ಕಲ್ಲುಮೂರ್ತಿ

ದೇವದೇವತಾ ಪಟ್ಟಣದಲ್ಲಿ ! ದೇಗುಲದೊಲು ಕಿರಿಕಟ್ಟಡದಲ್ಲಿ || ಕಟ್ಟೆರಕದ ಕೈ ಕಾಲೂ ಕಣ್ಣು | ದೇವತೆ ನೋಡಿದಳದೊ ನನ್ನನ್ನು || ಸಜೀವ ಜಾಗೃತ ಅಮೃತವು ದಿವ್ಯ | ಏಕಮೂರ್ತಿಯೇ ಅನಂತಭವ್ಯ || ಮದಾದೇವಿ ಮಾತಾಯಿಯು...

ವಿಶ್ವಾವತಾರ

ಒಂದು ಬಿನ್ನಾಣವಿಹುದು ಸುಸಮಾಧಿ ಸುಪ್ತ ಸೂರ್‍ಯನಂತೆ. ಹೃದಯಗುಹೆಯಲ್ಲಿ ಹಿಗ್ಗು ಹೊತ್ತಿಹುದು ಅನ್ನಿಸತ್ವದಂತೆ. ಹೃದಯ ಹೃದಯ ಮಿಲಿತೈಕ್ಯದಂಥದಿದೆ ಒಂದೆ ಹೃದಯಲೋಕ. ಸುಪ್ರಮೋದ ಪರ್‍ವತದ ಅಗ್ರಕಿದೆ ಭವ್ಯಮೌನ ಮೂಕ. ಶಾಂತಿ ತೊಡೆಯ ತೊಟ್ಟಿಲದಲಾಡಿಸುವಳಲ್ಲಿ ದೈವಶಿಶುವ ನೆಲದ ದುಗುಡ...

ಅನಂತ ಸಾಹಸ

ಆನಂತ್ಯದೊಂದು ನವ ಜಲಧಿಯಲ್ಲಿ ಹೊರಟಿಹುದು ನನ್ನ ನಾವೆ. ಎಲ್ಲಿ ಹೊರಟಿತೋ; ತನ್ನ ಮಾನವ್ಯ ಬಿಟ್ಟು ಬೇರೆ ಠಾವೆ? ಮಸಕು ಮಸಕು ಹಿಂದೆಲ್ಲ, ಮುಂದೆ ಪಾತಾಳಖಾತ ಸಿಂಧು ಗೊತ್ತುಗುರಿಯಿಲ್ಲ, ದೂರ ಧ್ರುವದಾಚೆ ಬೆಳಕು ಸ್ಫಟಿಕ ಬಿಂದು!...

ಸುವರ್‍ಣದೀಪ

ನನ್ನ ಮಿದುಳು ದಳವೇರಿ ದಳ್ಳಿಸಿತು ಸ್ವರ್‍ಣದೀಪ್ತಿ ಇಳಿಯೆ. ಮನದ ಕರಿನೆರೆಯ ಹುಳುಗಳೆಲ್ಲ ಹೊತ್ತೇರಿ ನಿದ್ದೆ ತಿಳಿಯೆ. ಜ್ಞಾನಮಯದ ಉದ್ದೀಪನಕ್ಕೆ ಪ್ರಜ್ವಲಿತವಾದ ಮೇಲೆ. ಶಾಂತ ಕಾರ್‍ತಿಕದ ನಟ್ಟನಡುವೆ ಉರಿವಂತೆ ಪ್ರೇಮಜ್ವಾಲೆ. ಕೊರಳಿಗಿಳಿದು ಬಂದಿರಲು ಆಹ! ಆ...

ಬಂಧವಿಮೋಚನೆ

ಮನದ ರಿಂಗಣದ ರಂಗಭೂಮಿಯನು ಅಗೆದು ಬಗೆದು ನಾನು ಆತ್ಮಮೌನಿ ಮುನಿಯಾದೆ ಬಾನಿನಲಿ ನಿಂತ ಹಾಗೆ ಭಾನು. ಪ್ರಾಣ ಅಲ್ಲ; ಹೊತ್ತರಿಯೆ ನಾನು; ಕ್ಷಯರಹಿತ ಚಂದ್ರನಾಗಿ ಸನಾತನದ ಆ ಬ್ರಹ್ಮಗೋಲದಲಿ ನಾನೆ ಕೇಂದ್ರವಾಗಿ. ಮುಕ್ತನಾದೆ ನಾ,...

