ಭಾವ ಚಿತ್ರಗಳನ್ನು ಹೊತ್ತ ಗೋಡೆ ಮೌನದಲ್ಲೂ ಇತಿಹಾಸ ಬಿಂಬಿಸುತ್ತದೆ. ಗೋಡೆಗಳು ಕಿಟಕಿಗಳು, ಬಾಗಿಲುಗಳು ತಮ್ಮೊಳಗೆ ಮನೆಯ ಮನಸ್ಸಿನ ಕಂಪನಗಳ ಬಗ್ಗೆ ಮಾತನಾಡಿಕೊಳ್ಳುತ್ತವೆ. ಮತ್ತೆ ಇರುವೆಗಳು ಎಲ್ಲಾ ಜಾಗಗಳನ್ನು ಮೂಸಿಸುತ್ತವೆ ಹಿತವಾಗಿ. ಬಚ್ಚಲ ಮನ...

ಜಯ ಭಾರತ ನವ ಭಾರತ ಜಯ ಭಾರತವೆನ್ನಿ || ಜಯ ಜಯ ಘೋಷಣೆಯ ಮೊಳಗಿಸಿ ನವ ಚೇತನದೆಡೆಗೆ ನಡೆಯಿರಿ || ಜ || ವೀರ ಯೋಧರು ಬೆಳಗಿದ ಭೂಮಿ ಜನನಿಯ ಜೊಗುಳದ ಐಸಿರಿ ಎನ್ನಿರಿ || ಜ || ನವಋತುಗಳ ನವ ಭಾಷೆಯೆ | ನವ ಜೀವನದ ಜೀವನದಿಗಳ ತಾಣವೆನ್ನಿರಿ || ಜ || ದ...

ಮಾತೆ ಭುವನೇಶ್ವರಿ ಜಗನ್ಮಾತೆ ನನ್ನನ್ನು ಮಾಯೆಯಿಂದ ನಿ ಕಾಪಾಡು ನೀನು ಎನ್ನ ಕೈ ಬಿಟ್ಟ ಮೇಲೆ ನಾನು ಬದುಕುಳಿಯುವದೇ ಇದು ಕಾಡು ವಿಷಯ ಸುಖಕ್ಕೆ ಇಂದ್ರಿಯಗಳ ಚಡಪಡಿಕೆ ಮನಸ್ಸು ಇಂದ್ರಿಯಗಳ ಮೇಲೆ ಸವಾರಿ ಅವುಗಳ ನಡುವೆ ನಾನು ಅನಾಥ ನರಕವೇ ಗತಿ ನಾ ಜನ...

ಮಾರನೆಯ ದಿನ ಬೆಳಗಾಗುತ್ತಲೆ ಸುಭದ್ರೆಯು ಎಂದಿನಂತೆ ಪಾಠಶಾಲೆಗೆ ಹೋದಳು. ಅಲ್ಲಿ ಆಕೆಯ ಮುಖವು ಬಾಡಿರುವುದನ್ನು ಉಪಾಧ್ಯಾಯೆಯೂ, ಸುಭಧ್ರೆಯಸಂಗಾತಿಯರೂ ನೋಡಿದರು. ಕಾರಣವು ಯಾರಿಗೂ ತಿಳಿಯದು. ಸುಭದ್ರೆ ಯಾವಾ ಗಲೂ ಪಾಠವನ್ನು ತಪ್ಪುತ್ತಿದ್ದವಳಲ್ಲ. ಈ...

ಕಮಲವನ ಸಂಚಾರಿಣಿಯೆ ಮಹಾಲಕ್ಷ್ಮೀ ಬೇಕೇ ಆಸನ ಅರುಣಚರಣೇ ಮಾಡು ನನ್ನೀ ಹೃದಯವನೆ ಸಿಂಹಾಸನ ವಿಶ್ವಸುಂದರಿ ನಿಖಿಲಜಗದಾನಂದಕರಿ ಹೇ ಯೋಗಿನೀ ವಿರಸ ಹೃದಯತ್ಯಾಗಿ ನೀರಸ ಭಕ್ತಿ ಬಂಧನ ಭೋಗಿನೀ ವಾಪದೂರೇ ಮಾಡು ನನ್ನನು ನಿನ್ನನುಗ್ರಹದಾಗರಾ ಮಧುರ ಕೌಶಲ ಮಾಯ...

