ಷೇಕ್ಸ್‌ಪಿಯರನನ್ನು ಕುರಿತು

ನನ್ನ ಷೇಕ್ಸ್‌ಪಿಯರನ ಪವಿತ್ರ ಅಸ್ಥಿಯನಿಡಲು ಯುಗ ದುಡಿದು ಜೋಡಿಸಿದ ಕಲ್ಲರಾಶಿಯ ಮಹಲು ಬೇಕೆ ? ಅಥವಾ ಮುಗಿಲ ಇರಿವ ಪಿರಿಮಿಡ್ಡುಗಳ ತೆರೆ ಸಾಕೆ ಮರೆಸಲು ಪುನೀತ ಅವಶೇಷಗಳ? ಸ್ಮೃತಿಯ ಪ್ರಿಯಪುತ್ರನೇ, ಪ್ರಥಮಪಾತ್ರನೆ ಎಲ್ಲ ಕೀರ್‍ತಿಗೂ,...

ನಿನ್ನ ಪ್ರೀತಿಸಿ ನಾನು ನಿನಗಿತ್ತ ಮಾತನ್ನು

ನಿನ್ನ ಪ್ರೀತಿಸಿ ನಾನು ನಿನಗಿತ್ತ ಮಾತನ್ನು ಮುರಿದೆ ನಿಜ, ನೀನೊ ಮುರಿದಿರುವೆ ಎರಡೆರಡು ಸಲ; ಒಮ್ಮೆ ಹಾಸಿಗೆಯಲ್ಲಿ ಕೊಟ್ಟ ಭರವಸೆಯನ್ನು, ಮತ್ತೆ ಕೂಡಿಕೆಯಾಗಿ ಕೊಟ್ಟ ಮಾತನ್ನು ಸಹ. ಯಾಕೆ ದೂರಲಿ ಹೇಳು ಮಾತ ಮುರಿದವಳೆಂದು,...

ಇಷ್ಟು ಕೊರತೆಗಳಿದ್ದೂ ನನ್ನೆದೆಯನ್ನಾಳುವ

ಇಷ್ಟು ಕೊರತೆಗಳಿದ್ದೂ ನನ್ನೆದೆಯನ್ನಾಳುವ ಇಂಥ ಅದ್ಭುತ ಶಕ್ತಿ ಎಲ್ಲಿಂದ ಪಡೆದೆಯೆ ? ಕಣ್ಣಿಂದ ಕಂಡದ್ದ ಸುಳ್ಳೆಂದು ಹುಸಿನುಡಿವ ಕಪ್ಪು ಬಿಳುಪೆಂದು ವಾದಿಸುವ ಬಲ ನೀಡಿದೆಯೆ ? ಕೆಟ್ಟದೂ ಒಳಿತೆನಿಸುವುದು ಹೇಗೆ ನಿನ್ನಿಂದ ? ಯಾರು...

ನನ್ನನ್ನೆ ಬಿಟ್ಟು ನಾ ನಿನ್ನ ಪರವಿರುವಾಗ

ಓ ಕ್ರೂರಿ ನಿನ್ನ ನಾನೊಲಿದಿಲ್ಲವೇ ಹೇಗೆ ? ದುಷ್ಟಳೇ ನಿನಗಾಗಿ ನನ್ನನ್ನೆ ಮರೆತಾಗ ನಿನ್ನ ಕುರಿತೇ ನಾನು ಯೋಚಿಸುವುದಿಲ್ಲವೇ ? ನಿನ್ನ ಹಗೆ ಯಾರನ್ನು ಗೆಳೆಯ ಎಂದಿರುವೆನೆ ? ನಿನಗಾಗದವರನ್ನು ಎಂದು ಓಲೈಸಿರುವೆ ?...

ಅಯ್ಯೋ ನಾನೇ! ಕಂಡ ಸತ್ಯವನೆ ಗ್ರಹಿಸದ

ಅಯ್ಯೋ ನಾನೇ! ಕಂಡ ಸತ್ಯವನೆ ಗ್ರಹಿಸದ ಎಂಥ ಕಣ್ಣನು ಒಲವು ನನ್ನ ಮುಖಕಿರಿಸಿತು ಗ್ರಹಿಸದಿದ್ದರೆ ಇರಲಿ ಕಂಡದ್ದ ತಪ್ಪಾಗಿ ವ್ಯಾಖ್ಯಾನಿಸುವ ನನ್ನ ಅರಿವೇನಾಯಿತು? ಕಣ್ಣು ಕಂಡದ್ದು ಚೆಲುವಾಗಿದ್ದ ಪಕ್ಷಕ್ಕೆ ಹಾಗಿಲ್ಲ ಎನುವ ಲೋಕದ ಮಾತಿಗೇನರ್‍ಥ?...

