ಹೆಣ್ಣ ಹೆತ್ತವರು ನಾವು ಲೇಖಕರು. ನಮ್ಮ ಮಕ್ಕಳು ಕಾವ್ಯ, ಕವಿತಾ ನವ್ಯಾ, ರೂಪಕಾ ಏಕಾಂಕಿ, ಕಾದಂಬರಿ. ಬೇಕಾಗಿವೆ ಇವರಿಗೆಲ್ಲ ಕೈ ಹಿಡಿದು ಸಾಕಬಲ್ಲ ಬಾಳ ಬೆಳಗಬಲ್ಲ ಸಂಪಾದಕ, ಪ್ರಕಾಶಕ ಗಂಡುಗಳು. *****...

ದುಃಖ ಯಾವಾಗಲೂ ವೈಯಕ್ತಿಕವಾಗಿರುತ್ತದೆ, ಆದ್ದರಿಂದಲೇ ಅದು ಮಾತಿಗೆ ಅತೀತವೂ ಆಗಿರುವುದು. ಅತಿಯಾದ ದುಃಖದಲ್ಲಿ ಉಮ್ಮಳ ಮಾತ್ರವೇ ಸಾಧ್ಯ. ಅಥವಾ ಮೌನ. ಆದರೆ ವೈಯಕ್ತಿಕ ದುಃಖ ಸಾರ್ವತ್ರಿಕವಾದಾಗ ಬಹುಶಃ ಕಾವ್ಯ ಹುಟ್ಟಿಕೊಳ್ಳುತ್ತದೆ. ವಾಲ್ಮೀಕಿಯಲ್ಲ...

ಹೋದುದಲ್ಲಾ! ಎಲ್ಲಾ ಹೋದುದಲ್ಲಾ! ಹೋದುದೆಲ್ಲವು ಕಣ್ಣ ಹಿಂದೆ ಖೇದವಿನ್ನೆನಗುಳಿದುದೊಂದೆ ಹೇ ದಯಾನಿಧೆ! ಪ್ರೇಮದಿಂದೆ ಹಾದಿ ತೋರಿಸಿ ನಡಿಸು ಮುಂದೆ ಹೋದುದಲ್ಲಾ, ಎಲ್ಲಾ ಹೋದುದಲ್ಲಾ. ತೊಡೆಯ ತೊಟ್ಟಿಲೊಳೆನ್ನನಿಟ್ಟು, ಕುಡಿಸಿ ಮಮತೆಯ ಗುಣವ ನೆಟ್ಟು,...

ತಲೆಮಾರಿನಂತರವ ತಾಳದೆಲೆ ತಾನು ತಾನೆನುತ ತಲೆಗೊಂದು ಸೂರೆಳೆವ ಮನುಜ ತಾ ಸಹಬಾಳ್ವೆ ತೊರೆದೊಡಂ ಕೇಡಿಲ್ಲವಾದೊಡೆಲ್ಲ ಜೊತೆಯಾಗಿರ್‍ದೊಡದು ತಮ್ಮ ಹಿತವೆನುವ ಸಸ್ಯಗಳನೀ ಪರಿ ಬೇರ್ಪಡಿಸು ತಲದನು ತಬ್ಬಲಿ ಮಾಡಿರಲೆಲ್ಲ ಕೃಷಿ ಕೆಟ್ಟಿಹುದು – ವಿಜ್...

ಮದುವೆಯಾಗಿ ಹತ್ತು ವರ್ಷದ ನಂತರ ಗಂಡ ಹೇಳಿದ- ‘ನಾನು ಮದುವೆಯಾಗಿ ದೊಡ್ಡ ತಪ್ಪು ಮಾಡಿದೆ ಅಂತ ಈಗ ಅನಿಸುತ್ತಿದೆ..’ ಅದಕ್ಕೆ ಹೆಂಡತಿ ಶೀಲಾ ಹೇಳಿದ್ಲು- ‘ನಿಮಗೆ ಈಗ ಹಾಗೆ ಅನ್ನಿಸುತ್ತಿದೆ. ನನಗೆ ಮದುವೆಯಾದ ಮರು ದಿವಸವೇ ಅನ್ನಿಸತೊಡಗಿತ್ತು&#8230...

ಲಕ್ಷೋಪಲಕ್ಷ ಕಣ್ಣುಗಳು ಧೀಮಂತ ಮೂರ್ತಿಯ ದರ್ಶನಕೆ ತ್ಯಾಗ ದೌನತ್ಯವ ಅರಿಯಲು ಕಾತರಿಸುತ್ತಾರೆ ಹತ್ತುತ್ತಾರೆ ಮೇಲೇರುತ್ತಾರೆ ನಿನ್ನ ಅಡಿಯವರೆಗಷ್ಟೆ. ಮತ್ತೆ ಮೇಲೇರುವ ಕೆಚ್ಚಿಲ್ಲದ ಸಾಮಾನ್ಯರು ನಿನ್ನ ಅಸಾಮಾನ್ಯತೆಗೆ ಅದ್ಭುತ ಕಲಾಕೃತಿಗೆ ಬೆರಗಾಗು...

ಏರಿಯ ಕಟ್ಟಬಹುದಲ್ಲದೆ ನೀರ ತುಂಬಬಹುದೆ ಕೈದುವ ಕೊಡಬಹುದಲ್ಲದೆ ಕಲಿತನವ ಕೊಡಬಹುದೆ ವಿವಾಹವ ಮಾಡಬಹುದಲ್ಲದೆ ಪುರುಷತನವ ಹರಸಬಹುದೆ ಘನವ ತೋರಬಹುದಲ್ಲದೆ ನೆನಹ ನಿಲಿಸಬಹುದೆ ಓದು ಒಕ್ಕಾಲು ಬುದ್ಧಿ ಮುಕ್ಕಾಲು ಎಂಬ ಲೋಕದ ಗಾದೆಮಾತಿನಂತೆ ಸದ್ಗುರುಕಾರು...

-ವ್ಯಾಸಮಹರ್ಷಿಯ ಕೃಪೆಯಿಂದ ಶಂತನು ಮತ್ತು ಸತ್ಯವತಿಯರ ಪುತ್ರನಾದ ವಿಚಿತ್ರವೀರ್ಯನ ಮಡದಿಯರಾದ ಅಂಬಿಕೆ ಮತ್ತು ಅಂಬಾಲಿಕೆಯರ ಗರ್ಭದಲ್ಲಿ ಜನಿಸಿದ ಧೃತರಾಷ್ಟ್ರ ಮತ್ತು ಪಾಂಡುಕುಮಾರರು ದಾಸಿಯ ಮಗನಾದ ವಿದುರನೊಂದಿಗೆ ಬೆಳೆದು ದೊಡ್ಡವರಾಗಲು, ಅವರಿಗೆ ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...