ಈ ಚೌಕಾಂಬದಲಿ ನಿಂತು ಕೇಳುವೆನು ನಾನು ಭಾಗ್ಯ ನಗರವೇ ನಿನ್ನೆ ಭಾಗ್ಯದ ಬಾಗಿಲೆಲ್ಲಿ? ಇಷ್ಟೆತ್ತರದಿಂದ ಕಾಣಿಸುವುದೇನು-ಜನರು ಇರುವೆಗಳಂತೆ, ಟ್ರಕ್ಕುಗಳು, ಬಸ್ಸುಗಳು ಎತ್ತಿನಗಾಡಿಗಳು, ತಲೆಹೊರೆಯ ಮೂಟೆಗಳು ಯಾರೋ ಆಡುತ್ತಿರುವ ಆಟಿಕೆಗಳಂತೆ ಮನುಷ್ಯ...

ಮೊದಮೊದಲು ನನ್ನಕ್ಕನ ಕೂಡ ನಾ ಪಾಟಿ ಚೀಲವ ಹೊತ್ತು ಶಾಲೆ ಮೆಟ್ಟಿಲು ಹತ್ತಿದ ಕ್ಷಣ ಮಣಿ ಪಾಟಿಯಲ್ಲಿ ಒಂದೆರಡು ಕಾಗುಣಿತ ಕಲಿತ ದಿನ ಮೊದಮೊದಲು ನನ್ನಪ್ಪನ ಕೈಯಲ್ಲಿ ಕೈಯಿಕ್ಕಿ ನಡೆದು ದೊಡ್ಡ ದೇವನ ಜಾತ್ರೆ ನೋಡಿ ದೊಡ್ಡ ಪುಗ್ಗಿಯ ಕೊಂಡು ನಲಿದ ದಿನ ...

ಚಂದ್ರ ಅಣಕಿಸುವಾಗ ನಾವು ಹೀಗೆ ಕಣ್ಣಲ್ಲಿ ಕಣ್ಣ ಬೆರೆಸಿಯೂ ಬಾಹುಗಳ ಬಂಧಿಸಿ ಬಿಗಿ ಹಮ್ಮಿನಲಿ ಕುಳಿತುಕೊಳ್ಳುವುದು ಸರಿಯೆಂದೇನು ಅನಿಸುತ್ತಿಲ್ಲ ಚಳಿಹೊದ್ದ ರಾತ್ರಿಯಲಿ ಎದುರಿಗೆ ಬೆಂಕಿಕಾಯಿಸುತ್ತ ಎದುರು ಬದರು ಕುಳಿತು ಕೊಳ್ಳುವ ಬದಲು ಮೈಗೆ ಮೈತಾ...

ಬೇವು ವಿಷವಾದೊಡೆ ಅದರ ನೆರಳು ವಿಷವೇ ? ಮಾವು ರುಚಿಯಾದೊಡೇನದರ ನೆರಳು ರುಚಿಯೇ ? ಕೀಳು ಹೊಲೆಯನೆನಲು ಹಿರಿಮೆಗೆ ಸಾವೇ ? ಸಿರಿವ ಸಿರಿಯಾದೊಡೇ ಶೀಲದಲಿ ಸಿರಿಯೇ ? ತಿನಲಾಗದು ಬಲುಕೀಳು ಹುಲ್ಲೆನಲು ಸಲ್ಲುವದೇ ? ಬಿಡಲಾಗದು ಸಿಹಿ ಕಬ್ಬೆನಲದನೆ ಮೆಲಬಹ...

ಒಂದು ಸಿಂಹ ಒಂದು ತೋಳ ಹಾಗೂ ಒಂದು ನರಿ ಇವು ಬೇಟೆಯಾಡುತ್ತ ಅರಣ್ಯದಲ್ಲಿ ಕೂಡಿದವು ಅವು ಒಂದು ಕತ್ತೆ ಒಂದು ಚಿಗರಿ ಒಂದು ಮೊಲ ಹೀಗೆ ಮೂರು ಪ್ರಾಣಿಗಳನ್ನು ಹೊಡೆದವು. ಬೇಟೆಗಳನ್ನು ಮುಂದೆ ಇರಿಸಿಕೊಂಡು ಸಿಂಹವು ತೋಳನಿಗೆ ಅಂದಿತು “ಮಿತ್ರನಾದ...

ಬೆಳಕಿನಲೆ ದೀಪಾವಳಿ ಹಣತೆ ಹೊಳೆ ದೀಪಾವಳಿ ಇರುಳಿನೆದೆಯನು ಸೀಳಿ ಹಬ್ಬುವ ಹಬ್ಬ ಈ ದೀಪಾವಳಿ. ಕವಿವ ಕತ್ತಲ ತಳ್ಳುತ ಬಲಿಯ ಹೆಡತಲೆ ಮೆಟ್ಟುತ ಜನದ ಮನಕೆ ಮೋದ ಸಂತಸ ಸುರಿಯುವೀ ದೀಪಾವಳಿ. ಸಣ್ಣ ಹಣತೆಯ ಕುಡಿಗಳು ಉರಿವ ಸೂರ್ಯನ ಮರಿಗಳು ಒಟ್ಟು ನಿಂತರೆ...

ಬೀದಿ ರಾಡಿಯಲಿ ಉರುಳುರುಳಿ ಆಡಿ ಮೈ ಮನವೆಲ್ಲಾ ಹಗುರಾಗಿ ಗಾಳಿಯಲಿ ತೇಲಾಡಿ ತನ್ನನೇ ಮರೆವ ಕನಸು ರೊಟ್ಟಿಗೆ. ಜಾಣ ಕುರುಡು ಜಾಣ ಕಿವುಡು ಜಾಣ ಮರೆವು. ಎಚ್ಚರದ ನಿಲುವು ಹಸಿವೆಗೆ....

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...