ದಿನವು ಮುಳುಗಿತು ಬೆಳೆದು ಚಾಚುತ ಇರುಳ ಸಂಜೆಯ ಲಯದಲಿ ಉದ್ದೊ ಉದ್ದಿನ ಹಾದಿ ಮುಗಿದಿದೆ ಸ್ವಲ್ಪ ಉಳಿದಿದೆ ಮಾರ್ಗವು ಇನ್ನು ಒಣ ಒಣ ರಣದ ಭಣಭಣ, ಇನ್ನು ಮೌನಾಶ್ರಯದಲಿ ಬಂತು ಕತ್ತಲು ಗೋಡೆ, ನಡೆ ನಡೆ, ಅದರ ಹಿಂದೆಡೆ ಸ್ವರ್ಗವು. *****...

ಎಂತು ನೀನಿಹೆಯೋ-ಪರಾತ್‌ಪರ ಎಲ್ಲಿರುತಿಹೆಯೋ ? ಎಂತು ನೀನಿಹೆಯೋ ನಿನೆಲ್ಲಿರುತಿಹೆ ನಿನ್ನ ಅಂತವ ತಿಳುಹಿ ನಿಶ್ಚಿಂತನ ಮಾಡೆನ್ನ! ೧ ಅಣುರೇಣು-ತೃಣ- ತೃಟಿಯೊಳು ವ್ಯಾಪಿಸಿದ ನಿನ್ನ ಘನತರ ರೂಪವನರಿತುಕೊಳ್ಳದೆಯೆ…. ಮನಕೆ ಬಂದಂತೆ ಚಿತ್ರಿಸಿ ಪೂ...

ಈ ದೇಶದ ಸಂಸ್ಕೃತಿಯ ಅನ್ಯ ದೇಶದ ಭಾಷೆ ಸಂಸ್ಕೃತಿಯ ಜೊತೆಗೆ| ಅಲ್ಪಾಯುಗಾಯುಷ್ಯ ದೇಶದ ಮುಂದೆ ದೀರ್‍ಘಾ, ಸುದೀರ್‍ಘಾ ಯುಗಾಂತರದ ನಮ್ಮದೇಶವನೆಂದೂ ಹೋಲಿಸದಿರಿ|| ನೂರಾರು ಭಾಷೆ ಸಾವಿರಾರು ಜಾತಿ ಕೋಟಿ ದೇವರುಗಳ ನಾಡು ನುಡಿಯ ಅಂತರಂಗವ ತಿಳಿಯದೆ| ಕೇವ...

ನಮ್ಮೂರಿನ ಕರಿಯ ಕಂಠದೊಳಗಿನ ಕೆಂಡದುರಿಯಲ್ಲಿ ಕೊಂಡ ಹಾಯುವ ಗೆಳೆಯ ಬಯಸುತ್ತಾನೆ ಮನೆಯ ಕನಸುತ್ತಾನೆ ಬೆಳೆಯ- ತೆನ ತೂಗೀತು! ಮನೆ ಮಾಗೀತು ಕುಡಿಕೆ ಮಡಕೆಗಳಲ್ಲಿ ಒರತೆ ಹುಟ್ಟೀತು ಎಂದು? ಆಗಸ್ಟ್ ಹದಿನೈದು ಹರಿಯಿತು ಚಿಂದಿ ಬಾಳಿನ ಬಟ್ಟೆ ಜನವರಿ ಇಪ್...

“Ligacy Hunting” ಎಂಬುದು ಇಟಾಲಿಯನ್ ಸಂಪ್ರದಾಯ. ಏಕಾಂಗಿಯಾಗಿರುವ ಶ್ರೀಮಂತ ಮುದುಕನ ಆಸ್ತಿಗೆ ಮುಂದಿನ ವಾರಸುದಾರರಾಗಲು ಆತನನ್ನು ಮೆಚ್ಚಿಸಲು ಯೋಗ್ಯವಾಗುವ ಉತ್ಕೃಷ್ಟವಾದ ಮೌಲ್ಯಯುತ ಉಡುಗೊರೆಗಳನ್ನು ಸಲ್ಲಿಸುವ ಮುಖೇನ ಆತನ ಎಲ್ಲ...

ಗುಂಡನು ಆರು ಗಂಟೆಗೇ ಏಳುವ ಚಿಲಿಪಲಿ ಹಕ್ಕಿ ಕೂಗಿಗೆ ಮೈಕೊಡಹುವ ನಿದ್ದೆ ಬಿಟ್ಟು ಅಂಗೈ ನೊಡಿ ನಮಿಸುತಲಿ ದೇವರ ಮಂತ್ರ ಭಜಿಸುತಲಿ ಪೂರೈಸುವ ಬೆಳಗಿನ ಕೆಲಸವನು ಜಳಕವ ಮಾಡಿ ತಿನ್ನುವ ತಿಂಡಿ ಓದುವ ಕೊಠಡಿಗೈತಂದು ಅಂದಿನ ಪಾಠವ ಮುದದಲಿ ಓದುತ ಪುಸ್ತಕ ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...