ಚಿತ್ರದುರ್ಗದವರು ಚಿತ್ರರಂಗದ ಉತ್ಕರ್ಷಕ್ಕೆ ಹಲವು ರೀತಿಯಲ್ಲಿ ಅಂದರೆ ಸಾಹಿತ್ಯಕವಾಗಿ, ವಿತರಕರಾಗಿ, ನಿರ್ಮಾಪಕ, ನಿರ್ದೆಶಕರಾಗಿ, ನಟರಾಗಿ ಉತ್ತಮ ಸೇವೆ ಸಲ್ಲಿಸಿದ್ದಾರೆಂಬುದು ಹೆಗ್ಗಳಿಕೆಯ ವಿಷಯ. ನಟಸಾರ್ವಭೌಮ ಡಾ|| ರಾಜಕುಮಾರ್ ಅವರಂತಹ ಅಪ್ರತಿ...

ನಡುರಾತ್ರಿ ಜೋರಾಗಿ ಮಳೆ ಬೀಳಾಕ ಸುರುವಾಗಿತ್ತು ಹಾಲಿವುಡ್ ಪಿಕ್ಚರ್ ಅರ್ಧನೋಡಿ ಆ ಲೋಕದಾಗ ಇದ್ಹಾಂಗ ನಿದ್ದಿ ಹತ್ತಿತ್ತು. ಅದರ ಕನಸು ಬಿದ್ದದ್ದು ನಮ್ಮೂರಾಗ ಗರ್ದಿಗಮ್ಮತ್ತಿನ ಪೆಟಗಿಯೊಳಗ ದಿಲ್ಲಿದರ್ಬಾರ್ ಕುತುಬ್‌ಮಿನಾರ್ ತಾಜಮಹಲ್ ಬಾಂಬೆ ಬಜಾರ...

ಸಹಾರಾ ಎಂದರೆ ಅರೆಬಿಕ್ ಭಾಷೆಯೊಳಗೆ ಶೂನ್ಯವೆಂದು ಅರ್ಥ ಮೈಲುಗಟ್ಟಲೆ ಮರುಭೂಮಿಯ ಮೇಲೆ ಹೊಗೆಯಿಲ್ಲದೆ ಹಬೆಯಿಲ್ಲದೆ ಕಾದ ಮರುಳು ಮುಕ್ಕಳಿಸುವ ಬಯಲು ಚಿಗುರದೆ ಹೂ ಬಿಡದೆ ಬಿಸಿಲ ಝಳಕ್ಕೆ ಅಪರೂಪ ತೇಲುವ ಓಯಸಿಸ್ ಎಟುಕದ ಆಕಾಶಕ್ಕೆ ತಲೆಯೆತ್ತುವ ತಾಳೆಗ...

ನಿಮಿತ್ತ ಆಯ್ತೂಂತಾ ಬೆಳಗಿನವರೆಗೂ ಕದ್ದ ಚಂದ್ರ, ರಾಜಾರೋಷ ಸೂರ್ಯನ ಕೈಲಿ ಸಿಕ್ಕು ಹಾಕಿಕೊಂಡು, ಅವನ ಸಿಟ್ಟು ನೆತ್ತಿಗೇರೊ ಅಷ್ಟರಲ್ಲಿ ಬೆಳ್ಳಗೆ ಬಿಳಿಚಿ ತೆಳ್ಳಗಾಗಿದ್ದ. *****...

ಬೆಳಗ್ಗೆ ತಿಂಡಿ ತಿನ್ನುತ್ತಿದ್ದ ಅನುವಿಗೆ ನೀಲ “ಅನು ಸಂಜೆ ಬೇಗ ಬಾಮ್ಮ” “ಯಾಕೆ” ಪ್ರಶ್ನಿಸಿದಳು. ಉತ್ತರಿಸಲು ತಡಬಡಾಯಿಸಿ ಗಂಡನ ಮೋರೆ ನೋಡಿದಳು. “ನನ್ ಫ್ರೆಂಡ್, ಅವರ ಮಗ ಸಂಜೆ ಬರ್ತಾ ಇದ್ದಾರೆ” ಯಾ...

ಯಾರೀ ಚಿಣ್ಣ ಕೇದಗೆ ಬಣ್ಣ ಘಮ ಘಮ ಬಂಗಾರ ಸಣ್ಣ! ನಕ್ಕರೆ ಬಿಚ್ಚಿದಂತೆಲ್ಲೂ ಬೆಳಕಿನ ಪತ್ತಲವನ್ನ! ಹಕ್ಕಿಯ ಕಂಠ, ಕಾರಂಜಿ ಸೊಂಟ ರಂಭೆ ಊರ್ವಶಿಯರ ನೆಂಟ ಹೊದಿಕೆಯ ಒದೆದು, ಹೂಗಾಲ ಎಳೆದು ಬಡಿಯುವ ಹನುಮನ ಬಂಟ! ಮಿದುಬಾಯಿ ಹಚ್ಚಿ, ಎದೆ ಹಿಗ್ಗ ಕಚ್ಚಿ ...

