Day: November 25, 2020

#ಕವಿತೆ

ನಮ್ಮ ಊರು ಕನ್ನಡ

0
Latest posts by ಹಂಸಾ ಆರ್‍ (see all)

ನಮ್ಮ ಊರು ಕನ್ನಡ ನಮ್ಮ ನೆಲವು ಕನ್ನಡ ನಾವೇ ನಾವು ಕನ್ನಡಿಗರು|| ಹಚ್ಚಿರಿ ಹಣತೆಯ ಹಣತೆಯಿಂದ ಹಣತೆಗೆ ಸಾಲು ಸಾಲು ಬೆಳಗಿರಿ ನಾವೆ ನಾವು ಆಶಾಕಿರಣಗಳು|| ಸ್ವಾಭಿಮಾನದ ನೆಲವು ಆತ್ಮಾಭಿಮಾನದ ಬೀಡು ಕೆಚ್ಚೆದೆಯ ಮಣ್ಣಿನ ಮಕ್ಕಳು ಕನ್ನಡಾಂಬೆಯ ಕುಲಜರು|| ಸಾವಿರಾರು ಭಾಷೆ ಇರಲಿ ಯಾರ ತಾಯಿ ಯಾವ ಮಡಿಲು ಭಾಷೆ ರೀತಿ ನೀತಿ ಇರಲಿ ಕತ್ತಲು […]

#ಇತರೆ

ಪುಸ್ತಕದಂಗಡಿಗಳು

0
ಕಾಸರಗೋಡಿನ ಕಾರಡ್ಕ ಎಂಬಲ್ಲಿ ೧೯೪೦ ರಲ್ಲಿ ಜನನ. ಕಾಸರಗೋಡು, ತಿರುವನಂತಪುರ, ಹೈದರಾಬಾದುಗಳಲ್ಲಿ ವಿದ್ಯಾಭ್ಯಾಸ. ಇಂಗ್ಲೀಷ್ ಸಾಹಿತ್ಯದಲ್ಲಿ ಎಂ. ಎ.; ಭಾಷಾಶಾಸ್ತ್ರದಲ್ಲಿ ಪಿಎಚ್.ಡಿ. ಕೇರಳದ ಹಲವೆಡೆ ಇಂಗ್ಲೀಷ್ ಅಧ್ಯಾಪಕರಾಗಿ ವೃತ್ತಿಜೀವನ ಆರಂಭ; ಆನಂತರ ಹೈದರಾಬಾದಿನ ಉನ್ನತ ಶಿಕ್ಷಣ ಸಂಸ್ಥೆ ಸೆಂಟ್ರಲ್ ಇನ್ಸ್‌ಟಿಟ್ಯೂಟ್ ಆಫ್ ಇಂಗ್ಲಿಷ್ ಎಂಡ್ ಫಾರಿನ್ ಲಾಂಗ್ವೇಜಸ್‌ನಲ್ಲಿ ಪ್ರಾಧ್ಯಾಪಕ.೨೦೦೨ರಲ್ಲಿ ನಿವೃತ್ತಿ.ಅಮೇಲೆ ಅಮೆರಿಕ, ಯೆಮೆನ್ ದೇಶಗಳಲ್ಲಿ ಅಧ್ಯಾಪನ. ಸದ್ಯ ಹೈದರಾಬಾದಿನಲ್ಲಿ ವಾಸ್ತವ್ಯ. ‘ಮುಖಾಮುಖಿ’ ಕವನಸಂಕಲನಕ್ಕೆ ಕೇರಳದ ಕುಮಾರನ್ ಆಶಾನ್ ಅವಾರ್ಡ್ ಮತ್ತು ಕಾಂತಾವರದ ವರ್ಧಮಾನ ಪ್ರಶಸ್ತಿ; ‘ಅವಧ’ ಕವನ ಸಂಕಲನಕ್ಕೆ ಮತ್ತು ‘ಸಮ್ಮುಖ’ ಲೇಖನ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ‘ಅಕ್ಷಯ ಕಾವ್ಯ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ೨೦೧೫ರ ಸಾಲಿನ ಪ್ರಶಸ್ತಿ ಲಭಿಸಿದೆ. ಅಲ್ಲದೆ, ಪುತ್ತೂರು ಕರ್ನಾಟಕ ಸಂಘದ ನಿರಂಜನ ಪ್ರಶಸ್ತಿ, ಮತ್ತು ಶಿವಮೊಗ್ಗ ಕರ್ನಾಟಕ ಸಂಘದ ಹಾ.ಮಾ.ನಾ. ಪ್ರಶಸ್ತಿಗಳೂ ದೊರಕಿವೆ.ಕರ್ನಾಟಕ ಸಹಿತ್ಯ ಅಕಾಡೆಮಿಯ ಗೌರವ ಸಾಹಿತ್ಯ ಪ್ರಶಸ್ತಿಗೂ ಇವರು ಪಾತ್ರರಾಗಿದ್ದಾರೆ. ತಿರುಮಲೇಶ್ ಇಂಗ್ಲೀಷ್‌ನಲ್ಲೂ ಹಲವಾರು ಲೇಖನಗಳನ್ನು ಮತ್ತು ಪುಸ್ತಕಗಳನ್ನು ಬರೆದಿದ್ದಾರೆ.
*****
ತಿರುಮಲೇಶ್ ಕೆ ವಿ
Latest posts by ತಿರುಮಲೇಶ್ ಕೆ ವಿ (see all)

ನೀವೊಂದು ಪುಸ್ತಕದಂಗಡಿ ನಡೆಸುತ್ತಿದ್ದೀರಿ ಎಂದಿಟ್ಟುಕೊಳ್ಳೋಣ. ಅಲ್ಲಿ ಅಟ್ಟಳಿಕೆಗಳಲ್ಲಿ ಪುಸ್ತಕಗಳನ್ನು ಕ್ರಮಪ್ರಕಾರವಾಗಿ ಜೋಡಿಸಿಟ್ಟಿದ್ದೀರಿ-ಕತೆ, ಕಾದಂಬರಿ, ಕಾವ್ಯ, ವಿಮರ್ಶೆ, ಸಮಾಜ ವಿಜ್ಞಾನ ಇತ್ಯಾದಿಯಾಗಿ, ಒಂದೊಂದು ವಿಭಾಗದಲ್ಲೂ ಅಕ್ಷರಾನುಕ್ರಮಣಿಕೆಗೆ ಸರಿಯಾಗಿ. ಇದರಿಂದ ಗಿರಾಕಿಗಳು ಬಂದು ಯಾವ ಯಾವ ಪುಸ್ತಕಗಳಿವೆ ಎಂದು ನೋಡಿ ತಾವೇ ಪುಸ್ತಕಗಳನ್ನು ಹೊರತೆಗೆದು ಕಾಗದ ತಿರುವಿ ಹಾಕಿ, ತಾವು ಕೊಂಡಕೊಳ್ಳಬೇಕೇ ಬೇಡವೇ ಎಂದು ಸುಲಭವಾಗಿ ನಿರ್ಧರಿಸಲು ಸಹಾಯವಾಗುತ್ತದೆ. […]

#ಹನಿಗವನ

ಪ್ರೇಮಗಿಂಡಿ

0

ದೇವ ಬಯಸಿದರೆ ತೆರೆಯುತ್ತದೆ ಬೆಳಕ ಕಿಂಡಿ! ದೇವನೆನಸಿದರೆ ತುಂಬಿಕೊಡುತ್ತಾನೆ ಪ್ರೇಮದಾ ಗಿಂಡಿ! *****