ಮುಂಗಾರು ನನ್ನ ಮುಂದಾರೆಂಬ ಬಿಂಕದಲಿ ಮುಂದಲೆಯ ಕೇಶರಾಶಿಯನೆತ್ತಿ ಕಣ್ಕಿಸಿದು, ಎಬ್ಬಿಸಿದ ಕೆಂಧೂಳಿ ಕಾರ್‍ಮುಗಿಲ ಮುಟ್ಟಲದು ರಕ್ಕಸಿಯ ರಕ್ಕಸದಿ ನಿಂತಿದೆ ದಿಗಂತದಲಿ ಮುಂಗಾರ ಸಿಂಗಾರವಿದು ನಿರಾತಂಕದಲಿ ಮುಚ್ಚಿಹುದು ಹಗಲ ಬಂಗಾರವನು ಬೆಚ್ಚಿಹುದು ಮ...

ಶಿವಯೋಗ ಕೂಸು ತಾಯಿಯ ಕಂಡು ಕುಲುಕುಲನೆ ನಕ್ಕಂತೆ ಯೋಗವೆಂಬುದು ಚಂದ ಚಲುವ ಬಂಧ ತಾಯ ಎದೆ ಹಾಲನ್ನು ಗಟಗಟನೆ ಕುಡಿದಂತೆ ಶಿವಯೋಗದಾನಂದ ಮುದ್ದುಕಂದ ಬಣ್ಣ ಮಾವೀನ ಮರಕಂಡು ಗಾನ ಮಾಡುವರಿಲ್ಲ ಕಲ್ಲೊಗೆದು ಹರಿದೊಯ್ವ ಕಳ್ಳರಿಹರು ನೀನು ಸುಂದರ ಮಾವು, ನೀ...

ರಾಮಾಯಣದ ಓದುಗಳು ಹಲವಾರು. ‘ತಿಣುಕಿದನು ಫಣಿರಾಯ ರಾಮಾಯಣದ ತಿಂತಿಣಿಯ ಭಾರದಲಿ’ ಎಂದ ಕುಮಾರವ್ಯಾಸನ ಮಾತು ಅಕ್ಷರಶಃ ನಿಜವೆನ್ನುವಂತೆ ರಾಮಾಯಣಗಳು ಹಲವಾರು ಭಾಷೆಗಳಲ್ಲಿ ಹಲವಾರು ಭಾವಗಳೊಡನೆ ರಾಮಾಯಣಗಳು ಸೃಷ್ಟಿಯಾಗುತ್ತಲೇ ಬಂದಿದ್ದಾವೆ. ರಾಮಾನುಜನ...

ಬುಂಡೇಗೆ ಯೆಂಡ್ ಎಂಗೆ ಯೆಂಡಕ್ಕೆ ನೊರೆಯಂಗೆ ಅಂಗೇನೆ ಮನ್ಸಂಗು ಒಳ್ಳೆ ನಡತೆ. ಬುಂಡೇಗೆ ಆಲೆಂಗೆ ಆಲೊಳಗೆ ವುಳವೆಂಗೆ ಅಂಗೇನೆ ಆಳ್ ನಡತೆ ನರಮನ್ಸಗೆ. ಅಮಲಿಂದ ಯೆಂಡ್‌ಕುಡಕ ಗುಲ್ಲಿಂದ ಪಡಕಾನೆ ನಡತೇಂದ ಗೊತ್ತಾಗ್ತೆ ಒಳ್ಳೆ ಮನ್ಸ. ಸದ್ದಿಂತ ಕೆಟ್ ಕಾ...

“ತಿಣಕದಿರು ಸುಖದ ಸಂಪಾದನೆಗೆ -ಒಂದಿನಿಸು ನಗೆ, ಇನಿಸು ದುಃಖ ವಿಸ್ಮೃತಿ, ಇನಿಸು ಲೋಕಾನು- ಭವವು, ರಸಿಕತೆ ಇನಿಸು, ತಾಳ್ಮೆಯಿರೆ ಇನಿಸಾನು; ಹಲಸು ಕಾತಂತೆ ರಸಭಾವ ರೋಮಾಂಚಿತಸು. ಹಸು ಕರುವಿನೆಡೆಗೆ ಕೆಚ್ಚಲುದೊರೆದು ಬರುವಂತೆ, ಅಂಬೆಗರೆಯಲು...

