ಅನೃತದಿ ಛೇದಿಸಿದ ಕೊರಳನು ಹೆಜ್ಜೆಯ ಸಪ್ಪಳ ಕೇಳಿ ಭೀಷ್ಮರು ಕಣ್ತೆರೆದರು. ಕಳೆದ ರಾತ್ರಿ ಸರಿಯಾಗಿ ನಿದ್ದೆ ಇಲ್ಲದೆ ಇಂದು ಇಡೀ ದಿನ ಅವರು ಆಗಾಗ ಮಂಪಿನಲ್ಲಿದ್ದರು. ಹಗಲು ನಿದ್ದೆ ಮಾಡಿದರೆ ರಾತ್ರಿಯನ್ನು ಕಳೆಯುವುದು ಹೇಗೆಂಬ...
ನಿಶೆಯ ಸಮರದಿ ಉರುಳಿದನು ಧರೆಗೆ ದುರ್ಯೋಧನ, ದುಶ್ಶಾಸನರು ಬಿಡದಿಯಿಂದ ಹೊರಟು ಹೋಗಿ ಎಷ್ಟೋ ಹೊತ್ತಾಗಿತ್ತು. ಕಾಡುತ್ತಿರುವ ಅಂಬೆಯ ನೆನಪಿನಿಂದಾಗಿ ಎಷ್ಟು ಯತ್ನಿಸಿದರೂ ಭೀಷ್ಮರಿಗೆ ನಿದ್ದೆ ಬರಲಿಲ್ಲ. ಸಣ್ಣ ಚಲನೆಯೂ ಎದೆಯಲ್ಲಿ ಅಪಾರ ನೋವನ್ನುಂಟು ಮಾಡುವುದರಿಂದ...
ಕ್ಷಾತ್ರವಚನದಿ ಗೆಲಿದನಾರಣವ ಭೀಷ್ಮರು ಮಗ್ಗುಲು ಬದಲಾಯಿಸಿದರು. ಎದೆಯ ನೋವು ತೀವ್ರವಾಗುತ್ತಾ ಹೋಗುತ್ತಿದೆ. ಯುದ್ಧ ಹದಿನಾಲ್ಕನೆಯ ದಿನಕ್ಕೆ ಕಾಲಿಟ್ಟಿದೆ. ಇನ್ನು ಎಷ್ಟು ದಿನವೊ? ಈ ಬಾಣ ಅದಾಗಿಯೇ ಯಾವತ್ತು ಬಿದ್ದು ಹೋಗುತ್ತದೆಯೊ? ದೇಹಕ್ಕೆ ಸುಖವಿಲ್ಲ, ಮನಸ್ಸಿಗೆ...
ಜಲದೊಳರಳಿತು ಪ್ರೇಮಕಮಲ ಸೌಭದೇಶದ ಗಡಿಯವರೆಗೆ ಅವಳನ್ನು ಕರೆತಂದ ಹಸ್ತಿನಾವತಿಯ ರಥ ಅಲ್ಲಿ ನಿಂತಿತು. ಹಸ್ತಿನಾವತಿಯಿಂದ ಸೌಭಕ್ಕೆ ಎರಡು ದಿನಗಳ ಪಯಣ. ಎರಡು ರಾತ್ರೆಗಳನ್ನು ಛತ್ರಗಳಲ್ಲಿ ಕಳೆದು, ಅವುಗಳ ಸನಿಹದಲ್ಲೇ ಇದ್ದ ಅಶ್ವಶಾಲೆಗಳಲ್ಲಿ ಕುದುರೆಗಳನ್ನು ಬದಲಾಯಿಸಿ...
ಶಿಶುವ ಬಲಿಗೊಂಡಳಾ ರಣಮಾರಿ ಏಳಲಾಗುತಿಲ್ಲ. ಏಳಬಾರದೆಂದು ರಾಜವೈದ್ಯರು ಕಟ್ಟಪ್ಪಣೆ ಮಾಡಿಬಿಟ್ಟಿದ್ದಾರೆ. ಇಷ್ಟು ದಿನ ಆರೋಗ್ಯವಾಗಿ ಓಡಾಡಿಕೊಂಡಿದ್ದವನು, ಆದೇಶಗಳನ್ನು ಹೊರಡಿಸಿ ಕೆಲಸ ಮಾಡಿಸಿಕೊಳ್ಳುತ್ತಿದ್ದವನು ಈಗ ಮಂಚದಲ್ಲಿ ಮಲಗಿ ಯೋಚಿಸುವಂತಾಗಿದೆ. ಎರಡು ದಿನಗಳಾದವು ಬಾಣ ಚುಚ್ಚಿ. ಆ...
ಶೌರ್ಯದಲಿ ಗೆದ್ದವನ ವಧುಗಳು ಕಾಶಿ ಮತ್ತು ಅಯೋಧ್ಯೆಗಳ ನಡುವಣ ಪುಟ್ಟ ಪಟ್ಟಣ ರಜತನಗರಿಯ ಛತ್ರದಲ್ಲಿ ರಾತ್ರಿ ತಂಗುವಾಗ ರಾಜಕುವರಿಯರಿಗೆ ಪ್ರತ್ಯೇಕ ಕೊಠಡಿಯೊಂದು ಸಿಗುವಂತೆ ಭೀಷ್ಮರು ಏರ್ಪಾಡು ಮಾಡಿದ್ದರು. ಮರುದಿನ ಅಯೋಧ್ಯೆಯಲ್ಲಿ ತಂಗಬೇಕಾಯಿತು. ರಥಕ್ಕೆ ಕಟ್ಟಿದ್ದ...
ಹಸ್ತಿನೆಯನವ ಬಿಟ್ಟನೇತಕೆ ಅವಳ ಬಗ್ಗೆ ಮೊದಲ ಸುದ್ದಿ ತಂದದ್ದು ಒಬ್ಬ ವಾರ್ತಾವಾಹಕ. ಅವನಿಗೆ ಹಸ್ತಿನಾವತಿಯಾದ್ಯಂತ ಮಾರುವೇಷದಲ್ಲಿ ಸಂಚರಿಸುತ್ತಿದ್ದ ಗೂಢಚರರು ಸುದ್ದಿಮುಟ್ಟಿಸಿದ್ದರು. ಅದು ಅವಳ ಸ್ವಯಂವರದ ಸುದ್ದಿ. ಆರ್ಯಾವರ್ತದಲ್ಲಿ ಅದೆಷ್ಟೋ ಸ್ವಯಂವರಗಳು ನಡೆಯುತ್ತಿರುತ್ತವೆ. ಇದೊಂದು ಸುದ್ದಿ...
ಆ ಕೇಸಿನ ತೀರ್ಪನ್ನು ಜಜ್ಜು ಸಾಹೇಬರು ನಾಳೆ ನೀಡಬೇಕು. ಸಾಹೇಬರಿಗೆ ಎಷ್ಟು ಯೋಚಿಸಿದರೂ ಪರಿಹಾರ ಹೊಳೆಯುತ್ತಿರಲಿಲ್ಲ. ಮನೆಯಲ್ಲಿ ಎಲ್ಲರೂ ಮಲಗಿ ನಿದ್ರಿಸುತ್ತಿದ್ದರೆ ಇವರು ಮಹಡಿ ಮೇಲಿನ ತಮ್ಮ ಅಧ್ಯಯನ ಕೊಠಡಿಯಲ್ಲಿ ಕತ್ತಲಲ್ಲಿ ಬುದ್ಧನಂತೆ ಕೂತಿದ್ದರು....