ಇದ್ದರೂ ಇರದಂತೆ

ಇದ್ದು ಬಿಡಬೇಕು ನಿನ್ನಂತೆ ಇದ್ದರೂ ಇರದಂತೆ ನಿತ್ಯ ನೆರೆದರೂ ಸಂತೆ ಇಲ್ಲ ಚಿಂತೆ! ಬಿಸಿಲು ಮಳೆ ಚಳಿಗಾಳಿಗೆ ಹಿಗ್ಗದೇ ಕುಗ್ಗದೇ ಎಲ್ಲಿಯೂ ಲೆಕ್ಕಕ್ಕೆ ಸಿಗದೇ ಯಾರಿಗೂ ವೇದ್ಯವಾಗದೇ ಇದ್ದು ಬಿಡಬೇಕು ನಿನ್ನಂತೆ ಇದ್ದರೂ ಇರದಂತೆ....

ರಸದೊಳಗೆ ಕಸ

‘ಯಾರು ತುಂಬಿಟ್ಟರೋ ಈ ಬಿಳಿಬಿಳಿ ಅಕ್ಕಿಯೊಳಗೆ ನೊರಜುಗಲ್ಲು ಕರಿ ಮಣ್ಣೆಂಟೆ ಹುಲ್ಲು ಬೀಜ ಭತ್ತ, ಹೊಟ್ಟು?’ ಸದಾ ಇವರ ಗೊಣಗು ಮೊಗದಲ್ಲಿಲ್ಲ ನಗು ಎಲ್ಲ ಶುದ್ಧವಿರಬೇಕು ಬೇಕೆಂದಾಕ್ಷಣ ಬಳಸುವಂತಿರಬೇಕು ಇವರಿಗೆ ತಿಳಿದಿಲ್ಲ ತಪ್ಪು ಅಕ್ಕಿಯದಲ್ಲ...

ಹೊಸ ಬೆಳಗು

ಶತ ಶತಮಾನಗಳಿಂದ ಅದೇ ದಡ ಅದೇ ಕಡಲು ಕಡಲ ಸಿಟ್ಟಿಗೆ ಮತ್ತೆ ಮತ್ತೆ ಹಲ್ಲೆಗೊಳಗಾಗುವ ದಡದ ಒಡಲು. ಕಬಂಧ ಬಾಹುಗಳ ಚಾಚಿ ದಡವನೇ ಬಾಚಿ ನುಂಗುವ ಹುನ್ನಾರ ಕಡಲಿನದು ದೈತ್ಯ ಕಡಲಲೆ ಎಷ್ಟಾದರೂ ತಟ್ಟಲಿ...

ರಸ್ತೆ ಪದ್ಯಗಳು

ಪ್ರತಿಯೊಂದು ರಸ್ತೆಯ ಎದೆಗೂಡು ಒಂದೊಂದು ನೋವಿನ ಮಡು ರಸ್ತೆ ತನ್ನ ನೋವು ಹೇಳುವುದಿಲ್ಲ ಬಿಡಿ ನಾವು ಕೇಳುವುದೂ ಇಲ್ಲ!   ರಸ್ತೆಗಳ ಗರ್ಭದೊಳಗೆ ಅದೆಷ್ಟೊಂದು ಗುಟ್ಟುಗಳಿವೆಯಲ್ಲಾ ವಿಪರ್ಯಾಸವೆಂದರೆ ರಸ್ತೆಗಳು ಮಾತನಾಡುವುದಿಲ್ಲ ಮಾತನಾಡಬಾರದಲ್ಲ! ಸಮವಾಗಿ ಜಲ್ಲಿತಟ್ಟಿ...

ಮಡಕೆ ಒಡೆವ ಆಟ

ಕಣ್ಣಿಗೆ ಕಟ್ಟಿದೆ ಪಟ್ಟಿ ಸಾಗಬೇಕಿದೆ ಕುರುಡುಹಾದಿ ಗುರಿಯ ಬೆನ್ನಟ್ಟಿ. ಕಲ್ಲುಮುಳ್ಳಿನ ದಾರಿ ದೂರದಲ್ಲೆಲ್ಲೋ ಅಸ್ಪಷ್ಟ ಗುರಿ ತಡವರಿಸಿ ತವಕಿಸಲು ಕೋಲೊಂದಿದೆ ಕೈಗೆ ಕಸುವು ಬೇಡವೇ ಮೈಗೆ? ಅಡ್ಡಾದಿಡ್ಡಿ ದಿಕ್ಕು ಕರೆದೆಡೆಗೆ ತಪ್ಪು ಹೆಜ್ಜೆ ಇಡುವ...

