಾರೋಷಾಗಿ ಆಕಾಶದಲ್ಲಿ ತಿರುಗಾಡಿದ್ದನ್ನು ನೀವೇ ಎಷ್ಟೋ ಸಾರಿ ನೋಡೀದೀರೋ ಇಲ್ಲವೋ ಸತ್ಯ ಹೇಳಿ. ಸೂರ್ಯ. ಸೂರ್ಯ. ಸೂರ್ಯ ಇವನೊಬ್ಬನೇ ಅಂತ ದೊಡ್ಡದಾಗಿ ಹೇಳ್ತೀರಲ್ಲ ಒಂದು ದಿನವಾದರೂ ರಾತ್ರಿ ಹೊತ್ತಿನಲ್ಲಿ ಆಕಾಶದಲ್ಲಿ ಕಾಲಿಡೋ...

ಮುಳ್ಳು

ತೋಟವಿದೆ ತನಗೆ, ಸುಖಿ ತಾನು, ಎಂದನು ಮಾಲಿ; ಎಳನೀರು, ರಸಬಾಳೆ, ಕಸಿಮಾವು, ಚೆಂಜೇನು! ಬೇಕು ಬಾಳಿಗೆ ಒಂದು ತೋಟ, ಏನೇ ಇರಲಿ !- ಚಿಂತೆಯೂ ಒಂದಿದೆ : ಇವನು ಕಾಯುವುದೆಂತು? ಬೇಲಿಯಿದೆ ಎಂದು ನಂಬಿದೆ...

ಇದುವೆ ನನ್ನಯ ಸೇವೆ

ಸಾಹಿತ್ಯ ಸಾಗರದ ದಡದಿ ನಿಲ್ಲುತಲಂದು ನೋಡಿದೆನು ಆಸೆಯಿಂ ಅಲೆಗಳೆಡೆಗೆ ಒಳಗೆ ಹುಡುಗಿಹ ಮುತ್ತುರತ್ನಗಳನೊಯ್ಯುವೆನೆ ಕನ್ನಡಮ್ಮನ ಅಡಿಗೆ ಮಾಲೆಯಾಗಿಡಲು! ದೂರದಿಂ ಕುಣಿಯುತ್ತ ಹತ್ತಿರಕೆ ಬಂದಿತಲೆ, ನೋಡುತಲೆ ಧೀಗೆಟ್ಟೆ ರೌದ್ರರೂಪ! ಸಾಗರದಿ ಮುಳುಗುತ್ತ ಮುತ್ತು ರತ್ನವನಾಯೆ ಧೈರ್ಯಸಾಲದೆ...

ಸೂರ್ಯಕಾಂತಿ

ಅಕೊ ಮೂಡ ಬಯಲಿನಲಿ ಬೆಳ್ನೆರೆಯ ಚೆಲ್ಲಿಹರು ಅದೋ ಮೂಡ ಬಾನಿನಲಿ ರವಿ ಕಾರುತಿಹನು! ಭುವಿಯೆಲ್ಲ ಬೆಳಕಿನಾ ಮುನ್ನೀರಂತಾದುದು; ಗಿರಿಯೆಲ್ಲ ನಗುವಂತೆ ತಲೆಯೆತ್ತಿ ನೋಡುವುದು. ಚಂದಿರನ ಓಡಿಸಿತು ಇಬ್ಬನಿಯ ಮಳೆಯು; ಬಿಳಿವಣ್ಣು ತಾರಕೆಯ ಹಕ್ಕಿಗಳು ಕುಟುಕಿದುವು....

ಚಂದ್ರ ಆಗೋದು ಸಾಧ್ಯವಿಲ್ಲ

ನೂರು ಅಶ್ವಮೇಧ ಯಜ್ಞ ಮಾಡಿದರೆ ಯಾರು ಬೇಕಾದರೂ ಆಗಬಹುದು ಇಂದ್ರ ಹೌದೊ ಅಲ್ಲವೊ? ಆದರೆ ಸಾವಿರ ಯಜ್ಞ ಮಾಡಿದರೂ ಯಾರೂ ಚಂದ್ರ ಆಗೋದು ಸಾಧ್ಯವಿಲ್ಲ ಗೊತ್ತು ತಾನೇ? ಸೂರ್ಯ ಅವನೊಬ್ಬನೇ ಇರಬಹುದು ಆದರೆ ಚಂದ್ರ...

