ನಿನ್ನ ತೆರೆದ ಆಕಾಶದ ಮನೆಯಲ್ಲಿ ಎದೆ ತೆರೆದು ಯಾವ ಅರಿಕೆಯಿಲ್ಲದೇ ನಾನು ಹಾಡುತ್ತಿದ್ದೇನೆ ಮತ್ತೆ ಎಲ್ಲ ರೂಹುಗಳ ಕಳಚಿಕೊಂಡ ರೆಕ್ಕೆಗಳು ಈಗ ವಿಶಿಷ್ಠವಾಗಿದೆ. ಓಣಿಯ ಕೆಸರು ದಾಟಿದ ಹೆಜ್ಜೆಗಳು ಬಯಲ ಸಂಭ್ರಮದಲ್ಲಿ ಬದುಕ ಅರಳಿಸಿ ಖಾಯಂ ಆಗಿ ಖುಷಿಯಿ...

ಜೋಗದ ಜೋಗಿ ನೀನು ಏಕೆ ಕಾಡುವೆ ನನ್ನನ್ನು ನೀನು ನೀನಾಗಿರಲು ಜೋಗಿ ನನಗಿಲ್ಲ ಚಿಂತೆ ಏನು ಹೋಗು ಹೋಗೆಲೋ ಜೋಗಿ ಮುಂದಕೆ ಹೊಟ್ಟೆಗಿಲ್ಲದೆ ಕಟ್ಟೆಯೇ ಆಸರೆ ಆಗಿದೆ ಏನೆಂದು ಹೇಳಲೋ ಜೋಗಿ ಏನನ್ನು ಕೊಡಲೋ ಜೋಗಿ ಜೋಗಿ- ಜೀವನ ನಿನ್ನದ ಅವ್ವ ಭಾವನ ನಿನ್ನದ...

ಪ್ರಶ್ನೆಯು ಸುಲಭವಾದುದು ; ಕಷ್ಟವೆಂಬುದು ….. ಉತ್ತರ ಮಾತ್ರ. ಆದರೆ, ವಿದ್ಯಾರ್ಥಿಗಳ ಮೇಲೆ ಕರುಣೆಯಿಲ್ಲದೆ, ಕೇಶವ ಮಾಸ್ಟ್ರು ಅದನ್ನು ವಿದ್ಯಾರ್ಥಿಗಳ ಮುಂದೆ ಇಟ್ಟರು! ಸಹಶಿಕ್ಷಣವು ಶಾಲೆಯಲ್ಲಿ ಆರಂಭವಾದಂದಿನಿಂದ ಪುರುಷರ ಜೀವನಕ್ಕೆ ಸಂಬಂ...

ಆತ್ಮ ದೇಹಗಳದೇ ಒಂದು ಇತಿಹಾಸ ಇವುಗಳ ನಡುವಿನ ಹೋರಾಟ ದೊಡ್ಡ ಸಹಾಸ ಇಂದ್ರಿಯಗಳತ್ತ ಸರಿಯುವುದು ಪ್ರೇಯಸ್ಸು ಆತ್ಮ ಅನುರಾಗದ ಚಿಂತನೆಯೇ ಶ್ರೇಯಸ್ಸು ಅನಾತ್ಮನಾಗುವುದೆಂದರೆ ದೇಹ ಭಾವ ಆತ್ಮ ಅನುಭವಿಸುವಿಕೆ ದೇವ ಭಾವ ನಿತ್ಯವೂ ನಾವು ನಮ್ಮೊಂದಿಗಿನ ಯು...

ನನ್ನ ಹೆಂಡತಿ ನನ್ನನೀಗ ಕರೆಯುವುದು| ಅದು ಐತಿ, ಅದು ಕುಂತತಿ ಅದು ಪೇಪರ್ ಓದುತ್ತತಿ, ಇಲ್ಲಾ ಟಿ.ವಿ ನೋಡ್ತುತಿ|| ಮದುವೆಯಾದ ಹೊಸದರಲಿ ರೀ, ಎನ್ರೀ, ರೀ ಬರ್ರೀ, ರೀ ಹೌದಾರೀ ಅದೂ ಒಂತರಾ ರೀ…. ಬರೀ ರೀ ಸಾಮ್ರಾಜ್ಯ| ನಂತರ ಕ್ರಮೇಣ ದಾಂಪತ್ಯ...

