ನಿನ್ನ ಇರುವಿಕೆಯೇ ನನಗೊಂದು ಚೇತನ ಮೋಡ ಆಕಾಶ ಗಿಡ ಮರ ಹುಲ್ಲು ಹೂ ಇವು ಹೇಗೆ ಇರು ತ್ತವೆಯೋ ಹಾಗೇ ನೀನೂ ಇರು ಅವೂ ಏನೂ ಕೊಡುವುದಿಲ್ಲ ನೀನೂ ಏನೂ ಕೊಡಬೇಡ ಅವುಗಳಂತೆ ನೀನೂ “ಇರು” ವುದಿದೆಯಲ್ಲಾ ಅದೇ ನನಗೆ ದೊಡ್ಡದು. *****...

ಯಾವಾಗ ನೋಡಿದ್ರೂ ಜರಿಶಾಲು, ರೇಷ್ಮೆ ಪೇಟ ದೀಪಾ-ಧೂಪಾ ಹೂವು-ಹಾರ ಜೊತೆಗೆ ನಾಯಕರ ನಗೂ ಮುಖ ಹೊತ್ಕೊಂಡು ಬರ್‍ತಾ ಇದ್ದ ಪೇಪರ್‌ನಾಗೆ ನಿನ್ನ ಸುದ್ದಿನೂ ಓದ್ದೇ ಕಣಪ್ಪಾ… ದಿಕ್ಕಿಲ್ಲದಂಗೆ ರಾಶಿ ಬಿದ್ದಿದ್ದ ಟೊಮೊಟೊ, ಆಲೂಗಡ್ಡೆ, ಮೆಕ್ಕೆಜೋಳದ...

ಗುಂಡು ತಾತಗೆ ತೇಜಾ ಪಟ್ಟಣದಿಂದ ಒಬ್ಬ ಹಿರಿ ಅಧಿಕಾರಿಯೊಡನೆ ಬಂದಿದ್ದಾನೆಂದು ತಿಳಿದಾಕ್ಷಣ ಅವನು ಯುವಕರನ್ನು ಒಟ್ಟುಗೂಡಿಸಿದ. ಬಂಡೇರಹಳ್ಳಿಯನ್ನು ಪ್ರವೇಶಿಸುವ ಮಾರ್ಗದಲ್ಲೇ ಕಾರಿನಿಂದಳಿದು ನಡೆಯುತ್ತಾ ಬರುತ್ತಿದ್ದರು ತೇಜಾ ಮತ್ತು ಸ್ಕ್ವಾಡಿನ ಮ...

ನಾನಡಿಯ ಇಡಬೇಕು ಬದುಕಲಿ ಮಡಿಯುವ ಮುನ್ನ ಈ ಜಗದಲಿ ಏರು ಪೇರಿನ ಬಾಳನು ಸಮ ಸ್ವೀಕರಿಸುತಲಿ ಹಸನಾದ ಬದುಕು ಏರಿಳಿಯುತಲಿ ಈ ಭೂಮಿಗೆ ಬಂದ ಮೇಲೆ ಏತಕ್ಕಾಗಿ ಹಲವು ಚಿಂತೆ ನಗು ನಗುತ ಬಾಳ ಬೇಕಂತೆ ಬಂದದ್ದು ಬರಲೆಂದರೆ ನಾ ಗೆದ್ದಂತೆ ಮನಸ್ಸುಗಳ ಮನದಲ್ಲಿ...

ಎಷ್ಟೋ ಸಲ ನಿಮಗನ್ನಿಸಬಹುದು ಇದು ಮೋಸ, ಇದು ಅನ್ಯಾಯ ಎಂದು. ಅದು ಏಕೆ ಹಾಗೆ? ಎಂದು ಕೇಳುವಂತಿಲ್ಲ ಏಕೆಂದರೆ… ನಾವು ಬಾಯಿಲ್ಲದವರು. ನಮ್ಮ ಮಗುವಿಗೆ ಶಾಲೆಗೆ ಸೀಟು ಸಿಗಲಿಲ್ಲ ಇಂಟರ್‌ವ್ಯೂನಲ್ಲಿ ಮಗು ಪಾಸಾಯಿತಲ್ಲ? ವಂತಿಕೆ ಕೊಡುವೆವೆಂದರೂ ...

೩-೩-೨೦೦೮ರಿಂದ ಕನ್ನಡ ಚಿತ್ರರಂಗವು ಎಪ್ಪತೈದನೇ ವರ್ಷಕ್ಕೆ ಕಾಲಿಡುತ್ತಿದೆ. ಅಂದರೆ ವಜ್ರ ಮಹೋತ್ಸವ ವರ್ಷ ಆರಂಭವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕನ್ನಡ ಚಿತ್ರರಂಗದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಅಷ್ಟೇನೂ ಆರೋಗ್ಯಕರವಾಗಿಲ್ಲ. ಅಷ್ಟೇಕೆ ಚಿ...

ಸಗ್ಗ ಲೋಕಕೆ ಹಗ್ಗ ಹಚ್ಚುತ ಜಗ್ಗು ಹಿಗ್ಗಿನ ಒಡೆಯನೆ ಸಾಕು ನರಕಾ ಪಾಪ ಚರಕಾ ಎತ್ತು ಎತ್ತರ ಇನಿಯನೆ ||೧|| ನೀಲ ಮುಗಿಲಿನ ಕಾಲ ಗಗನದಿ ಕಾಲವಾದನೆ ಕವಿಗುರು ಎಲ್ಲಿ ಕಿರಣಾ ಅರುಣ ಸ್ಫುರಣಾ ಕಾಣೆಯಾದನೆ ರವಿಗುರು ||೨|| ಸಾಕು ಶೀತಲ ಭೀತಿ ಬೂರಲ ಗಾಳಿ...

ಗುಂಡ: ತನ್ನ ಗೆಳೆಯರಿಗೆ ಹೇಳಿದ – ತಿಂಗಳ ಕೆಳಗೆ ಬಾವಿಗೆ ಬಿದ್ದ ನಮ್ಮಣ್ಣನ ವಾಚು ನಿನ್ನೆ ಸಿಕ್ಕಿತು ತಿಮ್ಮ: ಅದರಲ್ಲೇನು ವಿಶೇಷ… ಗುಂಡ: ವಿಶೇಷ ವಿರುವುದು ಅಲ್ಲೇ… ಆ ವಾಚು ಇನ್ನೂ ನಡೆಯುತ್ತಲೇ ಇತ್ತು… ತಿಮ್ಮ: ಅದ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...