Home / ಕವನ / ಕವಿತೆ / ಯತಿವರನೆ

ಯತಿವರನೆ

ಯತಿವರನೆ ಶ್ರೀಗುರುವೆ
ಜನ್ಮಜನ್ಮದ ತಪವೆ
ಮೈಗೊಂಡು ನಿಂತಿರುವ ಕಲ್ಪತರುವೆ !

ಹಲವು ವರುಷದ ಹಿಂದೆ
ಕಲಿಕೆಯೆಲ್ಲವು ಸಂದೆ
ನಿನ್ನ ಸಂನಿಧಿಯಲ್ಲಿ ನಡೆದು ಬಂದೆ. ೧

ಕಾಳಕತ್ತಲೆಯಲ್ಲಿ
ಬಾಳದೀವಿಗೆಯಲ್ಲಿ
ಬೆಳಕನಿಡು ಗುರುವೆಂದೆ ನಿನ್ನಲ್ಲಿ. ೨

ಮರಳಿ ಬಂದಿಹೆನಿಂದು
ಮುರಿದ ಸಂಸಾರವನು
ನಿನ್ನ ಪಾದದಿ ಹಾಕಲಿಕೆ ತಂದು. ೩

ಕಂಡ ಬೆಳಕಿನ ಕಿರಣ
ಜಡಕೆ ಆಯಿತು ಶರಣ
ಹೌಹಾರಿ ಹೋಗಿಹುದು ನನ್ನ ಹರಣ. ೪

ಬೇಡುವುದ ಬಲ್ಲವನೆ
ಬೇಡಲೇನೈ ನೀನೆ
ಕ್ಷೇಮಪಥದಲಿ ನಡೆಸು ಜೀವನವನೆ. ೫

ಕೇಳಲಾರೆನು ದಯೆಯ
ಮಡದಿಮಗುವಿಗೆ ಮೈಯ
ನೆಮ್ಮದಿಯ ಸಂಸಾರಸಾರ ಸಿರಿಯ. ೬

ತಪ್ಪಡಿಯ ತೊಲಗುತಲಿ
ಸುಖಶಾಂತಿಯರಸುತಲಿ
ಹಿರಿಬಾಳ ಬೀದಿಯಲಿ ನಾ ನಡೆಯಲಿ. ೭

ಮೋಹಮಾಯೆಯ ಗೆಲಿದು
ಘೋರತಪವನು ಗೈದು
ಕಲ್ಲರಳಿ ದಯೆಯ ಹಿರಿ ಆಸರಾದೆ. ೮

ತನ್ನ ತಾನುದ್ಧರಿಪ
ತಪದ ದಾರಿಗೆ ಪೋಪ
ಶ್ರದ್ಧೆಯನು ಶಕ್ತಿಯನ್ನು ನಮಗೆ ನೀಡು. ೯

ನಿನ್ನ ಬಳಿಯಲಿ ಬಂದು
ದೈನ್ಯದಲಿ ಮೊರೆನಿಂದು
ಸೇವೆಯಲಿ ಬೇಡಿದುದಗಳಿಪೆವೆಂದು ೧೦

ಲೌಕಿಕದ ಕೊಡುಕೊಳೆಯ
ಬಳಸುತಲಿ ಬರುವ ಜನ
ಬಳಿಯಲಾರರು ತಮ್ಮ ಬಾಳಕೊಳೆಯ. ೧೧

ದೈನ್ಯದಂಭವ ಬಿಡಿಸು
ಸತ್ಯಧರ್ಮವ ಹಿಡಿಸು
ನಿನ್ನ ಧ್ರುವತಾರೆಯೇ ನಮ್ಮದೆನಿಸು. ೧೨
*****

Tagged:

Leave a Reply

Your email address will not be published. Required fields are marked *

ನಿರಂಜನ ಬಹಳ ಜನ ಹೆಂಗಸರನ್ನು ನೋಡಿದ್ದ. ಆದರೆ, ಅವನ ದುರದೃಷ್ಟ-ಅವನು ನೋಡಿದವರೆಲ್ಲ ಸರಿಸಿದ ಸೆರಗಿನವರು, ಸಡಿಲಿಸಿದ ನಿರಿಯವರು. ಮೇಲಾಗಿ ಅವನು ಸುಂದರನೇನೋ ಹೌದು. ಆದರೆ ಗಂಡಸಿನ ಸೌಂದರ್ಯವಲ್ಲದು, ಹೆಂಗಸಿನ ಸೌಂದರ್ಯ, ಸಾಲದುದಕ್ಕೆ “ಎಲ್ಲ ಹೆಂಗಸರೂ ಹೀಗೆಯೆ ಬಾ ಎನ್ನುವುದು ...

ಭೋಜನ ಭೀಮಾಚಾರರ ಮಕ್ಕಳೇತಾನೆ ಆ ವೇದಾಂತ ಡಿಂಡಿಮ ರಾಜಾಚಾರ್‍ಯರು. ಭೀಮಾಚಾರ್‍ಯರು ತಮ್ಮ ಬಿರುದನ್ನು ಸ್ವಪ್ರಯಾಸದಿಂದಲೇ ಸಂಪಾದಿಸಿದರು. ತಮ್ಮ ಮಕ್ಕಳಲೊಬ್ಬನಾದರೂ ಸರಸ್ವತಿಯ ಕೈಹಿಡಿಯಲೆಂದು ಆಶೆಬಿಟ್ಟು ರಾಜಾಚಾರ್‍ಯರನ್ನು ಬಿರುದೊಣ್ಣೆಯ ವಶಕ್ಕೆ ಕೊಟ್ಟರು. ಇತ್ತಲಾಗಿ ರಾಜಾಚಾರ್‍ಯರಿ...

ಶಠಗೋಪ ಹದಿನಾರಾಣೆ ಶ್ರೀವೈಷ್ಣವ. ಒಂದುದಿನ ಅವನ ಅತ್ತಿಗೆ ಅಡುಗೆಯ ಕೆಲಸದಲ್ಲಿದ್ದು ವೀಳೆಯದೆಲೆಯ ವರ್ತನೆಯವಳು ಬಂದಾಗ ಎಲೆ ತೆಗೆಯಲು ಶಠಗೋಪನಿಗೆ ಹೇಳಿದಳು. ಶಠಗೋಪನು ಹೊರಗೆ ಬಂದು, ಎದುರಿಗಿದ್ದ ವೀಳೆದೆಲೆಯವಳನ್ನು ನೋಡಿದ. ಅವಳು ಸಾಧಾರಣದ ಹೆಣ್ಣು. ರತಿಯಲ್ಲ, ಚಪ್ಪನ್ನಾರು ದೇಶದಲ್ಲ...

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...