ನನ್ನ ಹಾಡಿಗೆ

ಹಿಡಿಯೊಳಗೇ ಅವಿತು ಮೆಲ್ಲಗೆ ಮಿಸುಕು ಜಾಡು ತಪ್ಪುವ ಭಯಕ್ಕೆ ಬೊಗಸೆ ಮೀರದ ಬದುಕು. ಏಕಿಂಥ ಕೀಳರಿಮೆ ಹಿಡಿಯಲ್ಲೇ ಹುಡಿಯಾಗುವ ಹುಚ್ಚು? ಕಣ್ತೆರೆದಷ್ಟೂ ಕಾಣುತ್ತದೆ ಬೆಳಕು ಮೊದಲು ದೀಪ ಹಚ್ಚು. ಹಾರು ಹಾರೆಲೆ ಹಾಡೇ ಭುವಿಯಿಂದ...

ತಪ್ಪು – ಸರಿಗಳ ಮಧ್ಯೆ

ಬಿಳಿರಂಗೇ ನಿನ್ನ ಸುಮ್ಮನೆ ಕಾಡುವ ಕಪ್ಪು, ಕೆಂಪು, ಹಸಿರು, ಹಳದಿ, ನೀಲಿ ಹುಚ್ಚುಚ್ಚು ಗಾಢ ಬಣ್ಣಗಳದೇನು ತಪ್ಪು? ಕನಸುಗಳೂ ಇರಲಿ ವಾಸ್ತವವ ಒಪ್ಪು! ತಪ್ಪಿರುವುದೆಲ್ಲಿ? ಬಣ್ಣಗಳ ಅರ್ಥೈಸಲಾಗದ ನಿನ್ನ ಹುಂಬತನದಲ್ಲೇ? ತುಂಟ ಬಣ್ಣಗಳೇ ಬೇಡೆನುವ...

ಕೌತುಕದ ಕಣ್ಣ ಮಿಂಚಿನಿಂದ

ಹೀಗೇ ನಡೆಯುತ್ತಾ ನಡೆಯುತ್ತಾ ಅರ್ಧದಲ್ಲೇ ಥಟ್ಟನೆ ಎಲ್ಲ ನಿಂತು ಗಾಳಿ ಸ್ತಬ್ಧ ನೀರು - ಬೇರು ಸ್ತಬ್ಧ ಜೀವ - ಜೀವನವೇ ಸ್ತಬ್ಧ! ಎಲ್ಲ ಗಮ್ಮತ್ತುಗಳೂ ಮೈ ಮುದುರಿ ಕೌದಿ ಹೊದ್ದು ತೆಪ್ಪಗೆ ಮಲಗಿಬಿಟ್ಟಿವೆಯೇ?...

ಅವಸ್ಥೆ

ಮೊದಲು ನಿಗಿನಿಗಿ ಕೆಂಡ ಮುಟ್ಟಿದವರನ್ನೆಲ್ಲಾ ಸುಟ್ಟು ಭಸ್ಮ ಮಾಡುವ ಹುಮ್ಮಸ್ಸು ಆವೇಶ. ನಿಧಾನಕ್ಕೆ ಕೆಂಡ ಆರಿ ಒಳಗೇ ಬುಸುಗುಡುವ ಬಿಸಿಬೂದಿ ಕೆಂಡ ಆರಿದರೂ ಆರಿಲ್ಲ ಕಾವು ಮೆಲ್ಲಗೆ ಬೂದಿಯೂ ಆರುತ್ತಾ ಆವೇಶ ಹುಮ್ಮಸ್ಸು -...

ಸುಮ್ಮನೆ ಹೀಗೇ..

ಅಂದಿನಂತೆಯೇ ಇಂದೂ ಕ್ಷಣಗಳ ಯುಗವಾಗಿಸಿ ಮುಖಾಮುಖಿ ಕುಳಿತಿದ್ದೇವೆ ಏತಕ್ಕೋ ಕಾಡಿದ್ದೇವೆ! ಅಥವಾ ಸುಮ್ಮನೆ ಹೀಗೇ... ಭಾವುಕತೆ ಮೀರಿದ್ದೇವೆ ಸ್ಥಿತಪ್ರಜ್ಞರಾಗಿದ್ದೇವೆ ಮಾತಿಗೆ ಅರ್ಥವಿಲ್ಲ ಮೌನ ವ್ಯರ್ಥವಲ್ಲ! ತಿಳಿದಿದ್ದೇವೆ. ಬಹುದೂರ ಸಾಗಿದ್ದೇವೆ ಏನೆಲ್ಲಾ ನೀಗಿದ್ದೇವೆ ಹಮ್ಮುಗಳನಿಳಿಸಿ ಬಾಗಿದ್ದೇವೆ...