(ಜೀವನದಲ್ಲಿಯ ಒಂದು ಅನುಭವದ ಅನ್ಯೋಕ್ತಿಯಿದು.) ೧ ‘ಇರುಳೆಲ್ಲವೂ ತಿರುಗಿ ತಿರೆಗೆ ಚೆಲುವನು ಬೀರಿ, ನರರ ಕಣ್‌ಮನ ತಣಿವ ತೆರದಿ ಒಲವನು ತೂರಿ, ಚರಿತಾರ್ಥನಾಗಲಿಕೆ ಸರಿಯಿದೇದಿನ’ ಎಂದು, ಹುಣ್ಣಿಮಯ ತಣ್‌ಗದಿರ ತುಂಬುಮೊಗದಲಿ ಬಂದು, ಅಳತೆಯಿಲ್ಲದ ಪಳು...

ಏಕೆ ಹುಟ್ಟಿಸಿದೆ ನನ್ನನು? ಎಂದು ಪ್ರಶ್ನೆಯ ಕೇಳದೆ ಇಲ್ಲಿ ಹುಟ್ಟಿಸಿ ನಿನ್ನಯ ಕರ್‍ಮವ ಕಳೆಯೆ ಅವಕಾಶಕಲ್ಪಿಸಿದಕೆ ಕೃತಜ್ಞನಾಗಿರು|| ಏಕೆ ನನಗೆ ಈ ಸ್ಥಿತಿಯ ನೀಡಿದೆ ಎನ್ನುವುದಕಿಂತ ಇದಕಿಂತ ಕೆಳಗಿನ ಪರಿಸ್ಥಿತಿಯ ಅವಲೋಕಿಸಿ, ಇದೇ ನನಗೆ ಉತ್ತಮವೆಂ...

ಕೋಟೆ ಕೊತ್ತಲದಲ್ಲಿ ಕತ್ತಿ ಗೊರಸಿನ ಸದ್ದು ಒಳಗೆ ಅಂತಃಪುರದಲ್ಲಿ ರಾಣಿ ಒಂಟಿ. ಹೆಪ್ಪುಗಟ್ಟಿದ ನೆತ್ತರಲ್ಲಿ ಸೇಡು ಸೆಣಸಿನ ಹೆಜ್ಜೆ ಒಳಗೆ ಮಿಡಿಯುವ ನಾಡಿ ವಿವೇಕ ಒಂಟಿ. ಕೋಟೆ ಕಲ್ಲುಗಳಿಂದ ಕಾದ ನಿಟ್ಟುಸಿರು ಕತೆ ಬರೆಯುತ್ತಿದೆ ಮಣ್ಣು ಕಾಯುತ್ತ ಕ...

Akay Akakievich Bashmachkin ಒಬ್ಬ ಸಾಮಾನ್ಯ ಗುಮಾಸ್ತ, ಸೇಂಟ್ ಪೀಟರ್‍ಸಬರ್ಗನ ಸಹಕಛೇರಿಯೊಂದರಲ್ಲಿ ಪಡಿಯಚ್ಚುಗಾರ. ನೋಡಲು ಅಂತಹ ಸುಂದರನಲ್ಲ. ಮುಖದ ತುಂಬಾ ಸಿಡುಬಿನ ಕಲೆಗಳನ್ನು ಹೊಂದಿದ ಸಣ್ಣದೇಹದ ವ್ಯಕ್ತಿ. ಆತನದು ಸೀಮಿತ ಪ್ರಪಂಚ. ತನ್ನ ...

ಸೀಗಿ ಹುಣ್ಣಿವೆ ಬಂದಿತ್ತು ಸಕ್ಕರೆ ಅಚ್ಚು ಮಾಡಿತ್ತು ರಂಗಿಯ ತಾಯಿ ತಂದಳು ತರ ತರ ಸಕ್ಕರೆ ಅಚ್ಚುಗಳ ಲಿಂಗ ತೇರು ಜೋರಿತ್ತು ಪೂಜಿಸಿ ಹೊಟ್ಟೆ ಸೇರಿತ್ತು ಜಿಂಕೆ ಕೋಳಿ ಹಸುಗಳ ಭರ್ಜರಿ ಆಯಿತು ಜಗಳ ಆರತಿ ತಟ್ಟೆ ಹಿಡಿದ ರಂಗಿ ಹೊರಗಡೆ ಹೆಜ್ಜೆ ಇಟ್ಟಳ...

1...34567...16

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...