ಆಧಾರ

ಬೆಟ್ಟದಿಂದ ಹೆಬ್ಬೆಟ್ಟು ಗಾತ್ರದ ಕಲ್ಲ ತಂದು ಕೊರಳಿಗೆ ಕಟ್ಟಿ ಲಿಂಗ ಎನ್ನುವರು ಗಿಡದಿಂದ ಹಿಡಿ ಹತ್ತಿಯ ತಂದು ಹೊಸೆದು ಒಡಲಿಗೆ ಹಾಕಿ ಜನಿವಾರ ಎನ್ನುವರು ಬೆಟ್ಟ ಎಷ್ಟು ಲಿಂಗಗಳ ಗಿಡ ಎಷ್ಟು ಜನಿವಾರಗಳ ತಮ್ಮೊಳಗೆ...

ಗುಣ

ಕಲ್ಲ ಕಡೆದು ಕೂರಿಸಿ ಹಾಲು ಮೊಸರು ತುಪ್ಪ ಸುರಿದು ಅಭಿಷೇಕ ಮಾಡಿದರೆ ಕಳೆದು ಹೋಗಬಲ್ಲುದೆ ಕಲ್ಲಿನೊಳಗಿನ ಕಿಚ್ಚು ಮೈಗೆ ತೊಡಿಸಿದರೆ ವಜ್ರ ವೈಡೂರ್‍ಯ ಮಣ ಆಭರಣ ಬದಲಾಗಬಲ್ಲುದೆ ಒಡಲೊಳಗೆ ಹುಟ್ಟಿ ಬಂದಂಥ ಕೆಚ್ಚು *****

ಆಸ್ತಿ – ನಾಸ್ತಿ

ಒಂದು ಬೆಟ್ಟದ ಮೇಲೆ ಬೆತ್ತಲಾಗಿ ನಿಂತಿದ್ದಾನೆ ಗೊಮ್ಮಟ ಮತ್ತೊಂದು ಬೆಟ್ಟದ ಮೇಲೆ ತಿರುಪತಿ ತಿಮ್ಮಪ್ಪ ಹೊರಲಾಗದೆ ಹೊರುತ್ತಿದ್ದಾನೆ ಚಿನ್ನ ವಜ್ರ ವೈಡೂರ್‍ಯ ರತ್ನ ಖಚಿತ ಕಿರೀಟ ತೊರೆದು ಬೇಡುವ ಭಕ್ತರ ಪಾಲಿಗೆ ಎಲ್ಲವೂ ತೊಳಲಾಟ...

ಆಕಾರ

ದೊಡ್ಡ ಆನೆ ಒಂಟೆಯಲ್ಲಿಲ್ಲದ ವಿಷ ಸಣ್ಣ ಹಾವು ಚೇಳಿನೊಳಗೆ ಬಂತು ಉದ್ದ ತಾಳೆ ತೆಂಗಿಗಿಲ್ಲದ ಕಾರ ಗಿಡ್ಡ ಮೆಣಸಿನ ಗಿಡದೊಳಗೆ ಬಂತು ಬೆಟ್ಟಕ್ಕೆ ಸಲ್ಲದ ಭಯ ಭೀತಿ ಅದರ ಸಣ್ಣ ಕವಣೆ ಕಲ್ಲಿಗೆ ಬಂತು...

ಗತಿ

ಹೋಮ ಮಾಡಿದರು ಹವಿಸ್ಸು ಅರ್‍ಪಿಸಿದರು ಬೆಣ್ಣೆ ತುಪ್ಪ ಸುರಿದರು ಅಗ್ನಿಗೆ ಸಂತೈಸಿದರು ಅಡ್ಡಬಿದ್ದು ಆರಾಧಿಸಿದರು ಹೊರಗೆ ಬಂದರು ಸಿಗರೇಟು ಹಚ್ಚಿ ಸೇದಿದರು ಕೊನೆಗೆ ಉಳಿದ ಅಗ್ನಿಯ ಚೂರನ್ನು ಪಾಪ ಕಾಲಲ್ಲಿ ತುಳಿದು ಹೊಸಕಿದರು *****

ಮುಡಿ

ನಾನು ಪುಣ್ಯಕ್ಷೇತ್ರಗಳ ತೀರ್‍ಥಯಾತ್ರೆ ಮಾಡಿ ಮುಡಿ ಕೊಡಬೇಕೆಂದು ಹರಕೆ ಹೊತ್ತಿದ್ದೆ ದೇವರೇ ನನ್ನ ಮನೆಗೆ ಬಂದು ಮುಡಿ ತೆಗೆದುಕೊಂಡು ಹೋಗಿದ್ದಾನೆ ಬೇಕಾದರೆ ನೋಡಿ ಬೋಳಾಗಿದೆ ನನ್ನ ತಲೆ *****

ಭಂಡಾರ

ಅಕ್ಷರ ಎಂದರೆ ಬರಿ ಆಚಾರ ವಿಚಾರ ವ್ಯವಹಾರ ಭಾಷೆ ಬರೆವ ವ್ಯಾಪಾರ ಅಲ್ಲ ವ್ಯಾಸ, ವಾಲ್ಮೀಕಿ ದಾಸರ, ಶರಣರ ಮುಕ್ತಿಯ ಸೂತ್ರ ಭಕ್ತಿಯ ಸಾರ ಬಿಚ್ಚಿಟ್ಟ ಭಂಡಾರ ಬಚ್ಚಿಟ್ಟ ಸಾಗರ *****
cheap jordans|wholesale air max|wholesale jordans|wholesale jewelry|wholesale jerseys