ಇದೇನು ಭಾಗ್ಯವೊ ನಿನ್ನ ಕಂಡೆನು ಮರಳಿ ದಕ್ಷಿಣದ ಕಾಶಿ ಈಶ ಸದಮಲಾಭ್ಯುದಯೇಶ ನಮೊನಮೋ ಜಗದೀಶ ಮುದಿತಳಾದೆನೋ ಸ್ವಾಮಿ ಭಕ್ತಜನಪೋಷಾ ಹರಡಲೊಲ್ಲದು ನುಡಿಯು ನಿನ್ನ ಹಿರಿಮೆಯ ಬಗೆದು ಪರಮಾತ್ಮ ನೀಲಕಂಠ ಶಿರಬಾಗಿ ನಿಂದಿಹೆನು ಹಣ್ಣಾಗಿ ಬಂದಿಹೆನು...
ಕಸಕಿಂತ ಕಡೆಯಾಯ್ತೆ ಹೆಣ್ಣು ಜನ್ಮವು ನಿನಗೆ ಈ ಭಾರ ಹೊರಿಸುವುದಕೆ ಲಂಚಕೋರನು ನೀನು ವಂಚನೆಯ ಮಾಡಿರುವೆ ಮೃದುತನದ ಸ್ತ್ರೀವರ್ಗಕೆ ಗಿಡವೆಂದು ಬಗೆದೆಯೋ ಹೆಣ್ಣು ಜನ್ಮದ ಒಡಲ ಫಲಗಳನು ಸೃಜಿಸುವುದಕೆ ಕವಣೆ ಕಲ್ಲೋ ನಿನ್ನ ಮಾನಸವು...
ಪರದೇಶಿ ಸಾಗಿಹಳು ಸಂತೆಗಾಡಿಯೊಳು ಹರಹರಾ ಎಂದೆನುತ ಶಿರಬಾಗಿಸಿದಳು ಸಂತೆ ಮಾಡಿದ ಯಾವ ಲಕ್ಷಣಗಳಿಲ್ಲ ಚಿಂತೆ ಮಾಡುತ ಜನರ ಮಧ್ಯೆ ಕುಳಿತಿಹಳು ತಕ್ಕಡಿ ಸೇರಿಲ್ಲ ಹೊಗೆಪುಡಿಯು ಇಲ್ಲ ಪಕ್ಕದೊಳು ಕಾಳಿನ ಚೀಲಗಳು ಇಲ್ಲ ಎಣ್ಣೆ ಡಬ್ಬಗಳಿಲ್ಲ...