Day: February 11, 2011

#ಕವಿತೆ

ನಗಬಾರದಮ್ಮ ಲಗುಬಿಗಿ ಸುಮ್ಮನೆ ಬೀಸಮ್ಮ

0

ನಗಬಾರದಮ್ಮ ಲಗುಬಿಗಿ ಸುಮ್ಮನೆ ಬೀಸಮ್ಮ ||ಪ|| ಲಗುಬಿಗಿ ಸುಮ್ಮನೆ ಬೀಸಿ ತಗಿದಾಳೋ ಹಿಟ್ಟಿನ ರಾಶಿ ಬಿಗಿದ ಪುಟ್ಟಿಯೊಳು ಸೋಸಮ್ಮಾ ||೧|| ಚಕ್ರದಿ ಕರೆಕಲ್ಲು ಶುಕ್ರದಿ ಮುಕ್ಕುವ ಕಲ್ಲು ವಕ್ಕರಿಸಿ ಮುಕ್ಕನ್ಹಾಕಮ್ಮಾ ||೨|| ಅಚ್ಚ ನಗಬಾರದು ಬಾಳ ನಗಬಾರದು ನಕ್ಕೋತ ಸುಮ್ಮನೆ ಬೀಸಮ್ಮಾ ||೩|| ಅಸಮ ಗೋದಿಯ ಕಾಳು ಹಸನಾಗಿ ಬೀಸಮ್ಮಾ ದೇಶಕೆ ಶಿಶುನಾಳಧೀಶನ ಭಜಿಸಮ್ಮಾ ||೪|| […]