Kannada Research Lectures Series No. 6 ೧೯೪೩ ಯಲ್ಲಿ ಮಾಡಿದ ಬಾಷಣ. ಪೂರ್ವ ಚರಿತ್ರೆ:- ಚರಿತ್ರಕಾರರು ಚರಿತ್ರೆ, ಆದಿ ಚರಿತ್ರೆ (Proto-history) ಮತ್ತು ಪೂರ್ವ ಚರಿತ್ರೆ (Pre-history) ಗಳೆಂಬ ಪದಗಳನ್ನು ಉಪಯೋಗಿಸುತ್ತಾರೆ. ಕರ್ಣಾಟಕಕ...

ಊಣುವಾರೋಗ್ಯವಿಲ್ಲದೆಲೆ ಅಡುಗೆಯೊಳು ಪ್ರಾ ವೀಣ್ಯದಿಂದೇನು? ವಸನ ವಸತಿ ವಾಹನ ಗ ಡಣಗಳೇನಿದ್ದೊಡೇನು? ನೌಕರಿಯ ವರಕ ರುಣೆಯಲ್ಲದೊಡುಣಿಸೇನು? ಅನ್ನದೊಳನ್ನ ಬೆಳೆ ದುಣುವಾ ಚೈತನ್ಯವಿಲ್ಲದಿಳೆಯೊಳಬಲ ಬದುಕೇನು? – ವಿಜ್ಞಾನೇಶ್ವರಾ *****...

ಶಿರಿಯ ರಾಮರಾಡೂ ಕೋಲೇಲೋ ದ್ಯೇವರೇ ಕೋಲು ಕೋಲೇಲೋ ಅದು ಕೋಲೇ ದ್ಯೇವರೇ || ೧ || ಶಿನ್ನದೊಂದು ಕೋಲೇಲೋ ಅದು ಕೋಲೇ ದ್ಯೇವರೇ ರಾಜದೇವಿಂದ್ರಾಡೂ ಕೋಲೇಲೋ ದ್ಯೇವರೇ || ೨ || ಕೋಲು ಕೋಲೇ ಕೋಲೇಲೋ ದ್ಯೇವರೇ ಹೊಂಗಿನೊಂದು ಕೋಲೇಲೋ ಅದು ಕೋಲೇ ದ್ಯೇವರೇ |...

ಅನೇಕ ದಿನಗಳವರೆಗೆ ಮೇರಿಯಸ್ಸನು ಬದುಕಿದವನೂ ಅಲ್ಲ, ಸತ್ಯವನೂ ಅಲ್ಲದೆ ; ಹೀಗೆ ಜೀವಚ್ಛವವಾಗಿ ಬಿದ್ದಿದ್ದನು. ಅವನಿಗೆ ಜ್ವರವು ಬಂದು ಬಹು ದಿನಗಳವರೆಗೆ ಸನ್ನಿ ಮುಚ್ಚಿಕೊಂಡು ಕಳವಳವು ಹುಟ್ಟಿತ್ತು. ರಾತ್ರಿಯಲ್ಲೆಲ್ಲ ಕೋಸೆಟ್ಟಳ ಪಾರಾ ಯಣವೇ ಆಗಿತ್...

ಶುದ್ಧ ಕರ್‍ಮವ ಮಾಡು ಮನುಜನೆ ಶುದ್ಧ ಕರ್‍ಮವೆ ನಿನ್ನ ಸಂಪತ್ತು ನಾಳಿನ ಬದುಕಿಗೆ ಇವತ್ತಿನ ಕರ್‍ಮ ಇವತ್ತಿ ಬಾಳೇ ನಿನ್ನೆಯ ನಿನ್ನ ಕರ್‍ಮ ದೇವನ ಭೂಮಿ ಇದು ವಿಚಿತ್ರ ನೀನು ಕೊಟ್ಟಿದ್ದೆ ನಿನಗೆ ಕೊಡುವುದು ನೀನು ಮಾಡಿಟ್ಟದೆ ನಿನ್ನ ಧರಿಸುವುದು ಎಲ್...

12345...10

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...