ವಾನ್‌ಗಾಫ್‌ನ ಬೂಟುಗಳು

ವಾನ್‌ಗಾಫ್ ಕೆಫೆಗಳನ್ನು ಚಿತ್ರಿಸಿದ ಬೀದಿಗಳನ್ನು ಚಿತ್ರಿಸಿದ ಪಾರ್ಕುಗಳನ್ನು ಚಿತ್ರಿಸಿದ ಹೊಲಗಳನ್ನು ಚಿತ್ರಿಸಿದ ಪೈನ್ ಮರಗಳನ್ನು ಬಣ್ಣದಲ್ಲಿ ಮುಳುಗಿಸಿದ ವಿಮರ್ಶಕರಂದರು "ಛೇ! ಛೇ! ಇಂಥವನ್ನೆಲ್ಲ ಚಿತ್ರಿಸುತ್ತಾರೆಯೇ? ಯಾರಾದರೂ! ಇಕಾರಸ್‌ನ ಮರಣ ಮಹಾ ಪ್ರಳಯ ಕ್ರೈಸ್ತನ ಪುನರುತ್ಥಾನ...

ಕೂಪಕ್ಕೆ ಬಿದ್ದ ಬೆಳಕು

ಆಸೆಯನ್ನೊಮ್ಮೆ ಜಾಡಿಸಿ ಕೊಡವಿ ಮೇಲೆದ್ದು ಬಂದವನಂತೆ ನಟಿಸಿದ ಆತ ಕಾವಿ, ಜಪಮಣಿಯನ್ನು ಬಹಳವಾಗಿ ಪ್ರೀತಿಸುತ್ತ ಸ್ವಾರ್ಥಕ್ಕೆ ಬೆನ್ನು ತಿರುಗಿಸಿ ನಿಂತಂತೆ. ಚಿತ್ರ-ವಿಚಿತ್ರ ಬದುಕಿನ ಲಯವ ಮಾರ್ಪಡಿಸಲೆಂಬಂತೆ ಜಗಕೆ ಬೆಳಕಿನ ಬಟ್ಟೆ ತೊಡಿಸಲು ಮಠ ಮಾನ್ಯವಾಯಿತು...

ಹಸಿವು

ಮುತ್ತಿನ ಹನಿಗಳನ್ನುಕೆಂಡದ ತುಟಿ ಹೀರಿತು. ಮುಗುಳು ನಕ್ಕ ಚಿಗುರನ್ನುನೆಲ ನಿಷ್ಕರುಣೆಯಿಂದ ನುಂಗಿತು. ಹಸಿದ ಒಡಲು ಬಾದಾಮಿಕಣ್ಣುಗಳನ್ನೂ ಬಿಡಲಿಲ್ಲ. ಒಂದು ಹಿಡಿ ಮೆದುಳುಜಗತ್ತಿನ ನಾಡಿಯಾದನೀರು, ನೆಲ, ಆಕಾಶಕೊನೆಗೆ-ಪ್ರೇಮವನ್ನೂ ಧೂಳಾಗಿಸಿತು. ತಾಯಿಯ ವಾತ್ಸಲ್ಯಪೂರಿತಕಣ್ಣುಳ್ಳ ಸೂರ್ಯನನ್ನೇ ಕೇಳಿದೆ-ನಿನಗೇನಾದರೂ ಹೇಳುವುದಿದೆಯೇ?...

ಹೂವು ಹೂವಿಗೆ ಹೇಳಲಿ

ದೇವ ದೇವನ ಮಾತು ಕೇಳಲಿ ಹೂವು ಹೂವಿಗೆ ಹೇಳಲಿ || ಕೊಳಲ ಗಾನಕೆ ಮಳಲು ಕರಗಲಿ ಮುಳ್ಳು ಮಲ್ಲಿಗೆಯಾಗಲಿ ಬಿಸಿಲು ತಣ್ಣಗೆ ತಂಪು ತುಂಬಲಿ ಚಂದ್ರಬಿಂಬವ ಕುಡಿಯಲಿ ಸ್ವೈರ ಕೇಳಿ: ವೈರ ಹೋಳಿ ಗೈರು...
ವ್ಯವಸ್ಥೆ

ವ್ಯವಸ್ಥೆ

ಪ್ರಾಚೀನ ಕಾಲದ ಹಿಂದುಗಳು ಜಗತ್ತು ಹಾಗೂ ಅದರ ರಚನೆಯ ವಿಷಯದಲ್ಲಿ ಒಂದು ವಿಚಿತ್ರವಾದ ಕಲ್ಪನೆಯನ್ನು ಇಟ್ಟುಕೊಂಡಿದ್ದರು. ಹಾಗು ಆ ಕಲ್ಪನೆಯ ಆಶಯವು ವ್ಯವಸ್ಥೆಯನ್ನು ನಿರೂಪಿಸುವುದೇ ಆಗಿತ್ತು. ಮನುಷ್ಯನಿರುತ್ತಿದ್ದ ಭೂಖಂಡಕ್ಕೆ ಜಂಬುದ್ವೀಪವೆಂಬ ಹೆಸರಿತ್ತು. ಅದರ ಸುತ್ತುಮುತ್ತಲು...

ಕವಿ ಸೃಷ್ಟಿ

ಗಾಳ ಬೀಸಿ ಕೊಳಕ್ಕೆ ದಡದಲ್ಲಿ ಕಾಯುತ್ತ ಜೊಂಪಿನಲ್ಲಿರುವ ನಿಷ್ಪಂದ ಬೆಸ್ತ. ಸಾಕುಹಕ್ಕಿಯ ಮೇಲೆ ತೂರಿ, ಹೊಸಹಕ್ಕಿಯನು ಒಲಿಸಿ ನೆಲಕಿಳಿಸುತ್ತ ನಿಂತ ದಿಟ್ಟ ಹಿಂದೆ ಬಾವಿಗೆ ಜಾರಿ ತಳಕಿಳಿದು ಮರೆತ ಸರಕುಗಳ ತರುವ ಪಾತಾಳಗರಡಿ. ಸ್ವಾತಿ...