ವಿದಾಯ

(೧೯೧೧ನೆಯ ಏಪ್ರಿಲ್‌ ತಿಂಗಳ `Modern Review' ಮಾಸಪತ್ರಿಕೆಯಲ್ಲಿ ಪ್ರಕಟವಾದ ಶ್ರೀ ರವೀಂದ್ರನಾಥ ರಾಕೂರರ "Farewell"ಎಂಬ ಕವಿತೆಯನ್ನು ಅನುವರ್ತಿಸಿ ಬರೆದುದು) ಪೋಗಗೊಡೆನ್ನನು ತಾಯೆ ಬಿಡು, ಮುದ್ದಿನ ತಾಯೇ ಪೋಗಗೊಡು! ಮಬ್ಬ ಮರೆಯ ಮುಂಜಾನೆಯಲಿ ಬರಿತೋಳ್ಗಳ ನಿಡುಚಾಚುತಲಿ,...

ನನ್ನ ಪ್ರೀತಿಯೊ ಜ್ವರದ ರೀತಿ, ರೋಗವ ಬೆಳೆಸಿ

ನನ್ನ ಪ್ರೀತಿಯೊ ಜ್ವರದ ರೀತಿ, ರೋಗವ ಬೆಳೆಸಿ ಪೋಷಿಸುವ ರೀತಿ ನೀತಿಯನೆ ಅದು ವರಿಸುವುದು; ರೋಗಿನಾಲಗೆಯ ಸಲ್ಲದ ರುಚಿಗಳನು ತಣಿಸಿ ಖಾಯಿಲೆಯ ಉಳಿಸುವ ವಿಧಾನವನೆ ಬಳಸುವುದು ಗೊತ್ತುಮಾಡಿದ ಪಥ್ಯ ನಡೆಸದ್ದಕ್ಕೆ ಮುನಿದು ವಿವೇಕ, ಪ್ರೀತಿಯ...

ಹಿಂದುಸ್ತಾನ್‌ ಹಮಾರಾ

(ಲಾಹೋರಿನ ಡಾ ಶೇಖ್‌ ಮಹಮ್ಮದ್‌ ಇಖ್ಬಾಲರ ಉರ್ದು ಘಜಲನ್ನು ಅವಲಂಬಿಸಿ ಬರೆದುದು) ನಮ್ಮವಳೀ ಭಾರತ ಜನನಿ ||ಧ್ರುವ|| ಭೂಮಂಡಲದಿ ರಮಣೀಯಂ ಈ ಭಾರತವೆಮ್ಮಯ ನಿಲಯಂ, ನಾವೀಕೆಯ ಮರಿದುಂಬಿಗಳು, ಈಕೆಯೆಮ್ಮ ಜೀವನನಳಿನಿ ||೧|| ನಾವೆತ್ತಲಲೆದರು ಮುದದಿ...

ಬಂಡೆದ್ದ ಶಕ್ತಿಗಳು ಸುತ್ತ ಮುತ್ತಿದ ನನ್ನ

ಬಂಡೆದ್ದ ಶಕ್ತಿಗಳು ಸುತ್ತ ಮುತ್ತಿದ ನನ್ನ ಪಾಪಭೂಮಿಯ ನಡುವೆ ನಿಂತ ಬಡ ಆತ್ಮವೇ, ಬಳಿದು ಹೊರಗೋಡೆಗೆ ಅಂಥ ಚಂದದ ಬಣ್ಣ ಒಳಗೊಳಗೆ ಕೊರತೆ ಅನುಭವಿಸಿ ನವೆಯುವೆ ಏಕೆ ? ಈ ಮಹಲೊ ನಾಲ್ಕು ದಿನದಲ್ಲೆ...

ಚಿಟ್ಟೆಗೆ

(Wordsworth ಎಂಬ ಅಂಗ್ಲ ಕವಿಯ ಕವಿತೆಯನ್ನು ಅವಲಂಬಿಸಿ ಬರೆದುದು) ನಿಂದಿರು ಕುಲುಂಕದಿರೆರಂಕೆಗಳ ನಿನ್ನ, ಮುಂದು ಬಳಿಸಂದು ಕುಣಿ ಕಣ್ಣೆದುರೊಳೆನ್ನ, ನಿನ್ನ ನಿರುಕಿಸಲೊರೆವೆನೊರೆವ ಕಳೆನುಡಿಯ ನನ್ನೆಳೆಯ ಬಣ್ಣಿಸುವ ಚಿಣ್ಣ ಕವಿಯೊಡೆಯ! ೪ ಹೊನ್ನಿನಂಬಿಯ ಗಾಡಿಯಿಂದ ತೇಲಾಡು,...
cheap jordans|wholesale air max|wholesale jordans|wholesale jewelry|wholesale jerseys