ಶರಣರಲಾವಿಯಾಡುನ ಬಾರೋ
Latest posts by ಶಿಶುನಾಳ ಶರೀಫ್ (see all)
- ಆಶಮಾಡಿ ಪಾಶಕ ಬಿದ್ದಿತೋ ಚಿಗರಿ - April 22, 2013
- ನವಾಬಿ ಮಲ್ಲಿಗಿ ಹೂವಿನ ಗಜರಾ - April 17, 2013
- ಭೂಪಾರದೊಳಗೆ ಮದೀನಶಹರದೊಳು - April 15, 2013
ಶರಣರಲಾವಿಯಾಡುನ ಬಾರೋ ಮನಕ ತಿಳಿದು ನೀ ನೋಡೋ ||ಪ|| ಸಧ್ಯದಿ ಸಮರದೊಳು ಮಧ್ಯದಿ ಕೂಡುವ ಬುದ್ದಿವಂತರಲ್ಲೆ ತಿದ್ದಿಯಾಡುನು ಬಾ ||೧|| ಮಾಡೋದು ಚಂದ್ರನ್ನ ನೋಡಿ ಗುದ್ದಲಿ ಹಾಕಿ ಬೇಡಿಕೊಂಡು ಅಲಾವಿ ಕೂಡಿಯಾಡುನು ಬಾ ||೨|! ದೇಶಕಧಿಕವಾದ ವಾಸುಳ್ಳ ಶಿಶುನಾಳ ಗುರುವು ಹೇಳಿದ್ದು ಕೇಳಿ ಕೂಡಿಯಾಡುನು ಬಾರೋ ||೩|| *****