ದಿನಚರಿ

ರಜದಲ್ಲೇನು ಮಾಡುವಿರಿ ಎಂದು ಕೇಳಿದರು ಟೀಚರು ಊರಿಗೆ ಹೋಗುತ್ತೇವೆ ಎಂದರು ಒಬ್ಬಿಬ್ಬರು ಊಟ, ಆಟ ಎಂದು ಪಿಸುಗುಟ್ಟಿ ನಕ್ಕರು ತುಂಟರು ಒಬ್ಬರಿದ್ದಂತಿದ್ದರಲ್ಲವೆ ಇನ್ನೊಬ್ಬರು? ತಲೆಗೊಂದರಂತೆ ಮಾತು ಗದ್ದಲಿಸಿದರು ಅದೇನು ಮಾಡುತ್ತಿರೊ ಮಾಡಿ ಅಂದರು ಟೀಚರು...

ಸ್ಥಿತಿ

ಹೂವಿನ ಗೋಣು ಮುರಿದು ಹೂದಾನಿಯಲ್ಲಿ ಇರಿಸುತ್ತೇನೆ. ಗೆದ್ದಲು ಹುಳುಗಳು ಗೋಡೆಯ ಮೇಲೆ ಶಿಲ್ಪ ಕಡೆದಿದ್ದರೆ ಭಗ್ನಗೊಳಿಸುತ್ತೇನೆ. ಸಕ್ಕರೆಯ ಬೆಟ್ಟು ಹೊತ್ತು ಹರಿವ ಸಾಲು ಇರುವೆಗಳನ್ನು ಒತ್ತರಿಸಿ ಗುಡಿಸಿಹಾಕುತ್ತೇನೆ. ಸೂರಿನಡಿ ಗುಬ್ಬಿಗಳು ಕಾಳು ಕಡ್ಡಿ ಹೆಕ್ಕಿ...

ಕನ್ನಡಿ ನನ್ನನ್ನು ನೋಡಿತು

(ಝೆನ್‌ಗುರು ಚುಅಂಗ್‌ತ್ತು ಹೀಗೆ ಹೇಳುತ್ತಾನೆ: ಕನ್ನಡಿಯನ್ನು ನೋಡಿ - ಅದು ಏನನ್ನೂ ಸ್ವೀಕರಿಸುವುದಿಲ್ಲ. ಏನನ್ನೂ ತಿರಸ್ಕರಿಸುವುದಿಲ್ಲ. ಅದು ಏನಿದ್ದರೂ ಗ್ರಹಿಸುತ್ತದೆ) ಕನ್ನಡಿ ನನ್ನನ್ನು ನೋಡಿತು. ನನ್ನ ಕಣ್ಣಂಚಿನ ನೀರನ್ನೂ ತನ್ನ ತುಟಿಯಂಚಿನ ನಗೆಯನ್ನೂ ನನ್ನ...

ಚಂದ್ರನನ್ನು ಕರೆಯಿರಿ ಭೂಮಿಗೆ

ಪುಟ್ಟ ಮಕ್ಕಳು ಚಂದ್ರನನ್ನು ಕರೆಯುತ್ತಿದ್ದಾರೆ ಭೂಮಿಗೆ. ನಾನೂ ಮಗುವಾಗಿದ್ದಾಗ ಮೊಗ್ಗಿನಂತಹ ಬೆರಳುಗಳನ್ನು ಮಡಿಸಿ ಅರಳಿಸಿ ಚಂದ್ರನನ್ನು ಕರೆದಿದ್ದೆ ಭೂಮಿಗೆ. ನನ್ನ ತಮ್ಮಂದಿರು, ತಂಗಿ ಗೆಳೆಯ ಗೆಳೆತಿಯರು ಯಾರೆಲ್ಲ ಕರೆದಿದ್ದರು ಭೂಮಿಗೆ. ಗೂಡಲ್ಲಿ ಕಣ್ಣರಳಿಸಿ ಕೂತಿರುವ...

ಮೌನದ ಗಂಟೆ

(ಭಾರತದಿಂದ ಗಡೀಪಾರು ಮಾಡಲ್ಪಟ್ಟ ಬೌದ್ಧದರ್‍ಮ ಚೀನಾ, ಜಾಪಾನುಗಳಿಗೆ ವಲಸೆ ಹೋಗಿ ಕ್ರಮೇಣ ಅಲ್ಲಿ ಕವಲೊಡೆದ ಶಾಖೆಗಳಲ್ಲಿ ಪ್ರಮುಖವಾದ ಶಾಖೆಯೆ ‘ಝೆನ್’. ಶೊಯ್‌ಚಿ ಒಬ್ಬ ಝೆನ್ ಧರ್‍ಮಗುರು. ಆತ ತನ್ನ ಶಿಷ್ಯರಿಗೆ ಸೂತ್ರಗಳ ಪಠಣ ಕೈಬಿಟ್ಟು...

