ವಿಚಿತ್ರಸತ್ಯ

ಜಗದ ಪರಿಗೆ ಬೇಸತ್ತ ಬುದ್ಧ ನಡುರಾತ್ರಿ ಚಕ್ಕನೆ ಹೊರಬಿದ್ದು ಭೋದಿವೃಕ್ಷದ ಕೆಳಗೆ ಕುಳಿತು ಮಹಾನ್ ಭಗವಾನ್ ಬುದ್ಧನಾದ ಯಶೋಧೆ ಹಗಲಿನಲ್ಲಿಯೇ ಹೊರಬಿದ್ದಿದ್ದರೂ ಅಗ್ನಿ ಪರೀಕ್ಷೆಯ ರಾಮಾಣವಾಗಿ ಅಡವಿ ಸೇರಿಬಿಡುತ್ತಿದ್ದ ರಾಮನ ತಮ್ಮ ಬುದ್ಧ. *****

ಆಸ್ಪತ್ರೆಯಲ್ಲಿ

ಊರುಗೋಲಿನ ಅಜ್ಜ ಆಸ್ಪತ್ರೆಯ ಆವರಣದಲಿ ಒಬ್ಬನೇ ಮೆಲ್ಲನೆ ತಿರುಗಿದಾಗ ಮೂಲೆಯ ಹೂಕುಂಡದಲಿ ತುಂಬ ಬಾಡಿದ ಹೂಗಳು. ಅಲ್ಲಿ ಬಿದ್ದಿರುವ ಅಳಲು ಯಾವುದೋ ಪಾಪಕಂಡ ಬದುಕು ಹೊತ್ತೊಯ್ಯುವ ನರಕ, ಯಾತನೆಗಳಿಗೆ ಮುದಿ ಮನುಷ್ಯ ಕಣ್ಣುಗಳು ಭಾರಭಾರ....