ಎರಡು ಕಲ್ಲುಗಳ ನಡುವೆ ಬೆಳದ ಒಂದು ಅರಳಿ ಗಿಡವನ್ನು ಉಳಿಸಲು ಅವನು ಕಲ್ಲುಗಳನ್ನು ಜರಿಗಿಸಲು ಶ್ರಮ ಪಡುತ್ತಿದ್ದ. ಒಬ್ಬ ಶ್ರೀಮಂತ ಅಲ್ಲಿಗೆ ಬಂದು ‘ಕಲ್ಲಿನ ಮಧ್ಯ ಹೇಗೆ ಗಿಡ ಬೆಳದಿದೆಯೋ ತಿಳೀತಾ ಇಲ್ಲ’ ಎಂದ. ಆಗ ಬಡವ ‘ಕಲ್ಲಿನಂಥ ಕಠಿಣ ಹೃದಯದ ಶ್ರ...

ಹಣೆ ಬರಹದಣೆಕಟ್ಟು ಜಾತಿ ಮತಗಳ ಸುಟ್ಟು ಬಂದೇವು ಬಡವರು ಹೊಸ ಪಂಜು ಹಿಡಿದು. ಭೋರ್ಗರೆವ ನೀರೊಳಗೆ ಬಡವರೊಂದಾದೇವು ಹನಿ ಹನಿಯ ಕಿಡಿಗೊಳಿಸಿ ಅಲೆಯಾಗಿ ಹರಿದೇವು. ಅಪ್ಪಳಿಸಿ ಅಲೆಯಾಗ್ನಿ ಬೆಟ್ಟ ಬೂದಿಯಾದೀತು ಮಂತ್ರ ಹೇಳುವ ಮರ ಮೊದಲೆ ಬಿದ್ದಿತು. ರತ್...

ವೃತ್ತಿಪರತೆ ಎನ್ನುವುದು ಇಂದು ಎಲ್ಲಾ ಕ್ಷೇತ್ರಗಳನ್ನೂ ಆವರಿಸಿಕೊಂಡಿದೆ. ದಿನನಿತ್ಯದ ಸಂಗತಿಗಳಾದ ಆಡುಗೆ, ಹೊಲಿಗೆ, ಪಾಠ ಹೇಳುವುದು, ಕೂದಲು ಕತ್ತರಿಸಿಕೊಳ್ಳುವುದರಿಂದ ಹಿಡಿದು ಕ್ರಿಕೆಟ್‍ನಂತಹ ಕ್ರೀಡೆಗಳ ತನಕವೂ ಈ ಪ್ರವೃತ್ತಿ ಇಣುಕುತ್ತಿದೆ. ಕ...

ವ್ಯಾಸಮಠದ ಶ್ರೀವ್ಯಾಸರಾಯರು ಪರೀಕ್ಷೆ ಮಾಡಲು ಶಿಷ್ಯರನು ನೀಡಿದರೆಲ್ಲರಿಗೆರಡೆರಡಂತೆ ಮಾಗಿದ ಬಾಳೆಯ ಹಣ್ಣನ್ನು ’ತಿಂದು ಬನ್ನಿರಿ ಬಾಳೆಯ ಹಣ್ಣನು ಯಾರೂ ಇಲ್ಲದ ಜಾಗದಲಿ’ -ಎಂದು ಕಳುಹಿದರು ಎಲ್ಲ ಶಿಷ್ಯರನು ಒಂದಿನ ಸಂಜೆಯ ವೇಳೆಯಲಿ ಅರ್ಧಗಂಟೆಯಲಿ ಎ...

ಬೆಟ್ಟಕ್ಕೆ ಮಣ್ಣೊತ್ತವೆಲ್ಲಾ ಇರುವೆಗಳು ನೀ ನೋಡುತ್ತಾ ಇದ್ದಿ ಮಹಾರಾಯ ಸಣ್ಣಿರುವೆ ದೊಡ್ಡಿರುವೆ ಸಣ್ಣ ಕಣ್ಣಿನ ದೊಡ್ಡಿರುವೆ ದೊಡ್ಡ ಕಣ್ಣಿನ ಸಣ್ಣಿರುವೆ ಸಾಸಿವೆ ಕಾಳಿನ ನುಣ್ಣನೆ ಇರುವೆ ಕಪ್ಪನೆ ಕಪ್ಪಿರುವೆ ಕೆಂಪನೆ ಕೆಂಪಿರುವೆ ಮಣ್ಣಿನ ಬಣ್ಣದ ...

1...34567...147

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...