ನಾವೆಲ್ಲಾ… ಒಂದೇ ಭಾರತ ಮಾತೆಯ ಮಕ್ಕಳು ಭೇದ-ಭಾವ ಬೇಡ ನಮ್ಮಲಿ ಹಿಂದು, ಮುಸ್ಲಿಂ, ಕ್ರೈಸ್ತರೆನ್ನದೆ ನಾವೆಲ್ಲಾ ಮೊದಲು ಭಾರತೀಯರು ಸಹೋದರತೆಯ ವಾತ್ಸಲ್ಯದಲಿ ಸಹನೆ, ಶಾಂತಿಯೇ ನಮ್ಮ ಕೈಗೋಲು ಜಾತಿ, ವಿಜಾತಿಯೆನ್ನದೆ… ಜಾಗೃತರಾಗಿರಬೇಕ...

ಹಾಡು – ೧ ಹೇಳಿರಣ್ಣ ಹೇಳಿರೊ ಬುದ್ಧಿವಂತ ಜನಗಳೆ ಕೇಳಿರಣ್ಣ ಕೇಳಿರೊ ಮನಸುಳ್ಳ ಜನಗಳೆ || ಹೇಳಿರಣ್ಣ ಹೇಳಿರೊ ಹೆಣ್ಣೆಚ್ಚೊ ಗಂಡಚ್ಚೊ || ಹೆಣ್ಣೆಚ್ಚು ಎಂಬುವರು ಕಾರಣವ ತಿಳಿಯಿರೊ ಗಂಡೆಚ್ಚು ಎಂಬುವರು ಕಾರಣವ ಹೇಳಿರೊ || ಮಗುವಾಗಿ ಹುಟ್ಟಿದ...

ನೀನು ಮಾಡಬೇಕಾದದ್ದು ನೋಡಬೇಕಾದದ್ದು ಇನ್ನೂ ಬಹಳವಿತ್ತು ಯಾಕೆ ಹೋದೆ ? ನಂಬಲೂ ಕಷ್ಟ ಮಲಗಿದೆಯಂತೆ ತುಸು ತುಸು ಮುಲುಗಿದೆಯಂತೆ ಮೈ ಬಿಸಿ ಏರುತ್ತ ಇಳಿಯುತ್ತಾ ಮತ್ತೆ ಏರುತ್ತ ಇಳಿದು ಬಿಟ್ಟಿತಂತೆ ಈಗೀಗ ಪದೇ ಪದೇ ನಿನ್ನ ನೆನಪು ಅದೇ ರೂಪು ಅದೇ ರೂಹ...

ನನ್ನ ಜೀವನದ ಕೆಲವು ಘಟನೆಗಳನ್ನು ನಾನು ಕೇಳಿದ್ದು, ನೋಡಿದ್ದು ಇವುಗಳನ್ನು ನನ್ನಿಂದಲೇ ಕೇಳಬೇಕು, ಓದಬೇಕು ಎನ್ನುವುದು ನನ್ನ ಮಕ್ಕಳ, ಮೊಮ್ಮಕ್ಕಳ ಬಯಕೆ. ಇದನ್ನು ಈಡೇರಿಸದಿದ್ದರೆ ನನ್ನ ಮೂರು ದಶಕಗಳ ಅಧ್ಯಾಪನ ವೃತ್ತಿಗೆ ನ್ಯಾಯವಾಗಲಿಕ್ಕಿಲ್ಲ. &...

ಪಾತ್ರ ವರ್ಗ * ೬ ಮಕ್ಕಳು * ಗಂಟೆ ಕಳ್ಳ * ಇಬ್ಬರು ಪ್ರಯಾಣಿಕರು * ಒಂಭತ್ತು ವ್ಯಕ್ತಿಗಳು * ಚಿನ್ನಮ್ಮ * ಅಸ್ಥಿಪಂಜರ * ದೊಡ್ಡೇಗೌಡ * ಗುಂಡಣ್ಣ * ಹೆಣ್ಣುಮಂಗ * ಗಂಡುಮಂಗ * ಏಳು ಮಂಗಗಳು * ಪೂಜೆ ಭಟ್ರು. ದೃಶ್ಯ -೧ (ಗಂಟೆಯ ಸದ್ದು- ಮಕ್ಕಳು ಕ...

ಪ್ರೀತಿ-ಪ್ರೇಮಗಳ… ಕಥೆಯನು ಹೆಣೆಯುತ ದಿನ ಕಳೆಯುವ ಯುವಕರೆ ಪ್ರೀತಿಯ ಬಳ್ಳಿಯನು ಹರ್ಷದಿ ತಂದು… ಮಲ್ಲಿಗೆ ಪಡೆಯುವ ಕನಸನು ಕಂಡು… ನಿರಾಶೆಯಲಿ ಮುಳ್ಳನು ಪಡೆಯುವ ಹದಿಹರೆಯದ ಯುವ ಪ್ರೇಮಿಗಳೆ ಆ ಚೆಲುವು ಮುಖದಲಿ ತಿಳಿ ನಗೆಯ ಬಲ...

ನರಿಯ ಸಾಕಿದೆ ನಾನೊಂದು ನರಿಯ ಸಾಕಿದೆ ಮರವು ತಿಳಿದು ಅರಿವಿನ ಪಂಜರದೊಳು ||ಪ|| ಗಿಡಾ ಅಡವಿಯ ನರಿಯ ಕೆಡವಿತೆ ಒಡನಾಲುವ ನರಿಯು ಹಿಡಿ ತುದಿಯನು ಮಹೇಶಮಂತ್ರ ಜಪ ನುಡಿದು ಬೈಲಾಗುವ ನರಿಯು ||೧|| ಉದಯಕಾಲದಿ ಎದ್ದು ಸದ್ಗುರುವಿಗೆ ಕಾಂಬುವ ನರಿಯು ಮುದ...

ಸದ್ಗುರು ಸಾಕಿದ ಮದ್ದಾನಿ ಬರುತಲಿದೆ ಎದ್ದು ಹೋಗಿರಿ ಇದ್ದ ನಿಂದಕರು ||ಪ|| ಬಿದ್ದು ಈ ಭವದೊಳು ಒದ್ದಾಡು ಜನರನ್ನು ಉದ್ಧಾರ ಮಾಡುತ ಬರುತಲಿದೆ ||೧|| ಆಕಾಶ ನೋಡುತ ವಾಯುವ ನುಂಗುತ ಝೇಂಕರಿಸುತಲದು ಬರುತಲಿದೆ ||೨|| ಅಷ್ಟಮದಗಳೆಂಬೊ ಕೆಟ್ಟ ನೀಚರನ್...

ಇಂದು ಬರೆಯುತ್ತಿರುವ ಹಲವಾರು ಕ್ರಿಯಾಶೀಲ ಲೇಖಕರ ಪಟ್ಟಿಯಲ್ಲಿ ವಸುದೇಂದ್ರರ ಹೆಸರೂ ಸೇರಿಕೊಳ್ಳುತ್ತದೆ. ನನ್ನ ಮಟ್ಟಿಗೆ ಹೇಳುವುದಾದರೆ, ವಸುಧೇಂದ್ರರ ಸಾಹಿತ್ಯ ಬದಲಾವಣೆಯ ಸೂಚನೆಗಳನ್ನು ಹೊಂದಿದಂತಹದು. ಈ ಬದಲಾವಣೆಯೆಂಬುದು ಕಥನದ ಮಾದರಿಯಲ್ಲೇ ಆಗ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...