ಸಂತರಾಗದವರು

ಸಂತೆ ಗದ್ದಲದಲಿ ಕೂತು ಸಂತರಾಗುವ ಹುಚ್ಚು! ನೂರಾರು ಆಮಿಷಗಳ ಚುಂಬಕ ಸೆಳೆತದಲೂ ಏನೂ ಬೇಡೆನುತ ಕಣ್ಮುಚ್ಚಿ ಕುಳಿತರೂ ಮತ್ತದೇ ಸೆಳೆವ ಬಣ್ಣದ ಚಿತ್ರಗಳು. ಗಳಿಗೆಗೊಮ್ಮೆ ಅಲ್ಲಿಲ್ಲಿ ಹಾರುವ ಹುಚ್ಚು ಮನಸಿಗೆ ಕಲಿಸುವುದೆಂತು ಸ್ಥಿತಪ್ರಜ್ಞತೆಯ ಪಾಠ?...

ಅಟ್ಟ ಏಣಿಗಳ ಕಥೆ

ಅಟ್ಟ ಏಣಿಗಳ ಅದೇ ಹಳೇ ಕಥೆ ಅಟ್ಟವೇರಲು ಏಣಿ ಏಣಿ ಕೊನೆಗೆ ಅಟ್ಟವಂತೆ! ಒಂದೊಂದು ಏಣಿ ಮೆಟ್ಟಿಲೇರಲೂ ಪ್ರಯಾಸ ದೀರ್ಘ ಪ್ರವಾಸ ಹಠ ಹಿಡಿದು ಉಪವಾಸ! ಎರಡನೇ ಮೆಟ್ಟಿಲೇರಿದರೆ ಮೊದಲ ಮೆಟ್ಟಿಲ ಮರೆವು ಏರುತ್ತಾ...

ಈ ಮಣ್ಣೊಳಗೆ…

ಮತ್ತೆ ಮತ್ತೆ ಬದುಕಿಗೊಡ್ಡುವ ಜೀವನೋತ್ಸಾಹದ ಪ್ರತೀಕವಾಗಿ ನಿಂತ. ಮದನಿಕೆಯರ ಚಿತ್ರ. ಕಣ್‌ ತುಂಬಿ ಮನ ತುಂಬಿ ಇಲ್ಲೇ ಇದೇ ನಿಜವೆಂದು ಭ್ರಾಂತ. ಧುಮ್ಮಿಕ್ಕಿ ಹರಿವ ಹೇಮೆ ಒಮ್ಮೆ ಮೇರೆ ಮೀರಿ ತುಳುಕಿ ಮೈಭಾರ ತಡೆಯದೇ...

ನಂಬಿಕೆ

ತೆನೆ - ೧ ಗಂಟೆಯ ಮುಳ್ಳು ನಿಂತಿದೆ ನಿಮಿಷದ ಮುಳ್ಳಿಗೋ ಗರಬಡಿದಿದೆ ಕ್ಷಣದ ಮುಳ್ಳು ಹೆಜ್ಜೆ ಕಿತ್ತಿಡಲಾರದೇ ಮೂಗುಬ್ಬಸದಿಂದ ತೆವಳುತಿದೆ ಸೋರುತ್ತಿದೆ ಗಳಿಗೆ ಬಟ್ಟಲು ಇನ್ನಾದರೂ ಹೊಸತಿಗೆ ತೆರೆಯಬಾರದೇ ಬಾಗಿಲು? ಪಿಸುಗುಟ್ಟುವ ಚಂದಿರ ಏರಿಸುತ್ತಾನೆ...
cheap jordans|wholesale air max|wholesale jordans|wholesale jewelry|wholesale jerseys