ತುಂಬಿದ ಕೆರೆಗೆ ಅಂಬಿಗ ಹಂಗೋಲಹಾಕಿ, ಬಲಿಯ ಬೀಸಿದಂತೆ ತುಂಬುತ್ತ ಕೆಡೆವುತ್ತಲಿದ್ದ ಲಿಂಗವ ನೋಡಿ ಕೊಡೆವೆಂದು ಜಂಗಮದ ನೆಲೆಯ ಕಾಣದೆ ಸಂದು ಹೋದರಲ್ಲ ಈ ಲೋಕವೆಲ್ಲವು ಲಿಂಗದ ನೆನೆಯ ಕಾಂಬುದಕ್ಕೆ ಹರಿಗೋಲನೆ ಹರಿದು, ಹುಟ್ಟ ಮುರಿದು, ಆ ಬಲೆಯೊಳಗೆ ಸಿ...

ನಮಗೆ ಸ್ವಾತಂತ್ರ್ಯ ಬಂದಿದೆ ಸ್ವಾಮೀ ನಮಗೆ ಸ್ವಾತಂತ್ರ್ಯ ಬಂದಿದೆ, ನಮ್ಮ ಹಡೆದ ತಂದೆ ತಾಯಿಗಳ ಕಾಲಿಂದೊದೆಯಲು ನಮ್ಮ ತಿದ್ದಿ ಬೆಳೆಸಿದ ಗುರು ಹಿರಿಯರನೂ ಅಲ್ಲಗಳೆಯಲು ಆಡಳಿತದಾಡುಂಬೊಲದಲ್ಲಿ ಬೇಲಿ ಎದ್ದು ಹೊಲ ಮೇಯಲು ಜನಸೇವಾ ಭವನಗಳಲ್ಲಿ ಇಲಿ ಹೆಗ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...

ಕಾಲ ಹನ್ನೆರಡನೆ ಶತಮಾನ. ದೇಶ ಜಪಾನ್. ಅರಸನ ಹೆಸರು ಅಂತೋಕು. ವಯಸ್ಸು ಕೇವಲ ಏಳು ಸಂವತ್ಸರಗಳು. ಅಂತೋಕು ಹೈಕೆ ಎಂಬ ಸಾಮುರಾಯ ದಳದ ನಾಮ ಮಾತ್ರ ಮುಂದಾಳುವಾಗಿದ್ದು ನಿಜವಾದ ಅಧಿಕಾರ ಇವನ ಅಜ್ಜಮ್ಮನ ಕೈಯಲ್ಲಿತ್ತು. ಅಜ್ಜಮ್ಮನ ಹೆಸರು ನೀ ಎಂದು. ನೀಯ ಜವಾಬ್ದಾರಿ ಗುರುತರವಾಗಿತ್ತು ಎಂದು...

ಶೇಖರನಿಗೆ ಇನ್ನೂ ಎರಡು ದಿನಗಳ ‘ವಾರ’ ಕಡಿಮೆ ಬಿದ್ದಿತ್ತು. ಎಲ್ಲಿಯೂ ಹುಟ್ಟುವಂತೆ ತೋರಲಿಲ್ಲ. ಶ್ರೀಮಾನ್ ಪದ್ಮನಾಭ ಹೆಬ್ಬಾರರ ಮನೆಯಲ್ಲಿ ಕೇಳಬೇಕೆಂದು ನಾಲ್ಕಾರು ಸಲ ಯೋಚಿಸಿದ. ಆದರೆ ಅವರು ಭಿಕ್ಷುಕರನ್ನೂ, ವರ್ಗಣಿ ಕೇಳುವವರನ್ನೂ ವಾರದ ಮಾಣಿಗಳನ್ನೂ ಅಂಗಳಕ್ಕೂ ಬರಗೊ...

ಸರ್‍ಕಸ್ಸು ಮುಗಿದರೂ ಅವನು ಅಲ್ಲಿಯೇ ಕುಳಿತಿದ್ದ. ಎಲ್ಲಾ ಎದ್ದು ಹೋಗಿದ್ದರು. ಎರಡನೇ ಷೋ ಆರಂಭವಾಗಲು ಕೆಲವೇ ಸಮಯ ಉಳಿದಿತ್ತು. ಅವನ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ಆ ಸರ್‍ಕಸ್ಸಿನ ಹುಡುಗಿ ಪ್ರವೇಶಿಸಿ ಓಡಿ ಬಂದು ಎರಡು ಬಾರಿ ಲಾಗಾ ಹಾಕಿ ಇವನ ಮುಂದೆಯೇ ನಿಂತಂತಾಯಿತು. ಆಕೆಯ...

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...