ತೀರ….(ದ) ಬಯಕೆ

ಕಡಲ ಒಡಲೊಳಗಿಂದ ನಿನ್ನ ತಬ್ಬಿಕೊಳ್ಳುವೆನೆಂಬ ಮುಗಿಲೆತ್ತರದ ಆಸೆಯಿಂದ ಅಬ್ಬರಿಸಿ ರಭಸದಿ ಬರುತಿರಲು ನಾ... ನಿನ್ನ ಸನಿಹಕೆ ಅದೇಕೋ ತಣ್ಣಗಾದೆ ನಾ ನಿನ್ನಲ್ಲಿಗೆ ಬರುವಷ್ಟರಲ್ಲಿ ಸೇರದೇ ಬಿಗಿದಪ್ಪದೇ ನಿನ್ನ ನಾ.. ಮರಳಿದೆ ಗೂಡಿಗೆ ಕಡಲಿನಾ ಒಡಲಿಗೆ...

ಬಡತನ

ಬಡತನವೆಂದು ಬೇಸರವೇ? ಯಾರಿಗಿಲ್ಲ ಬಡತನ? ಸುಖ ಕೊಡುವುದಿಲ್ಲ ಸಿರಿತನ ಸಿರಿವಂತರ ಚಿಂತೆ ಹಲವು ನಮಗಿಲ್ಲ ಅದರ ಗೊಡವು ನಮಗೆ ಬರಿಯ ಹೊಟ್ಟೆ ಚಿಂತೆ ಮಲಗಲಿದೆ ದೊಡ್ಡ ಸಂತೆ ಯಾರೋ ಉಟ್ಟು ಬಿಟ್ಟ ಬಟ್ಟೆ ನಮಗಿದ್ದೇ...
ಬಂಡವಾಳ: ಭಕ್ತ ಮತ್ತು ಭಗವಂತ

ಬಂಡವಾಳ: ಭಕ್ತ ಮತ್ತು ಭಗವಂತ

ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಕೇಳಿ ಬರುತ್ತಿರುವುದು ಬಂಡವಾಳದ ಮಾತು. ಮಾತೇ ಬಂಡವಾಳವೆಂದುಕೊಂಡಿದ್ದ ಆಳುವ ವರ್ಗ ಈಗ ಬಂಡವಾಳವನ್ನೇ ಮಾತಾಗಿಸಿಕೊಂಡಿದೆ. ರಾಜ್ಯ ಸರ್ಕಾರವಾಗಲಿ, ಕೇಂದ್ರ ಸರ್ಕಾರವಾಗಲಿ, ಅವುಗಳ ನೇತೃತ್ವ ವಹಿಸಿಕೊಂಡವರು ಸ್ಥಳೀಯ ಬಂಡವಾಳ ಕ್ರೋಢೀಕರಣಕ್ಕಿಂತ ವಿದೇಶಿ...