ಅಕ್ಕಿಯಾರಿಸುವಾಗ

ಅಕ್ಕಿಯಾರಿಸುವಾಗ ಚಿಕ್ಕ ನುಚ್ಚಿನ ನಡುವೆ ಬಂಗಾರವಿಲ್ಲದ ಬೆರಳು; ತಗ್ಗಿರುವ ಕೊರಳಿನ ಸುತ್ತ ಕರಿಮಣಿಯೊಂದೆ ಸಿಂಗಾರ ಕಾಣದ ಹೆರಳು; ಹೆರಳಿನ ಭಾರಕ್ಕೆ ತುಂಬಿರುವ ಕೆನ್ನೆಯಲಿ ಹದಿನಾರು ವರುಷದ ನೆರಳು; ದೀಪದಂತರಳಿದ ಸಿರಿಗಣ್ಣ ಸನ್ನೆಯಲಿ ಹುಚ್ಚುಹೊಳೆ, ಮುಂಗಾರಿನುರುಳು;...

ಬಂದೆನೊ – ಇದೊ ಬಂದೆ

ಕರೆಕರೆದು ಬರುವೆನೊ ಬಂದೆನೊ ಇದೊ ಬಂದೆ, ಕರ್ಣಾಟ ಸಾಗರ ಸೇರಽಲು; ತಿಳಿನೀರ ತಳವನ್ನು ಸೇರಲು!  ||ಕರೆ|| ಕೊಡಗಿನ ಮಲೆನಾಡ ಶಿಖರದೊಳುದಯಿಸಿ ಹರಿಹರಿದೆ ಕನ್ನಡ ರಾಜ್ಯದೊಳ್; ಕವಿರಸದ ಹನಿಯಾಗಿ ಸೇರಽಲು! ಕಾಂತಿಯೊ ಇದು ಒಂದು ಕ್ರಾಂತಿಗೆ...

ಅರ್ಪಣ ಉಷೆಗೆ

ಯುಗಯುಗಗಳೇಕಾಂತ ಗೀತಹಾಡುತನಂತ ನೋವಿನಲಿ ಕಾತರಿಸೆ ನನ್ನ ಉಷೆ ಬಂದೆ! ನಿನ್ನ ಬೆಳಕಲಿ ನಿನಗೆ ನನ್ನೆದೆಯ ಕಿರುಹಣತೆ ಅರ್ಪಿಸಿದೆ. ನೀನೊಪ್ಪಿ ಒಲವ ಬಾಳಿಸಿದೆ! ನಾನು ಕವಿ-ನೀ ಕಾವ್ಯ ನಾ ಬರೆದ ಗೀತಗಳು ನಿನ್ನ ಒಲವಿನ ನೂರು...

ಕವನ ಹುಟ್ಟಿತು ಕೇಳಾ

ಹುಟ್ಟಿತು ಕವನ ಹುಟ್ಟಿತೂ ಕವನ ಹುಟ್ಟಿತೂ ಕೇಳಾ ಎಲ್ಲಿಂದಲೋ ಹೇಗೋ ಏನೋ ಹಾರಿಬಂದ ಕನಸಿನ ಬೊಟ್ಟು ಮೈಯೊಳಗೆ ನೆಟ್ಟು ನೆತ್ತಿಯಿಂದ ಹೆಬ್ಬೆರಳ ತುದಿಯೊರೆಗೂ ಬಯಕೆ ಬಾಯ್ತೆರೆದಾ ಬಸುರು. ದಿನದಿನಕು ಕಣ್‌ಮೂಗು ಮೂಡಿ ಮೈಕೈ ತುಂಬಿ...

ನನ್ನ-ನಿನ್ನ ಅಂತರ!

ನಿನ್ನದು ಆ ತೀರ-ನನ್ನದು ಈ ತೀರ ನಟ್ಟನಡುವಿನಂತರ, ತೆರೆಯ ಅಭ್ಯಂತರ ಕಿರಿದಹುದು ಕಿರಿದಲ್ಲ-ಹಿರಿದಲ್ಲ ಹಿರಿದಹುದು ಕಿರುತೊರೆಯ ಅಂತರ-ಕಡಲಿನಂತರ! ಹರಿಯುವಲೆಗಳಂತೆನ್ನ ಮನಸಿನಾತುರ ಹರಿಯುತಿದೆ, ಕೊರೆಯುತಿದೆ ಒಲವ ಕಾತರ ಮೌನದಲ್ಲೆ ಮರುಗಿಸಿದೆ ಹೃದಯದ ಭಾರ ಕಿರುತೊರೆಯ ಅಂತರ-ಕಡಲಿನಂತರ!...
cheap jordans|wholesale air max|wholesale jordans|wholesale jewelry|wholesale jerseys