ಅಂತರ್‍ಯಾಮಿ ವೈಶ್ವಾನರ

ನನ್ನ ಜೀವಾಲಿಂಗನಾಂಗದಲ್ಲಿ ಪೂರ್‍ಣ ಪ್ರಪಂಚ ಕೃತ್ತಿಕೆಯ ಕಿಚ್ಚಗಸ್ತ್ಯನ ತಪಃಸುಖವು. ಜೀವಜೀವದ ರೂಪರೂಪದಲಿ ನಾ ಕಾಂಬೆ ನನ್ನದೇ ಮೈಯ ಮತ್ತೊಂದು ಮುಖವು. ನನ್ನ ನೋಡುವ ನೋಟ ನನ್ನದೇ ಕಣ್ಣಾಟ ಎಲ್ಲೆದೆಯ ಮಿಡಿತ ನನ್ನೆದೆಯ ಠಾವು. ನನ್ನ...

ಅಗ್ನಿರಾಜ

ಅಗ್ನಿರಾಜ: ಬೆಂಕಿ ನಿಲುವಂಗಿ ತೊಟ್ಟುಕೊಂಡು ಬುವಿಯಿಂದ ಬಂದ ಜೀವ ಸಪ್ತಸ್ವರ್‍ಗಗಳ ಸುಪ್ತ ಮೌನವನು ದಾಟಿಕೊಂಡು ಯಾವ? ನೀನು ಏನು ಅಧ್ಯಾತ್ಮದೌರಸನೊ? ಅಭವ ಸ್ವಯಂಭವನು. ಪರಂಧಾಮದಾ ಅತಿಥಿಯೇನು? ಪೌರಾಣ ಕಾಲದವನು. ಮನುಕುಲ ದೂತ: ಮಾನವ್ಯಕುಲದ ಹರಿಕಾರ...

ವಿದ್ಯುತ್‌ಪುತ್ರನ ಅವತಾರ

ಸುಸಮರ್‍ಥನಾದ ವಿದ್ಯುತ್‌ ಪುತ್ರನೊಬ್ಬ ತಾನೀ ಭೂಮಿಗಿಳಿದು ಬಂದ ಅಪ್ರತಿಮ ತ್ವರಿತಗತಿ ಅಗ್ನಿ-ಪಾದಗಳಿಂದ. ಮಾನವನ ಮೈ ಕಟ್ಟು ಘನಗರ್‍ಜನೆಯ ತೊಟ್ಟು, ನರಗರ್‍ಭದಲ್ಲಿ ಹುಟ್ಟಿತ್ತು ಬೆಳಕು. ಸ್ವರ್‍ಗದತಿ ಶಾಂತಗತಿ, ಮಹಿಮೆಯಾ ಮಾಧುರ್‍ಯ, ಪರಿಶುದ್ಧರಾಗ ಗರಿಗೊಂಡ ಬಲ ಇಳಿದು...

ನಾಳಿನ ಮಗು

ಫಲದ ನಿರ್‍ಣಯವು ಏನು ಆದರೂ ಕ್ಷುಬ್ಧನಾಗನವನು ನೇರಾದ ರೀತಿ ರುಜು ಅವನ ನೀತಿ, ಸಿದ್ಧಿಸದೆ ಇದ್ದರೂನು ತನ್ನ ಯೋಗ್ಯತೆಗೆ ತಕ್ಕ ರೀತಿಯಲಿ ಕರ್‍ಮಕುಶಲನಾಗಿ ಸತ್ಯವನ್ನೆ ಸಾರುವನು ಜಗಕೆ ನಿರ್‍ಭೀತ ಧೀರನಾಗಿ. ಫಲವೆಂದೆ ಬರಲಿ ಯುಗಯುಗವು...

ಪೂರ್‍ಣ ಮಾಡು

ಅಂದೆ ನೆಲವು ಪಡೆದೀತು ಅಮರ ಜೀವಂತ ಶಾಂತಿಯನ್ನು ಎಂದು ನಾಡ-ನಡೆವಳಿಕೆಯಲ್ಲಿ ನೆಲೆಗೊಂಬುದೊಂದೆ ನಿಜವು. ಆ ಪೂರ್‍ಣ ನಿಜದ ನೆಲೆ ಮೊಲೆಯ ಬಯಸಿ ಭಕ್ತಿಯಲಪೇಕ್ಷಿಸುವೆವು. ನೀ ಪೂರ್‍ಣ ಮಾಡು ಹೇ ದೊರೆಯೆ! ಎಲ್ಲಿಯೂ ಬಯ್ತ ಬಯಕೆಯನ್ನು....