ಎಲ್ಲಿ ಹೋಗಲೆ, ಹೇಗೆ ಕಾಣಲೆ?

ಎಲ್ಲಿ ಹೋಗಲೆ, ಹೇಗೆ ಕಾಣಲೆ ನನ್ನ ಗಿರಿಧರನ? ನನ್ನ ಬೀಡಿಗೆ ತಾನೆ ಬಂದು ಕಾದು ನಿಂತವನ ಹೇಗೆ ಕಾಣದೆ ಹೋದೆನೇ, ಹೇಗೆ ತರಲವನ? ಈಗ ದಿನವೂ ದಾರಿಬದಿಗೇ ನಿಂತು ಕಾಯುವೆನೇ, ಮತ್ತೆ ಬಾರನೆ ಸ್ವಾಮಿ...