ಕರಗಿದ ಕಾರ್‍ಮೋಡ ಅನುರಾಧ ಶಂಕರರಿಗೆ ಡಿಲ್ಲಿಯಿಂದ ಹೈದರಾಬಾದಿಗೆ ವರ್ಗವಾದ ಸಮಯದಲ್ಲಿ ಅಚಲನೂ ಒಂದು ತಿಂಗಳ ರಜೆಯಲ್ಲಿ ಊರಿಗೆ ಬಂದಿಳಿದ. ಅನುರಾಧಳೂ ಹೈದರಾಬಾದಿಗೆ ಹೋಗುವ ಮೊದಲು ತಾಯಿ ಮನೆಗೆ ಬಂದಳು. ಈಗಿನ ಅಚಲನ ಚೆಲುವೇ ಬೇರೆ. ಹುಡುಗ ಹೋಗಿ ಗಂಡ...

ನೆರಿಗೆ ಸೀರೆಯುಟ್ಟ ನಾರಿ ಚಂದ್ರ ಮೊಗದ ಪೋರಿ ಬಂದು ನಿಲ್ಲು ಒಂದು ಸಾರಿ ನಾ ಕೇಳುವೆ ನಿನ್ನ ಮಧುರ ವಾಣಿ. ಸುಮದ ಹಾಗೆ ನಿನ್ನ ಮನ ದುಂಬಿಯಾಗಿ ಗುಣಗಲೇನು? ಮಧುವಿನಂತೆ ನಿನ್ನ ತನುವು ಮಡಿಲಲಿ ಮಲಗಿ ಹೀರಲೇನು? ಚಂದದಲಿ ನೀನು ಚಂದ ವರ್ಣಿಸಲೇಕೆ ನಿನ್...

ರೈಲು ನಿಲ್ಲುವುದು ಎರಡೇ ನಿಮಿಷ. ಅವಸರವಾಗಿ – ನಾನು ಹತ್ತಿದೆ, ಅವಳು ಇಳಿದಳು, ಸೀದಾ ಹೃದಯದಾಳಕ್ಕೇ! ನೆಲೆಸಿಬಿಟ್ಟಳು. ಸ್ಥಿರವಾಗಿ ಮನ ಮಂದಿರದಲ್ಲಿ. ಎಂದಾದರೊಮ್ಮೆ ಸ್ಮೃತಿ ಪಟಲದ ಮೇಲೆ ಮಿಂಚುವಳು ಮರೆಯಾಗದವಳು ಮರೆಯಲಾಗದವಳು. ***** ೧೪...

ಅಭಿವೃದ್ಧಿ’ಯೆಂಬ ಪರಿಕಲ್ಪನೆಯು ಒಂದು ಪದ ಮಾತ್ರವಾಗಿ, ಸರ್ಕಾರಗಳ ಮಂತ್ರದ ಮಾತಾಗಿ ಬಳಕೆಯಾಗುತ್ತ ಹೋದಂತೆ ತನ್ನ ಸಂವೇದನಾಶೀಲತೆಯನ್ನು ಕಳೆದುಕೊಳ್ಳುವ ಆತಂಕ ಮೂಡುತ್ತದೆ. ಅಷ್ಟೇ ಅಲ್ಲ, ಅಭಿವೃದ್ಧಿ ಕೆಲಸಗಳು ನಡೆಯುವಾಗ ಏಳುವ ಪ್ರಶ್ನೆಗಳು ಮತ್ತು...

ಚಿನ್ನದ ಚೆಲುವಿನ ಚಂದದ ಜೀವನ ಹೊನ್ನಿನ ತಂದೆಯು ನೀಡಿದನು ಮುತ್ತಿನ ನಿರ್ಮಲ ಉತ್ತಮ ಜೀವನ ಸತ್ಯದ ತಂದೆಯು ಮಾಡಿದನು ಮಮತೆಯ ಮುರಳಿಯ ಮೋಡಿಯ ಮಂತ್ರಕೆ ಸಕಲವ ಮರೆಯುತ ನಾ ಬಂದೆ ಹೃದಯದ ಕತ್ತಲೆ ಕಾಲ್ತೆಗೆದೋಡಿತು ಬೆಳಕಿನ ದೇವತೆ ನಾನಾದೆ ಎತ್ತರ ಎತ್ತ...

ಪಾಪಣ್ಣನ ಎಮ್ಮೆ ಕಳೆದು ಹೋಗಿತ್ತು. ಎಮ್ಮೆ ಹುಡುಕುತ್ತಾ ಹೊರಟಿದ್ದ ಪಾರ್ಕಿನ ಹತ್ತಿರ ಹೋಗುತ್ತಿದ್ದಾಗ ಹುಡುಗಿಯೊಬ್ಬಳು ತನ್ನ ಹುಡುಗನಿಗೆ “ಪ್ರಿಯ ನಿನ್ನ ಕಣ್ಣಲ್ಲಿ ನನಗೆ ಇಡೀ ಪ್ರಪಂಚ ಕಾಣುತ್ತಿದೆ…” ಪಾಪಣ್ಣ ಕೂಡಲೇ ಕೂಗಿ...

ಸ್ವಾತಂತ್ರ್ಯ ನಿನಗೀಗ ಐವತ್ತು ನೀನು ಬಂದು ಹತ್ತು ವರ್ಷಗಳಿಗೆ ನನ್ನ ಹುಟ್ಟು ತುಂಬಿದೆ ನನಗೀಗ ನಲವತ್ತು ನೀನು ಅರ್ಧರಾತ್ರಿಯಲಿ ಕತ್ತಲೆಯನ್ನು ಸೀಳುತ್ತಾ ಸೂರ್ಯನಂತೆ ಬಂದೆಯಂತೆ, ನನಗದು ಗೊತ್ತಾಗಲೇಯಿಲ್ಲ. ಏಕೆಂದರೆ ನಾನಾಗ ಹುಟ್ಟಿರಲೇ ಇಲ್ಲ. **...

ಜಲದಾಹವತಿಯಾದರದರರ್ಥ ಮಧುಮೇಹವಿ ರಲಾಗ ಸೋಲೆನೆಂದಂತೆ ಅಪಥ್ಯದೊಳಿರಲುಂಟೇ? ಬಲು ವಿಧದ ಕಷ್ಟನಷ್ಟಗಳೆಮ್ಮ ಕೃಷಿಯೊಳಿ ರಲಿದಕೆ ಧನದಾಹ ಕಾರಣವಿದನುಪೇಕ್ಷಿಸಲಳ ವಿಲ್ಲ, ಏಕಬೆಳೆಯಧಿಕ ಬೆಳೆ ಇಳೆಯ ಕಜ್ಜಿಗೆ ಮೂಲ – ವಿಜ್ಞಾನೇಶ್ವರಾ *****...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...