ನೋಡದ ಜಾಗ

ಹೆಂಡತಿ ತನ್ನ ಗಂಡನಿಗೆ ಹೇಳಿದ್ದು - "ಇವತ್ತು ನಮ್ಮ ಮದುವೆ ವಾರ್ಷಿಕೋತ್ಸವ, ನಾನು ನೋಡದ ಜಾಗಕ್ಕೆ ನನ್ನನ್ನು ಕರೆದುಕೊಂಡು ಹೋಗಿ.." ಗಂಡ ಅವಳನ್ನು ಮನೆಯ "ಅಡುಗೆ ಮನೆಗೆ" ಕರೆದುಕೊಂಡು ಹೋದನು. *****

ಚಪ್ಪಾಳೆ

ಮರಿಸೊಳ್ಳೆಯೊಂದು ಆಗ ತಾನ ಹಾರಾಟ ಆರಂಭಿಸಿತು. ಅದರ ಅನುಭವದ ಕುರಿತು ಅಮ್ಮ ಕೇಳಿದ್ದಕ್ಕೆ ಹೇಳಿತು - ನನ್ನ ಹಾರಾಟ ನೋಡಿದ ಜನರೆಲ್ಲಾ ಚಪ್ಪಾಳೆ ತಟ್ಟುತ್ತಿದ್ದರು. *****

ಯಾಕೆ

ವ್ಯಕ್ತಿಯೊಬ್ಬನನ್ನು ಸೊಳ್ಳೆಯೊಂದು ಓಡಿಸಿಕೊಂಡು ಹೋಗಿ ಕಚ್ಚುವುದನ್ನು ನೋಡಿ ಮತ್ತೊಂದು ಸೊಳ್ಳೆ ಕೇಳಿತು - ನೀನು ಅವನನ್ನು ಯಾಕೆ ಹೀಗೆ ಕಚ್ಚುತ್ತಿರುವೆ? ಅದಕ್ಕೆ ಹೇಳಿತು - ಅವನು.. ಸೊಳ್ಳೆ ಪರದೆ ಕಂಪನಿ ಸಾಹುಕಾರ... *****

ಮೊದಲ ಅನುಭವ

ನಟ - ನಿರ್ದೇಶಕನೊಬ್ಬ ತನ್ನದೇ ನಿರ್ಮಾಣದಲ್ಲಿ ಹೊಸದಾದ ಚಿತ್ರ ತಯಾರಿಸುತ್ತಿದ್ದ ಪತ್ರಕರ್‍ತನೊಬ್ಬ ಕೇಳಿದ - ಸಾರ್ ನಿಮ್ಮ ಚಿತ್ರದಲ್ಲಿ ನೀವು ಯಾಕೆ ಭಿಕ್ಷುಕನ ಪಾತ್ರ ಮಾಡುತ್ತಿದ್ದೀರಾ? ಅದಕ್ಕಾತ ಹೇಳಿದ - ಯಾವುದಕ್ಕೂ ಮುನ್ನ ಅನುಭವ...

ಹಚ್ಚಿಕೊಳ್ಳಬೇಡ

ತಿಮ್ಮ :- ಸಾರ್ ನಿನ್ನೆಯಿಂದ ವಿಪರೀತ ಹುಷಾರಿಲ್ಲ... ಡಾ!! ಸೀನ :- ಅದನ್ನೆಲ್ಲಾ ಯಾಕೆ ತಲೆಗೆ ಹಚ್ಚಿಕೊಳ್ಳಿರಾ? ತಿಮ್ಮ :- ಸಾರ್ ನನಗೆ ಬೇದಿ.. ಅದನ್ನು ಯಾರು ತಲೆಗೆ ಹಚ್ಚಿಕೊಳ್ತಾರೆ ಹೇಳಿ.. *****

ಯಾಕೆ?

ಮೇಷ್ಟ್ರು :- ಹೋಮ್ ವರ್ಕ್ ಯಾಕೆ ಮಾಡಲಿಲ್ಲ? ಶೀಲಾ :- ಕರೆಂಟ್ ಇರಲಿಲ್ಲ ಮೇಷ್ಟ್ರು : ಕ್ಯಾಂಡಲ್ ಹಚ್ಚಿಕೊಳ್ಳಬೇಕಾಗಿತ್ತು ಶೀಲಾ :- ಮ್ಯಾಚ್‌ಬಾಕ್ಸ್ ಇರಲಿಲ್ಲ ಮೇಷ್ಟ್ರು :- ನಿಮ್ಮ ಮನೆಯಲ್ಲಿ ಮ್ಯಾಚ್ಬಾಕ್ಸ್ ಇರಲಿಲ್ಲವೇ? ಶೀಲಾ...
cheap jordans|wholesale air max|wholesale jordans|wholesale jewelry|wholesale jerseys