ಜಾತಿ ಗೀತಿ ಎಂಬುದೆಲ್ಲ ಸುಳ್ಳು, ಕಂದ ಸುಳ್ಳು. ಮೇಲು ಕೀಳು ಎಂಬ ಮಾತು ವಿಷ ಸವರಿದ ಮುಳ್ಳು. ನೀತಿ ನಡತೆ ಹೃದಯ ಇರುವ ಮಾನವನೇ ಹಿರಿಯ, ನಂಬಬೇಡ ಭೇದದ ವಿಷ ಕುಡಿಸುವಂಥ ನರಿಯ! ಸುತ್ತ...
"ಗಿಡ, ಮರ, ಪ್ರಾಣಿ ಎಲ್ಲ ನಮ್ಹಾಗೇನಮ್ಮಾ? ಹೊಡದ್ರೆ ಬೈದ್ರೆ ಅವಕ್ಕೂ ನೋವು ಆಗತ್ತೇನಮ್ಮ?" "ಹೌದು ಮರಿ, ಮರ ಗಿಡ ಎಲ್ಲಾ ನಮ್ಮಂತೇ ಪ್ರಾಣೀನ್ ಕೂಡ ನೋಡ್ಕೋಬೇಕು ಮನೇ ಮಕ್ಳಂತೆ." "ಮತ್ಯಾಕ್ ಅವು ನಮ್ಹಾಗೇನೇ ಮಾತನ್...
ಟಾಮೀ ಟಾಮೀ ನಮ್ಮನೆ ನಾಯಿ ಚುರುಕು ಅಂದರೆ ಚುರುಕು, ಆದರೆ ಸದಾ ಬೊಗಳುತ್ತಿರುವುದು ಅದರ ಬಾಯೇ ಹರಕು! ತಿಂಡಿ ಎಂದರೆ ಕಿವಿಯನು ಎತ್ತಿ ಬಾಲ ಕುಣಿಸುವುದು, ವಾಸನೆ ಬಂದರೆ ಅಡಿಗೇ ಮನೆಗೇ ಸೀದಾ ನುಗ್ಗುವುದು!...
"ಒಂದು ಎಲ್ಲಕ್ಕಿಂತ ಮೊದಲು ಬರತ್ತೆ ಅಲ್ವೇನೋ? ಆಮೇಲ್ ಎರಡು ಮೂರು ನಾಲ್ಕು ಐದು, ಸರಿಯೇನೋ? ಹೇಳ್ಲ ಈಗ ಒಟ್ಟಾಗ್ ಮತ್ತೆ ಕಲಿತದ್ದೆಲ್ಲಾನೂ? ಒಂದು ಎರಡು ಮೂರು ನಾಲ್ಕು ಐದು-ಮುಂದೇನು?" "ಐದು ಆದ್ಮೇಲೆ ಹೇಳ್ಬೇಕಾದ್ದು ಆರು...
ನಾಯಿ ಬೆಕ್ಕು ಕುರಿ ಹಚ್ಚಿ ದೊಡ್ಡ ಉರಿ ಕಾಡು ತುಂಬ ಬೆಂಕಿ ಹತ್ತಿ ಚಳಿ ಕಾಸಿತು ನರಿ! *** ಡೊಳ್ಳು ಹೊಟ್ಟೆ ಗುಂಡ ತಿನ್ನೋದ್ರಲ್ಲಿ ಭಂಡ, ಕೇಳಿ ಕೇಳಿ ಹಾಕಿಸ್ಕೊಂಡು ತಿಂದ ನೂರು ಬೋಂಡ....