ಏಕೆ ಕಣ್ಣು ಹೀಗೆ ತೇವಗೊಂಡಿತು?
Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)
- ಕಾಣ್ಕೆ ಬೇರಾದರೂ ಕರುಳು ಒಂದೇ - January 21, 2021
- ಒಪ್ಪಿಕೊ ಪರಾಭವ! - January 14, 2021
- ಕದನ ವಿರಾಮದ ಮಾತು - January 7, 2021
ಏಕೆ ಕಣ್ಣು ಹೀಗೆ ತೇವಗೊಂಡಿತು, ಏಕೆ ಮನವು ಕಳವಳದಲಿ ಮುಳುಗಿತು? ಇದ್ದಕಿದ್ದ ಹಾಗೆ ಏನೋ ಮಿಂಚಿತು ತಿಳಿಯದಿದ್ದರೇನು ಮನಕೆ ಹೊಳೆಯಿತು. ಯಾರ ದನಿಯೊ ಎದೆಯ ಹಾದುಹೋಯಿತು ಬಾನಿನಲ್ಲಿ ತಾರೆ ಸಂತೆ ಸೇರಿತು ಶ್ರುತಿಗೊಂಡಿತು ವೀಣೆ, ತಾನೆ ದನಿಯಿತು ಝೇಂಕಾರಕೆ ಕಾದ ಹೃದಯ ನೆನೆಯಿತು. ಸಂಜೆ ಬಾನಿನಂಚು ಮಧ್ಯಮಾವತಿ ಬಂದೆ ಬರುವ ಮತ್ತೆ ಅರುಣಸಾರಥಿ. ***