ಯಾರು ನಮ್ಮ ಕರೆದರು?

ಯಾರು ನಮ್ಮ ಕರೆದರು, ಕರೆದು ಎಲ್ಲಿ ಸರಿದರು? ನಾವು ಬರುವ ಮೊದಲೆ ನೂರು ಸೋಜಿಗಗಳ ಮೆರೆದರು? ಯಾರು ಬೆಳಕ ಸುರಿದರು ನದಿಗಳನ್ನು ತೆರೆದರು? ಆಕಾಶದ ಹಾಳೆಯಲ್ಲಿ ತಾರೆಗಳನು ಬರೆದರು? ಗಾಳಿಯಾಗಿ ಹರಿದರು ಬೆಂಕಿಯಾಗಿ ಉರಿದರು?...