ಮತ್ತೆ ಮತ್ತೆ…

ಒಂದಿಷ್ಟೇ ಹೀರಿ ಪಕ್ಕಕ್ಕಿಟ್ಟಿದ್ದ ಕಾಫಿ ಕಪ್ಪಿನೊಳಗೆ ಭರ್ರನೆ ಹಾರಿ ಬಂದ ಪಾಪದ ನೊಣ ಸರ್ರನೆ ಬಿದ್ದಾಗ ಕರುಳು ಚುರ್ರೆಂದು ಎರಡೇ ಬೆರಳು ಕಾಫಿಯಲ್ಲಿ ಅದ್ದಿ ನೊಣ ಹೊರತೆಗೆದೆಸೆದು ‘ಜೀವ ಉಳಿಸಿದೆ’ ಎಂದು ಬೀಗುವಾಗ ರೆಕ್ಕೆ...

ತಪ್ಪುಗಳು

ಮೈಯೆಲ್ಲಾ ಕಣ್ಣಾಗಿ ಕಾಳು ಬಿಡಿಸುತ್ತಿದ್ದರೂ ಆಗೊಮ್ಮೆ ಈಗೊಮ್ಮೆ ಕಾಳಿನ ಬಟ್ಟಲಿಗೆ ಸಿಪ್ಪೆ ಸಿಪ್ಪೆಯ ಮೊರಕ್ಕೆ ಕಾಳು! ಮತ್ತೆ ಕಾಳಿನ ಬಟ್ಟಲಿನಲಿ ಸಿಪ್ಪೆಗಾಗಿ ಹುಡುಕಾಟ ಸಿಪ್ಪೆಯ ಮೊರದಾಳಕ್ಕೆ ಹುದುಗಿ ಹೋಗುವ ಪುಟ್ಟ ಕಾಳಿಗಾಗಿ ತಡಕಾಟ! ಹೆಕ್ಕುವ...

ಹೊಸ್ತಿಲಲ್ಲಿ ಕವಿತೆ

ಬೀದಿಗಿಳಿದ ಕವಿತೆ ಮತ್ತೆ ಬಾಗಿಲಿಗೆ ಬಚ್ಚಿಟ್ಟ ಬೆಳಕು ಒಳಗೆ ಕಣ್‌ ಕೋರೈಸುವ ಥಳುಕು ಹೊರಗೆ ಹೊರಗೋ? ಒಳಗೋ? ತರ್ಕದಲ್ಲಿ ಕವಿತೆ. ಬೀದಿಯರಿಯದ ಕವಿತೆ ಬಾಗಿಲಿಗೆ ಮೈಚೆಲ್ಲಿದೆಯಂತೆ ಒಳಗಿನ ಬಗೆಗೆ ನಂಬಿಕೆಯಿಲ್ಲ ಹೊರಗಿನ ಸೆಳೆತ ತಪ್ಪಿಲ್ಲ...

ನಿನಗರ್ಥವಾಗುವುದಿಲ್ಲ

ಜಗಕೆಲ್ಲಾ ಯಾಕಿಂಥಾ ನಿಶೆ ಕುಡಿಸಿ ನಶೆ ಏರಿಸುವೆಯೋ ಸೂರ್ಯ? ನಿನಗೆಲ್ಲವೂ ಹುಡುಗಾಟ ಕುಡಿಸಿ ಮನವ ಕೆಡಿಸುವ ಆಟ ಉನ್ಮತ್ತ ಪ್ರೀತಿಯಮಲು ನಿಷ್ಕಾರಣ ನಿರಾಕರಣದ ತೆವಲು ಸುಮ್ಮನೆ ಕಲ್ಲಾದವಳು ಭೂಮಿಯಾಳಕೆ ಇಳಿದು ಹೋದವಳು ಇರುವುದೆಲ್ಲವ ಬಿಟ್ಟು...

ತಕ್ಕಡಿಗಳು

ಮತ್ತೆ ಕತ್ತಲು ಆಳದಿಂದೆದ್ದ ತಕ್ಕಡಿಗಳು ರಂಗಸ್ಥಳವೇರಿ ತಕಥೈ ನರ್ತಿಸುತ್ತಾ ಬೆತ್ತಲು. ಈಗೆಲ್ಲವೂ ತಲೆಕೆಳಗು ಗೆದ್ದಲು ಹಿಡಿದ ಒಳಗು ಬೊಟ್ಟಿಟ್ಟ ಭಾರದ ತಟ್ಟೆ ಮೇಲೇರುತ್ತಲೇ ಕುಣಿಯುತ್ತದೆ. ಖಾಲಿ ತಕ್ಕಡಿ ತಟ್ಟೆ ಭಾರವಿಲ್ಲದೆಯೂ ಸರ್ರನೆ ಕೆಳಗಿಳಿದು ನೆಲದಲ್ಲೇ...
cheap jordans|wholesale air max|wholesale jordans|wholesale jewelry|wholesale jerseys