ಆಂಗ್ಲಭಾಷಾ ಉಪನ್ಯಾಸಕಿ
ಪ್ರಕಟಿತ ಕೃತಿಗಳು: ಏಣಿ ಮತ್ತು ಪದಗಳೊಂದಿಗೆ ನಾನು[ ಕವನ ಸಂಕಲನಗಳು,] ಪಾಶ್ಚಿಮಾತ್ಯ ಸಾಹಿತ್ಯ ಲೋಕ [ಅಂಕಣಬರಹ ಕೃತಿ]
ಪ್ರಶಸ್ತಿಗಳು: ಏಣಿ ಕವನ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಮತಿ ಶಾರದಾ ರಾಮಲಿಂಗಪ್ಪ ದತ್ತಿ ಪ್ರಶಸ್ತಿ,
ಸಂಕ್ರಮಣ ಕಾವ್ಯ ಪ್ರಶಸ್ತಿ ೨೦೧೬, ರವಿಕಿರಣ ಸಾಹಿತ್ಯ ಪ್ರತಿಷ್ಠಾನ ಬೆಂಗಳೂರು ಪ್ರಥಮ ಕಥಾ ಬಹುಮಾನ ೨೦೧೮ , ತುಷಾರ ಮಾಸ ಪತ್ರಿಕೆಯ ಕ್ಯಾಲಿಫೋನರ್ಿಯಾ ಕಾವ್ಯಾಂಜಲಿ ತೃತೀಯ ಕಥಾ ಬಹುಮಾನ ೨೦೧೮ ಇತ್ಯಾದಿ ಬಹುಮಾನ ಬಂದಿದೆ.ಮೊಗವೀರ ಮಾಸಪತ್ರಿಕೆ ಮುಂಬಯಿ ೨೦೧೭ರ ಸಮಾಧಾನಕರ ಕಥಾ ಬಹುಮಾನ, ಕರಾವಳಿ ಮುಂಜಾವು ದಿನಪತ್ರಿಕೆಯ ದೀಪಾವಳಿ ಕಥಾ ಸ್ಪಧರ್ೆಗಳಲ್ಲಿ ಬಹುಮಾನ ಇತ್ಯಾದಿ ಬಂದಿರುತ್ತವೆ.
ಮೋಡನ ಮನೆಯೊಳಗೆ ಸರಿಗಮ ಸ್ವರ ಏರಿಳಿತ ಕಪ್ಪು ಬಿಳಿ ಚಿತ್ತಾರ ಆಗಾಗ ನೇಸರನ ಕಣ್ಣು ಮುಚ್ಚಾಲೆ ಕೆಂಬಣ್ಣ ರಾಚಿದ ಚಿತ್ರದಲಿ ಭೂಮಿ ವಧು ಸುಳಿಗಾಳಿ ಬೀಸುತಿದೆ ಬಿಸಿಲ ಕಾವಿಗೆ ಹುಡಿ ನೆಲ ಗರ್ಭದಿ ಏರಿ...
ಮೊದಮೊದಲು ನನ್ನಕ್ಕನ ಕೂಡ ನಾ ಪಾಟಿ ಚೀಲವ ಹೊತ್ತು ಶಾಲೆ ಮೆಟ್ಟಿಲು ಹತ್ತಿದ ಕ್ಷಣ ಮಣಿ ಪಾಟಿಯಲ್ಲಿ ಒಂದೆರಡು ಕಾಗುಣಿತ ಕಲಿತ ದಿನ ಮೊದಮೊದಲು ನನ್ನಪ್ಪನ ಕೈಯಲ್ಲಿ ಕೈಯಿಕ್ಕಿ ನಡೆದು ದೊಡ್ಡ ದೇವನ ಜಾತ್ರೆ...
ಈಗೀಗ ಅವಳು ನಾಚಿಕೊಳ್ಳುವುದಿಲ್ಲ ಮೊದಲಿನಂತೆ ನೀರಾಗುವುದಂತೂ ದೂರದ ಮಾತೇ ಸರಿ ಮೂಗುತಿಯ ನತ್ತು ಅವಳೀಗೀಗ ಭಾರವೆನಿಸುತ್ತಿಲ್ಲ ಮುಂಗುರುಳು ನಲಿದು ಮುತ್ತಿಕ್ಕುವುದಿಲ್ಲ ಗಲ್ಲಗಳ ಚುಂಬಿಸಿ ಅವಳ ನುಡಿಯಲ್ಲಿ ಅಂದಿನ ಹುಡುಗಾಟವಿಲ್ಲ ಕಣ್ಣುಗಳಲ್ಲಿ ಆಗೀನ ಚಂಚಲತೆಯಿಲ್ಲ ನೆಟ್ಟ...
ಎಲ್ಲರಂತಿರಲಿಲ್ಲ ನನ್ನ ತಂದೆ ಹೆಣ್ಣ ಕರುಳ ಗಂಡು ಜೀವ ಮಕ್ಕಳೆಂದರೆ ಅವಗೆ ಮರಳು ಮಾಯೆ ಗುರಿಯ ತತ್ವದ ತಿಳಿಸಿ ದಿಟ್ಟತನವನು ಕಲಿಸಿ ಬದುಕು ಚಾತುರ್ಯ ಬೆರೆಸಿ ಬೆಳಸಿದನು ಪುಟ್ಟ ಕೈಗಳ ಹಿಡಿದು ಭರವಸೆಯ ಒತ್ತಿದನು...