ನಿಜವೇ ಇದು ನಿಜವೇ
Latest posts by ಶಿಶುನಾಳ ಶರೀಫ್ (see all)
- ಆಶಮಾಡಿ ಪಾಶಕ ಬಿದ್ದಿತೋ ಚಿಗರಿ - April 22, 2013
- ನವಾಬಿ ಮಲ್ಲಿಗಿ ಹೂವಿನ ಗಜರಾ - April 17, 2013
- ಭೂಪಾರದೊಳಗೆ ಮದೀನಶಹರದೊಳು - April 15, 2013
ನಿಜವೇ ಇದು ನಿಜವೇ ನಿಜವಲ್ಲಾ ಅಜ ಹರಿ ಸುರರಿಗಲ್ಲದ ಮಾತು ||ಪ|| ನರಜನ್ಮ ಸ್ಥಿರವೆಂದು ಧರೆಗೆ ಉದಿಸಿಬಂದು ಸಿರಿಯು ಸಂಪತ್ತು ಸೌಭಾಗ್ಯ ಲೋಲ್ಯಾಡುವದು ||೧|| ಅಂಗಲಿಂಗದ ಸಮರಸನರಿಯದೆ ಮಂಗನ ತೆರದಲ್ಲಿ ಪೂಜಿಸುವದು ||೨|| ವಸುಧಿಯೊಳು ಶಿಶುನಾಳಧೀಶನಲ್ಲದೆ ಬ್ಯಾರೆ ತುಸು ಜ್ಞಾನ ಅರಿಯದೆ ಶಾಸ್ತ್ರಪುರಾಣವು ||೩|| *****