ನೀನೆಂಬುದಿಲ್ಲದಿದ್ದರೆ…. ನಾನೆಂಬುದೂ ಇಲ್ಲ

ನೀನೆಂಬುದಿಲ್ಲದಿದ್ದರೆ ನಾನೆಂಬುದೂ ಇಲ್ಲ. ಗಿಡ ಮರ ಹೂಗಳಿಲ್ಲ. ಹಕ್ಕಿ ಹಾಡು, ಗೂಡುಗಳಿಲ್ಲ. ಕತ್ತಲ ತೊಡೆಯುವ ಸೂರ್‍ಯ ಕಲ್ಮಶಗಳನ್ನು ತೊಳೆಯುವ ನದಿ ಜಗತ್ತೆ ಅತ್ತಂತೆ ಕಾಣಿಸಿಸುವ ಮಳೆ ಜಗತ್ತೆ ನಕ್ಕಂತೆ ಕಾಣಿಸುವ ಬೆಳದಿಂಗಳು, ಯಾವುದೂ ಇಲ್ಲ....

ಪಂಜಾಬಿಗೆ ಪ್ರೀತಿ

ಗಂಗ ತುಂಗ ಯಮುನಾ ಗೋದಾವರಿ ನದಿಗಳೆಲ್ಲವನ್ನು ನಾನು ಪ್ರೀತಿಸುತ್ತೇನೆ ಬಿಯಾಸ್ ನದಿಯೆ ನಿನ್ನನ್ನು ಹೆಚ್ಚು ಪ್ರೀತಿಸುತ್ತೇನೆ ನಾನು ಹಡೆದ ಧರ್‍ಮಗಳನ್ನೂ ಸಾಕಿ ಸಲಹಿದ ದೇವರುಗಳನ್ನೂ ಗೌರವಿಸಿದ್ದೇನೆ. ಸಿಖ್ ಧರ್‍ಮವೇ ಗುರುಗ್ರಂಥ ಸಾಹೇಬನೇ ನಿನಗೂ ತಲೆಬಾಗುತ್ತೇನೆ....

ಸಲ್ಲುವುದಿಲ್ಲ

ಅದೆಷ್ಟೋ ಯೋಜನಗಳನ್ನು ದಾಟಿ ಬರುವ ಹಕ್ಕಿಗಳನ್ನು ಯಾರೂ ಹೂಮಾಲೆ ಹಾಕಿ ಬರಮಾಡಿಕೊಳ್ಳುವುದಿಲ್ಲ. ಸಪ್ತಮದಲ್ಲಿ ಹಾಡಿದರೂ ಕೋಗಿಲೆಗೆ ಯಾರೂ ಶಾಲು ಹೊದಿಸಿ ಸನ್ಮಾನಿಸುವುದಿಲ್ಲ ಹುಲ್ಲು-ಕಡ್ಡಿ ಹೆಕ್ಕಿ ಹೆಣೆದ ಗುಬ್ಬಿಯ ಗೂಡಿಗೆ ಯಾರೂ ಪ್ರಶಸ್ತಿ ನೀಡುವುದಿಲ್ಲ. ಅದು...

ಬೆನ್ ಜಾನ್ಸನ್‌ಗೆ

ನಿನ್ನೊಳಗೊಂದು ಚಿರತೆಯಿತ್ತು ನಿನಗದು ಪದಕ ತಂದುಕೊಟ್ಟಿತು. ನಿನ್ನೊಳಗೊಂದು ನರಿಯೂ ಇತ್ತು ಅದು ನಿನ್ನನ್ನೆ ತಿಂದು ತೇಗಿತು. ಸ್ಯೂಲ್ ಪದ್ಯಗಳು - ೧೯೮೮ರಲ್ಲಿ ಸ್ಯೋಲ್‌ನಲ್ಲಿ ನಡೆದ ಒಲಂಪಿಕ್ಸ್ ಕ್ರೀಡಾಕೂಟದ ನೆನಪಿನಲ್ಲಿ ಬರೆದ ಕವನಗಳು *****

ಅಲಂಕರಿಸಿವೆ

ಸೂರ್‍ಯ ಪ್ರತಿದಿನ ಕಡಲಲ್ಲಿ ಹನ್ನೆರಡು ತಾಸಿನ ಈಜಿನ ಅಭ್ಯಾಸ ನಡೆಸಿದ್ದಾನೆ. ಚಂದ್ರ ಮೈಲಿಗಟ್ಟಲೆ ಓಡಿದರೂ ದಣಿಯದೆ ನಸುನಗುತ್ತಾನೆ. ಕೋಟಿ ವರುಷಗಳಿಂದ ಈಜು ಮತ್ತು ಓಟದ ದಾಖಲೆಗಳು ಸೂರ್‍ಯಚಂದ್ರರ ಹೆಸರಿನಲ್ಲೆ ಇವೆ. ಇಬ್ಬರೂ ಸೇರಿ ಸಂಪಾದಿಸಿದ...
cheap jordans|wholesale air max|wholesale jordans|wholesale jewelry|wholesale jerseys